ಶುಕ್ರವಾರ, ಡಿಸೆಂಬರ್ 13, 2019
20 °C

ಜನಮನಗೆದ್ದ ಕನ್ನಡ ಸಾಹಿತ್ಯ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನಮನಗೆದ್ದ ಕನ್ನಡ ಸಾಹಿತ್ಯ ಸಮ್ಮೇಳನ

ಮುಳಬಾಗಲು: ತಾಲ್ಲೂಕಿನಲ್ಲಿ ಬುಧ ವಾರ ಮುಕ್ತಾಯವಾದ ಪ್ರಥಮ ತಾಲ್ಲೂಕು ಸಾಹಿತ್ಯ ಸಮ್ಮೇಳನವು ಜನಮನಗೆದ್ದಿತು.  ತೆಲುಗು ಭಾಷಿಕರು ಕನ್ನಡ ಸಂಭ್ರಮದ ಜಾತ್ರೆಯಲ್ಲಿ ಪಾಲ್ಗೊಂಡು ಕನ್ನಡ ಅಭಿಮಾನ ವ್ಯಕ್ತಪಡಿಸಿದರು.

ಬುಧವಾರ ರಾತ್ರಿ ಸುಧಾ ಬರಗೂರು ಮತ್ತು ಸಂಗಡಿಗರ ನಡೆಸಿಕೊಟ್ಟ ಹಾಸ್ಯೋತ್ಸವದಲ್ಲಿ ಜಮಾಯಿಸಿದ್ದ ಜನರ ಸಂಖ್ಯೆಯೇ ಸಾಕ್ಷಿಯಾಗಿತ್ತು.ಸಮಾರೋಪದಲ್ಲಿ ವಿವಿಧ ರಂಗ ಗಳಲ್ಲಿ ಶ್ರಮಿಸಿದ 12  ಸಾಧಕರನ್ನು ಸತ್ಕ ರಿಸಲಾಯಿತು. ಡಿವೈಎಸ್‌ಪಿ ವಿ.ಗೋವಿಂ ದಯ್ಯ, ಎಸ್.ಎಂ.ವೆಂಕಟ ರಾಮಯ್ಯ (ಶಿಕ್ಷಣ), ಡಾ.ಜಿ.ಶಿವಪ್ಪ (ಸಾಹಿತ್ಯ ), ಡಾ.ಎಂ.ಆರ್.ರಂಗರಾವ್ (ವೈದ್ಯ ಕೀಯ),ಡಾ.ಎಂ.ಎನ್.  ಮೂರ್ತಿ (ಉನ್ನತ ಶಿಕ್ಷಣ), ಹನು ಮಂತರೆಡ್ಡಿ (ಕೃಷಿ), ಮಂಜುಕನ್ನಿಕಾ   (ಸಾಹಿತ್ಯ),ಸುಲೇಮಾನ್‌ಖಾನ್ (ಗಾಯನ), ವಿ.ವಿ.ವೆಂಕಟೇ ಶಪ್ಪ,  ಚಿನ್ನಮಾಯಿ (ಸಮಾಜ ಸೇವೆ), ನಿವೃತ್ತ ನೌಕರ ರಾಮಚಂದ್ರಪ್ಪ ಸನ್ಮಾನಿಸಲಾಯಿತು.ಶಾಸಕ ಅಮರೇಶ್, ಕನ್ನಡ ಶಾಲೆಗಳ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಸಮ್ಮೇಳನಾಧ್ಯಕ್ಷ ಕೆ.ಆರ್.ನರ ಸಿಂಹನ್ ಮಾತನಾಡಿ  ತಾಲ್ಲೂಕಿನಲ್ಲಿ ವೈಷ್ಣವ, ಶೈವ, ಜೈನ, ವೀರಶೈವ ಮತ್ತು ಬೌದ್ಧ, ಇಸ್ಲಾಂ, ಕ್ರೈಸ್ತ ಧರ್ಮಗಳು ತಮ್ಮ ಅಸ್ತಿತ್ವ ರೂಪಿಸಿಕೊಂಡಿದೆ. ಬೌದ್ಧ ಧರ್ಮ ಹೊರತಾಗಿ ಬೇರೆಲ್ಲ ಪಂಥಗಳ ಕುರಿತು ದಾಖಲೆಗಳು ಸಿಕ್ಕಿದೆ. ಆದರೆ ಬೌದ್ಧ ಧರ್ಮಕ್ಕೆ ಕುರಿತಂತೆ ಇನ್ನು ವಿಶೇಷ ಅಧ್ಯಯನ ನಡೆಯ ಬೇಕಿದೆ ಎಂದು ಅಭಿಪ್ರಾಯ ಪಟ್ಟರು.ಯು.ವಿ.ನಾರಾಯಣಾಚಾರ್, ಸುಬ್ರಮಣಿ, ತಾಲ್ಲೂಕು ಕುರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎನ್.ವೆಂಕಟೇಶ ಗೌಡ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕನ್ನಡಭಟ ವೆಂಕ ಟಪ್ಪ, ಮಾಜಿ ಅಧ್ಯಕ್ಷ ಎಂ.ವಿ.ಜನಾ ರ್ಧನ್, ಬಾಲರಾಜು, ಕನ್ನಡಮಿತ್ರ ವೆಂಕಟಪ್ಪ, ಎ.ಅಪ್ಪಾಜಿ ಗೌಡ ಮತ್ತಿತರರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)