ಜನಮನದಲ್ಲಿ ಪ್ರಭುದೇವರು ನಿರಂತರ

ಶುಕ್ರವಾರ, ಜೂಲೈ 19, 2019
24 °C

ಜನಮನದಲ್ಲಿ ಪ್ರಭುದೇವರು ನಿರಂತರ

Published:
Updated:

ನರಗುಂದ: `ಪ್ರಭುಲಿಂಗರು ತಮ್ಮದೇ ಆದ ವಿಶಿಷ್ಟ ಜೀವನದ ಮೂಲಕ ಇಂದಿಗೂ ಜನಮನದಲ್ಲಿ ಉಳಿದಿದ್ದಾರೆ. ಅದಕ್ಕೆ ಅವರ ಜೀವನ ಶೈಲಿ ಹಾಗೂ ಅವರ ಪವಾಡಗಳೇ ಸಾಕ್ಷಿಯಾಗಿವೆ. ಇಂತಹ ಮಹಾತ್ಮರ  ಬಗ್ಗೆ ಪ್ರವಚನ ಕೇಳಿ ಅದನ್ನು ಪಚನ ಮಾಡಿಕೊಂಡು ಸಜ್ಜನರಾಗಿ ಸಮಾಜಕ್ಕೆ ಕೊಡುಗೆಯಾಗುವಂತೆ ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಲಹೆ ನೀಡಿದರು.ಪಟ್ಟಣದ ಪತ್ರಿವನಮಠದಲ್ಲಿ ಶರಣಬಸವದೇವರ ಪಟ್ಟಾಧಿಕಾರ  ಮಹೋತ್ಸವದ ಅಂಗವಾಗಿ ಈಚೆಗೆ ಹಮ್ಮಿಕೊಂಡ ಪ್ರಭುಲಿಂಗ ಲೀಲೆ ಪ್ರವಚನದ ಕಾರ‌್ಯಕ್ರಮದ ಆರಂಭೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ  ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಪ್ರಭುಲಿಂಗ ಲೀಲೆ ಪ್ರವಚನವನ್ನು ಮೂರುಸಾವಿರಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ನಡೆಸಿಕೊಟ್ಟರು.ಸಮಾರಂಭವನ್ನು  ಕಿಲ್ಲಾ ತೊರಗಲ್ಲನ ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ‌್ಯರು ಉದ್ಘಾಟಿಸಿದರು.

ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಮುನವಳ್ಳಿಯ ಮುರಘೇಂದ್ರ ಸ್ವಾಮೀಜಿ, ಅವರಾದಿ ಫಲಹಾರೇಶ್ವರ ಮಠದ ಮೃತ್ಯುಂಜಯ ಸ್ವಾಮೀಜಿ, ಪಂಚಗ್ರಹಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ‌್ಯರು, ಭೈರನಹಟ್ಟಿಯ ಶಾಂತಲಿಂಗ ಸ್ವಾಮೀಜಿ, ಸೊರಟೂರಿನ ಫಕಿರೇಶ್ವರ ಸ್ವಾಮೀಜಿ, ಅಣ್ಣಿಗೇರಿ ದಾಸೋಹಮಠದ ಶಿವಕುಮಾರ ಸ್ವಾಮೀಜಿ, ಶರಣಬಸವದೇವರು, ಮಾಜಿ ಸಚಿವ ಬಿ.ಆರ್.ಯಾವಗಲ್  ಪಟ್ಟಾಧಿಕಾರ ಮಹೋತ್ಸವ ಸಮಿತಿ ಕಾರ‌್ಯದರ್ಶಿ ಪ್ರಕಾಶ ಪಟ್ಟಣಶೆಟ್ಟಿ, ಖಜಾಂಚಿ ಅಜ್ಜು ಪಾಟೀಲ, ಅಶೋಕ ಪತ್ರಿ, ವೆಂಕಟರಾವ್ ಬೊಯಟೆ, ಬಾಬನ್ನಿ ಜಾಧವ, ವೀರಬಸಪ್ಪ ಹೂಗಾರ ಮತ್ತಿತರರು ಹಾಜರಿದ್ದರು. ಈಶ್ವರ ಮಠಪತಿ ನಿರೂಪಿಸಿ,ವಂದಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry