ಗುರುವಾರ , ಮೇ 13, 2021
39 °C

ಜನಪ್ರತಿನಿಧಿ ಸಮಾಜದ ಧ್ವನಿಯಾಗಲಿ- ಸೊರಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಲ್ಕಿ: ಸಮಾಜದ ಅಸ್ಪೃಶ್ಯತೆಯನ್ನು ದೂರಮಾಡಿ ಸದೃಢವಾಗಿ ಬೆಳೆಯಲು ಪ್ರೇರಣೆಯನ್ನು ನೀಡಿದ ನಾರಾಯಣ ಗುರುಗಳು ಸಮಾಜದ ಶಕ್ತಿಯ ದಾರಿಯನ್ನು ತೋರಿಸಿದವರು, ಸಮಾಜದ ಸಂಘಟನೆಯ ದೃಷ್ಟಿಯಿಂದ ಜನಪ್ರತಿನಿಧಿಗಳು ಧ್ವನಿಯಾಗಬೇಕು. ಸರ್ಕಾರದ ಮತ್ತು ಸ್ವ ಸಮಾಜದ ಕೊಂಡಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಉಡುಪಿ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಸಂಯೋಜನೆಯಲ್ಲಿ ಭಾನುವಾರ ಬಿಲ್ಲವ ಸಮಾಜದ ಜನಪ್ರತಿನಿಧಿಗಳನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸಮಾಜಕ್ಕೆ ಯಾವುದೇ ರೀತಿಯ ಚ್ಯುತಿ ಬಾರದೆ ಗೌರವ ಕಾಪಾಡಿಕೊಂಡು ಕಾರ್ಯ ನಿರ್ವಹಿಸಬೇಕು ಎಂದರು.ಸಚಿವ ವಿನಯಕುಮಾರ್ ಸೊರಕೆ, ಬೆಳ್ತಂಗಡಿ ಶಾಸಕ ವಸಂತ ಬಂಗೇರ, ಕಾರ್ಕಳ ಶಾಸಕ ವಿ.ಸುನಿಲ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು.ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಯದೀಶ್ ಅಮಿನ್ ಕೊಕ್ಕರ್‌ಕಲ್, ಮಹಾಮಂಡಲದ ಉಪಾಧ್ಯಕ್ಷರಾದ ಪಿತಾಂಬರ ಹೆರಾಜೆ, ಪ್ರಧಾನ ಕಾರ್ಯದರ್ಶಿ ಮೋಹನ್‌ದಾಸ್, ಸಮಿತಿಯ ಯು.ನಾರಾಯಣ, ಸುದರ್ಶನ್ ಎಚ್, ಚಂದ್ರಶೇಖರ್ ಸುವರ್ಣ ಸುರತ್ಕಲ್, ಪ್ರಭಾಕರ ಬಂಗೇರ ಕಾರ್ಕಳ, ಗಣೇಶ್ ಎಲ್. ಪೂಜಾರಿ ಹಾಜರಿದ್ದರು.ಪ್ರೊ.ಮೋಹನ್ ಕೋಟ್ಯಾನ್ ಪ್ರಾಸ್ತಾವಿಕ ಮಾತನಾಡಿದರು. ಅಡ್ವೆ ರವೀಂದ್ರ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.