ಗುರುವಾರ , ನವೆಂಬರ್ 14, 2019
18 °C

`ಜನಪ್ರತಿನಿಧಿಗಳು ಸರ್ವಾಧಿಕಾರಿಗಳಲ್ಲ'

Published:
Updated:

ಪಾವಗಡ: ಜನಪ್ರತಿನಿಧಿಗಳು ಸಾರ್ವಜನಿಕರ ಸೇವಕರೇ ಹೊರತು ಸರ್ವಾಧಿಕಾರಿಗಳಲ್ಲ ಎಂದು ಮಾಜಿ ಶಾಸಕ ತಿಮ್ಮರಾಯಪ್ಪ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಮಂಗಳವಾರ ನಡೆದ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜನಪ್ರತಿನಿಧಿಗಳು ಜನರ ಸೇವೆಗೆ ಸದಾ ಸಿದ್ದರಾಗಿರಬೇಕು. ಜನತೆ ಏಳ್ಗೆಗೆ ಶ್ರಮಿಸಬೇಕು ಎಂದರು.ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ಸಿ.ಅಂಜಿನಪ್ಪ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ತಿಮ್ಮೋರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷ ಶಂಕರರೆಡ್ಡಿ ಮಾತನಾಡಿದರು. ಆರ್ಯವೈಶ್ಯ ಮುಖಂಡರಾದ ಅಶ್ವಥನಾರಾಯಣಶೆಟ್ಟಿ, ಬಿ.ಎಸ್.ಕೆ.ವಿ.ಶ್ರೀನಾಥ್, ಕಮಲ್ ಬಾಬು, ಶ್ರೀನಾಥ್, ಸ್ವಾತಿ ಅನಿಲ್ ಕುಮಾರ್, ಬ್ರೂಕ್ ಬಾಂಡ್ ಸೀನ, ಶ್ರವಣ್ ಗಿಫ್ಟ್ ಕಾರ್ನರ್ ಶ್ರೀನಿವಾಸ್, ಎ.ವಿ.ತಿಮ್ಮರಾಜು, ದವಸಂ ಗೋಪಾಲಕೃಷ್ಣ ಮತ್ತಿತರರು ವಿವಿಧ ಪಕ್ಷಗಳಿಂದ ಜೆಡಿಎಸ್‌ಗೆ ಸೇರ್ಪಡೆಗೊಂಡರು.ಮುಖಂಡರಾದ ಗೋವಿಂದಪ್ಪ, ಎಸ್.ಕೆ.ರೆಡ್ಡಿ, ಸತ್ಯನಾರಾಯಣ ಚೌಧರಿ, ವೆಂಕಟರಾಮರೆಡ್ಡಿ, ಸುರೇಶ್ ಚೌಡರೆಡ್ಡಿ, ರಾಜಗೋಪಾಲ್, ರಾಮಾಂಜಿನರೆಡ್ಡಿ, ಅಕ್ಕಲಪ್ಪ ನಾಯ್ಡು, ಪುರಸಭೆ ಸದಸ್ಯ ವಸಂತ್, ಸುಧಾಕರರೆಡ್ಡಿ, ಮನು, ಇತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)