ಜನಮನ ಬೆಸೆದ ಲೋಕಕಲಾ ಯಾತ್ರೆ

7

ಜನಮನ ಬೆಸೆದ ಲೋಕಕಲಾ ಯಾತ್ರೆ

Published:
Updated:

ಗುಲ್ಬರ್ಗ: ದೇಶ ಭಾಷೆಗಳ ಹಲವಾರು ಭಾವ ಒಂದೆ ಎಂಬಂತೆ ಲೋಕಕಲಾ ಯಾತ್ರೆಯಂತಹ ಕಾರ್ಯಕ್ರಮಗಳು ಜನಮನ ಬೆಸೆಯುತ್ತವೆ ಎಂದು ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಹೇಳಿದರು.ಸಂಸ್ಕೃತಿ ಸಚಿವಾಲಯ ಭಾರತ ಸರ್ಕಾರ ದಕ್ಷಿಣ ವಿಭಾಗ ಸಾಂಸ್ಕೃತಿಕ ಕೇಂದ್ರ, ನಾಗಪೂರ ಹಾಗೂ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು, ಸಂಸ್ಕೃತಿ ಲೋಕದಲ್ಲಿ ಲೋಕ ಕಲಾ ಯಾತ್ರೆ, ಜನಪದ ನೃತ್ಯೋತ್ಸವ ಕಾರ್ಯಕ್ರಮ ನಾವದಗಿಯ ದೇಸಿ ಕೇಂದ್ರಿಯ ವಸತಿ ಶಾಲೆಯಲ್ಲಿ ಆಯೋಜಿಸಿದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 

ಕರ್ನಾಟಕದ ಡೊಳ್ಳು ಕುಣಿತ, ವಿವಿಧ ಆಕರ್ಷಕ ವೇಷ ಭೂಷಣಗಳಲ್ಲಿ ಪ್ರದರ್ಶನಗೊಂಡರೆ ಮಂಗಳೂರು ಭಾಗದ ಹಾಲಕ್ಕಿ ಗೌಡರ ಸುಗ್ಗಿ ಕುಣಿತ, ರಾಜಸ್ಥಾನ ಕಲಾ ತಂಡದ ಮಂಗನಿಯಾರ್, ಕಾಲುಬೇಲಿಯಾ ಹಾಗೂ ಭವಾಯಿಯಾ ನೃತ್ಯಗಳು ಪ್ರೇಕ್ಷಕರ ಮನ ಸೆಲೆದು ನೂತನ ಲೋಕಕ್ಕೆ ಕರೆದೊಯ್ಯುವಂತೆ ಭಾಸವಾಗುವಂತಿದ್ದವು.ಹದಿನೈದು ಮೀಟರ್ ಬಟ್ಟೆಯಲ್ಲಿ ಹೊಲಿದ ಬಣ್ಣದ ಲಂಗ ತೊಟ್ಟು ಕುಣಿಯುವುದು ಗೊಂಬೆಗಳು ಕುಣಿಯುವಂತೆ ತೊರುತ್ತಿತ್ತು. ಭವಾಯಿ ನೃತ್ಯದಲ್ಲಿ ಕೊಡಗಳ ಮೇಲೆ ಕೊಡಗಳು ಬಾಟಲಿಗಳ ಮೇಲೆ ಬಾಟಲಿಗಳು, ತಲೆಯ ಮೇಲೆ ಇಟ್ಟುಕೊಂಡು ನೃತ್ಯ ಮಾಡುವುದು, ಇವುಗಳನ್ನು ತಲೆಯ ಮೇಲೆ ಹೊತ್ತುಕೊಂಡು ತಟ್ಟಿಯ ಮೇಲೆ ಖಡ್ಗಗಳ ಮೇಲೆ ಕುಣಿಯುವಾಗ ಕೊಡಗಳು, ಬಾಟಲಿಗಳು, ತಲೆಯ ಮೆಲಿಂದ ಬೀಳದಂತೆ ತನ್ನ ಆಯ ತಪ್ಪದಂತೆ ಮಾಡುವ ನೃತ್ಯ ಜನರಿಗೆ ಸೋಜಿಗ ಎನಿಸುತಿತ್ತು.ಮಹಾರಾಷ್ಟ್ರದ ಪವಾಡ, ಭಾರುಡ ಹಾಗೂ ಲಾವಾಣಿ ನೃತ್ಯಗಳ ಅವರ ವೇಷ, ಭೂಷಣ ಹಾಗೂ ಕುಣಿತದ ಶೈಲಿ ಮಹಾರಾಷ್ಟ್ರದ ಸಂಸ್ಕೃತಿ ಬಿಂಬಿಸುವಂತಿತ್ತು. ಆಂಧ್ರ ಪ್ರದೇಶದ ದಂಗಾಲು ನೃತ್ಯ, ಓರಿಸ್ಸಾ ತಂಡದವರ ಶಂಕನಾದ ಹಾಗೂ ಕುಣಿತ ವಿವಿಧ ಮಂದಿರ ಹಾಗೂ ದೇವರ ಭಂಗಿಗಳಲ್ಲಿ ನಿಲ್ಲುವ ಅವರ ತಾಲೀಮು ಓಂಕಾರ ಭಾವದಲ್ಲಿ ಮುಳುಗಿಸುತ್ತಿತ್ತು.ಮಾಜಿ ಶಾಸಕ ಸುಭಾಷ ಕಲ್ಲೂರ, ಗೌರಿಶಂಕರ ಸ್ವಾಮೀಜಿ, ಡಾ.ರಾಜೇಂದ್ರ ಯರನಾಳೆ, ಎಂ.ಬಿ.ಅಂಬಲಗಿ, ಸಿದ್ದರಾಮಯ್ಯ ಮಠ, ವಾಣೀಶ್ರಿ ಯರನಾಳೆ, ನಾಗಪುರದ ಗೋಪಾಲ ಬೇತಾವರಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry