ಭಾನುವಾರ, ಅಕ್ಟೋಬರ್ 20, 2019
27 °C

ಜನಪ್ರಿಯತೆ ಗೀಳು ಬೇಡ- ನ್ಯಾ.ಕಪಾಡಿಯ

Published:
Updated:

ಮುಂಬೈ (ಪಿಟಿಐ): ರಾಜಕೀಯ ಮತ್ತು ಜನಪ್ರಿಯತೆಯ ಗೀಳಿನಿಂದ ನ್ಯಾಯಾಂಗ ಸ್ವತಂತ್ರವಾಗಿ ಇರಬೇಕು. ನ್ಯಾಯಮೂರ್ತಿಗಳು ಬಹುಮತದ ಅಭಿಪ್ರಾಯಕ್ಕೆ ಮಣಿಯದೆ ಕಾನೂನಿನ ಪ್ರಕಾರ ನ್ಯಾಯದಾನ ಮಾಡಬೇಕು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎಚ್.ಕಪಾಡಿಯ ಪ್ರತಿಪಾದಿಸಿದರು.ನಾನಿ ಪಾಲ್ಕಿವಾಲಾ ಸ್ಮಾರಕ ಟ್ರ ಸ್ಟ್‌ನ 9ನೇ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದ ಅವರು, ನ್ಯಾಯಮೂರ್ತಿಗಳು ಜನಪ್ರಿಯತೆಯ ಹಪಾಹಪಿಯಿಂದ ದೂರ ಉಳಿಯದಿದ್ದರೆ ಅವರು ಹೊರಡಿಸುವ ಆದೇಶಗಳು ಟೀಕೆಗೆ ಒಳಗಾಗುವ ಸಂದರ್ಭಗಳು ಎದುರಾಗುತ್ತವೆ ಎಂದು ಎಚ್ಚರಿಕೆ ನೀಡಿದರು.

Post Comments (+)