ಭಾನುವಾರ, ಮಾರ್ಚ್ 7, 2021
22 °C
ಹೆಬ್ರಿ: ಕಾಂಗ್ರೆಸ್ ಸಮಾವೇಶ

ಜನರನ್ನು ಒಕ್ಕಲೆಬ್ಬಿಸುವುದಿಲ್ಲ; ಆತಂಕ ಬೇಡ: ಹೆಗ್ಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನರನ್ನು ಒಕ್ಕಲೆಬ್ಬಿಸುವುದಿಲ್ಲ; ಆತಂಕ ಬೇಡ: ಹೆಗ್ಡೆ

ಹೆಬ್ರಿ: ‘ರಾಜ್ಯದ ಹಿಂದಿನ ಬಿಜೆಪಿ ಸರ್ಕಾರ ಸುಪ್ರೀಂ ಕೋರ್ಟಿಗೆ ತಪ್ಪು ಮಾಹಿತಿ ನೀಡಿ ಜನ ವಿರೋಧಿ ನೀತಿ ಅನುಸರಿಸಿದ್ದರಿಂದಲೇ ಇಂದು ಜನತೆ ಒಕ್ಕಲೆಬ್ಬಿಸುವ ಭೀತಿಗೆ ಒಳಗಾಗುವಂತಾಗಿದೆ. ಬಿಜೆಪಿಗೆ ಜನತೆಗೆ ತಪ್ಪು ಮಾಹಿತಿ ನೀಡುವುದು ದಾರಿ ತಪ್ಪಿಸುವುದು ಬಿಜೆಪಿಯ ಕೆಲಸ ಜನರು ಎಂದೂ ಆತಂಕ ಪಡುವ ಪ್ರಶ್ನೆಯೇ ಇಲ್ಲ ಮುಖ್ಯಮಂತ್ರಿಗಳು ಒಕ್ಕಲೆಬ್ಬಿಸು­ವುದಿಲ್ಲ ಎಂದು ಘೋಷಿಸಿದ್ದಾರೆ’ ಎಂದು ಲೋಕಸಭಾ ಸದಸ್ಯ ಕೆ.ಜಯಪ್ರಕಾಶ ಹೆಗ್ಡೆ ಹೇಳಿದರು.‘ಬಿಜೆಪಿಗೆ ಚುನಾವಣೆ ಬಂದಾಗ ಸುಳ್ಳು ಹೇಳಿಕೆ ನೀಡುವ ಪೃವೃತ್ತಿ ಬೆಳೆದು ಬಂದಿದೆ ಅಭಿವೃದ್ದಿ  ಮಾಡುವುದು ಅವರ ಕೆಲಸ ಅಲ್ಲ ಕಾಂಗ್ರೆಸ್ ಮಾಡಿದ್ದನ್ನು ನಾವೇ ಮಾಡಿದ್ದು ಎಂದು ತಟ್ಟಿಕೊಳ್ಳು­ವು­ದರಲ್ಲಿ ನಿಸ್ಸೀಮರು’ ಎಂದ ಜಯಪ್ರಕಾಶ ಹೆಗ್ಡೆ, ‘ರಾಜ್ಯ ಹಿಂದಿನ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಹುಲಿ ಯೋಜನೆ ಕೇಳಿದ್ದರಿಂದ ಕೇಂದ್ರ ಸರ್ಕಾರ ನೀಡಲು ಒಪ್ಪಿದೆ ಆದರೂ ಕಾಂಗ್ರೆಸ್ ಮೇಲೆ ಆರೋಪ ಮಾಡಿ ಚುನಾವಣೆಗೆ ಅಸ್ತ್ರ ಮಾಡಿದೆ’ ಎಂದರು.‘ಕಸ್ತೂರಿರಂಗನ್ ವರದಿ ವಿಚಾರದಲ್ಲಿ ಚರ್ಚೆ ನಡೆಸಲು ಕೇಂದ್ರ ಪರಿಸರ ಸಚಿವ ವೀರಪ್ಪ ಮೊಯಿಲಿಯವರು ಸರ್ಕಾರಕ್ಕೆ ಸೂಚಿಸಿದ್ದು ಸಮಗ್ರವಾಗಿ ಒಳಿತು ಕೆಡುಕುಗಳ ಬಗ್ಗೆ ಚರ್ಚೆ ನಡೆಯಬೇಕಿದೆ’ ಎಂದರು. ‘ಜನಸಾಮ್ಯಾರಿಗೂ ಅನು­ಕೂಲ­ವಾಗುವ ಸಾಕಷ್ಟು ಯೋಜನೆಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಜನತೆಗೆ ನೀಡಿದೆ’ ಎಂದರು.ಕಾಂಗ್ರೆಸ್ ಹಿರಿಯ ಮುಖಂಡ ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಮಾತನಾಡಿ, ‘ಬಡವರ ಪಾಲಿನ ವರವಾದ ಬಿಪಿಎಲ್ ಕಾರ್ಡ್‌ ಸೇರಿ ನೂರಾರು ಜನಪರವಾದ ಮಹತ್ವದ ಯೋಜನೆ­ಯನ್ನು ಜನರಿಗೆ ನೀಡಿದ ಸಂತೃಪ್ತಿಯ ಜತೆ ಅತ್ಯುತ್ತಮ ಸಂಸದ ಜನನಾಯಕ ಜಯಪ್ರಕಾಶ ಹೆಗ್ಡೆ ಪರವಾಗಿ ಮತಕೇಳಲು ಹೆಮ್ಮೆ ಎನಿಸುತ್ತದೆ’ ಎಂದರು.ಹೆಬ್ರಿ ತಾಲ್ಲೂಕನ್ನು ಶೀಘ್ರ ಘೋಷಿಸುವುದು ಸೇರಿ ವಿವಿಧ ಅಭಿವೃದ್ದಿ ಕಾಮಾಗಾರಿಗಳನ್ನು ಕೂಡಲೇ ನಡೆಸುವಂತೆ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮನವಿ ಮಾಡಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಾಸಕ ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್,ಯುವ ಕಾಂಗ್ರೆಸ್ ಮುಖಂಡ ಅಮೃತ ಶೆಣೈ,ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಶಶಿಧರ ಶೆಟ್ಟಿ,ಜಿಲ್ಲಾ ಪಂಚಾಯಿತಿ ಸದಸ್ಯ ಮಂಜುನಾಥ ಪೂಜಾರಿ,ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ್ ಆಚಾರ್ಯ,ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಸುಭೋದ ರಾವ್,ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸುಜೀತ್ ಕುಮಾರ್ ಶೆಟ್ಟಿ,ವಿಶಾಲಾಕ್ಷಿ ಶೆಟ್ಟಿ,ಹೆಬ್ರಿ ಪಂಚಾಯಿತಿ ಅಧ್ಯಕ್ಷೆ ಸುಮಾ ನವೀನ್ ಅಡ್ಯಂತಾಯ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ವೆರೋನಿಕಾ ಕರ್ನೇಲಿಯೋ,ಕಾರ್ಯದರ್ಶಿ ರೋಶ್ನಿ ಓಲಿವೇರಾ, ಬ್ಲಾಕ್  ಕಾಂಗ್ರೆಸ್ ಕಾರ್ಯದರ್ಶಿ ನವೀನ ಅಡ್ಯಂತಾಯ, ಸಂತೋಷ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಸೀನಾ ಪೂಜಾರಿ,ಪಕ್ಷದ ವಿವಿಧ ಘಟಕಗಳ ಪ್ರಮುಖರಾದ ಶೇಖರ ಮಡಿವಾಳ, ರಾಘವ ದೇವಾಡಿಗ, ಡಾ.ಸಂತೋಷ ಕುಮಾರ್ ಶೆಟ್ಟಿ,ಜಯಕರ ಪೂಜಾರಿ, ರಮೇಶ ಆಚಾರ್ಯ, ಗುಂಡಾಳ ಸದಾಶಿವ ಶೆಟ್ಟಿ,ರಾಘವ ಕುಕ್ಕುಜೆ, ಪಂಚಾಯಿತಿ ಅಧ್ಯಕ್ಷರಾದ ಕುಚ್ಚೂರಿನ ಗೀತಾ ನಾಯ್ಕ್,ಮುದ್ರಾಡಿಯ ಜಯಲಕ್ಷ್ಮಿ, ನಾಡ್ಪಾಲಿನ ಲಕ್ಷ್ಮೀ ದಯಾನಂದ್, ಕಡ್ತಲದ ಶಶಿಕಲಾ, ಅಜೆಕಾರಿನ ಹೀರಾ ಶೆಟ್ಟಿ,ಪಕ್ಷದ ವಿವಿಧ ಘಟಕದ ಪ್ರಮುಖರು, ಮುಖಂಡರು, ಜನಪ್ರತಿನಿಧಿಗಳು ಇದ್ದರು.ನವೀನ್ ಅಡ್ಯಂತಾಯ ಕಾರ್ಯಕ್ರಮ ನಿರೂಪಿಸಿ ನೀರೆ ಕೃಷ್ಣ ಶೆಟ್ಟಿ ಸ್ವಾಗತಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.