ಜನಪ್ರಿಯತೆಗೆ ಕುತ್ತು ತಂದ ಆರ್ಥಿಕ ಸಂಕಷ್ಟ

ಮಂಗಳವಾರ, ಜೂಲೈ 23, 2019
26 °C

ಜನಪ್ರಿಯತೆಗೆ ಕುತ್ತು ತಂದ ಆರ್ಥಿಕ ಸಂಕಷ್ಟ

Published:
Updated:

ವಾಷಿಂಗ್ಟನ್ (ಪಿಟಿಐ): ಒಸಾಮ ಬಿನ್ ಲಾಡೆನ್ ಹತ್ಯೆ ಬಳಿಕ ಉತ್ತುಂಗದಲ್ಲಿದ್ದ ಅಮರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಜನಪ್ರಿಯತೆಯು ದೇಶ ಎದುರಿಸುತ್ತಿರುವ ಆರ್ಥಿಕ ಸಂಕಷ್ಟದಿಂದಾಗಿ ಕುಸಿತವಾಗಿದೆ ಎಂದು ಅಮೆರಿಕದಾದ್ಯಂತ ನಡೆಸಲಾದ ಸಮೀಕ್ಷೆಯೊಂದು ಹೇಳಿದೆ.`ವಾಷಿಂಗ್ಟನ್ ಪೋಸ್ಟ್- ಎಬಿಸಿ~ ನಡೆಸಿದ ಈ ಸಮೀಕ್ಷೆಯಲ್ಲಿ ಪ್ರತಿ ಇಬ್ಬರಲ್ಲಿ ಒಬ್ಬರು ದೇಶದ ಅರ್ಥಿಕ ಸ್ಥಿತಿಗತಿ ಕುರಿತು ಕಳವಳ ವ್ಯಕ್ತಪಡಿಸಿದರೆ, 10ರಲ್ಲಿ ಒಂಬತ್ತು ಜನರು ಈ ಬಗ್ಗೆ ನಕಾರಾತ್ಮಕ ನಿಲುವು ತಳೆದಿದ್ದಾರೆ.ಈ ಮಧ್ಯೆ ಎರಡನೇ ಅವಧಿಗೂ ಅಧಿಕಾರದಲ್ಲಿ ಮುಂದುವರಿಯಲು ಇಚ್ಛಿಸಿರುವ ಒಬಾಮ ಅವರಿಗೆ ದೇಶ ಎದುರಿಸುತ್ತಿರುವ ಆರ್ಥಿಕ ಸಂಕಷ್ಟ ನುಂಗಲಾರದ ತುತ್ತಾಗಿದೆ.2012ರ ಅಧ್ಯಕ್ಷೀಯ ಚುನುವಾಣೆಯಲ್ಲಿ ಒಬಾಮ ಅವರ ಪ್ರತಿಸ್ಪರ್ಧಿಯಾಗಿರುವ ಮಸ್ಸಾಚುಸೆಟ್ಸ್ ಪ್ರಾಂತ್ಯದ ಮಾಜಿ ಗೌರ್ನರ್ ಮಿಟ್ ರೋಮ್ನಿ, ನಿರುದ್ಯೋಗ ಸಮಸ್ಯೆ ಮತ್ತು ಅರ್ಥಿಕ ಸಂಕಷ್ಟವನ್ನೇ ಪ್ರಮುಖ ಚುನಾವಣಾ ವಿಷಯವನ್ನಾಗಿ ಇಟ್ಟುಕೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇದು ಒಬಾಮ ಅವರ ಜನಪ್ರಿಯತೆಯನ್ನು ಕುಸಿಯುವಂತೆ ಮಾಡುತ್ತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry