ಶನಿವಾರ, ಮೇ 15, 2021
25 °C
ಅಂಬಿಗರ ಚೌಡಯ್ಯನವರ ಪೀಠ ಸ್ಥಾಪನೆ

`ಜನರಲ್ಲಿ ಅರಿವು ಮೂಡಿಸಬೇಕು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಣೆಬೆನ್ನೂರು: `ಕಾರಹುಣ್ಣಿಮೆ ದಿನದಂದೇ ನಿಜಶರಣ ಅಂಬಿಗರ ಚೌಡಯ್ಯನವರ ಹುಟ್ಟಿದ್ದು. ಅಂಬಿಗರ ಚೌಡಯ್ಯನವರ ಪೀಠ ಸ್ಥಾಪನೆ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಬೇಕು' ಎಂದು ನರಸಿಪುರದ ನಿಜಶರಣ ಅಂಬಿಗರ ಚೌಡಯ್ಯನವರ ಪೀಠದ ಶಾಂತಮುನಿ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಚೌಡಯ್ಯದಾನಪುರ ಸಮೀಪ ನರಸಿಪುರ ನಿಜ ಶರಣ ಅಂಬಿಗರ ಚೌಡಯ್ಯ ಅವರ 12ನೇ ಶಿವಾನುಭವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಹಾವನೂರು ದಳವಾಯಿ ಮಠದ ಸದಾಶಿವ ಸ್ವಾಮೀಜಿ ಅನ್ನಸಂತರ್ಪಣೆಗೆ ಚಾಲನೆ ನೀಡಿದರು. ಭದ್ರಾವತಿಯ ಉದಯಕುಮಾರ ಮಾತನಾಡಿ, ಶಿಕ್ಷಣದಿಂದ ಸಮಾಜ ಅಭಿವೃದ್ಧಿ ಸಾಧ್ಯ, ಸಮಾಜದ ಎಲ್ಲ ಬಡ ಜನತೆಗೆ ಶಿಕ್ಷಣ ದೊರಕಿಸಲು ಶ್ರೀಮಠದ ಜೊತೆಗೆ ಭಕ್ತರು ಸಂಪರ್ಕವಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.ನೂರಾರು ಸುಮಂಗಲೆಯರು ತುಂಗಭದ್ರಾ ನದಿಯಲ್ಲಿ ಬೆಳಿಗ್ಗೆ ಗಂಗಾಪೂಜೆ ನೆರವೇರಿಸಿದರು. ನಂತರ ಸಕಲ ವಾದ್ಯಗಳೊಂದಿಗೆ ಗುರುಪೀಠದ ವರೆಗೂ ಕುಂಭಗಳನ್ನು ಮೆರವಣಿಗೆ ಮೂಲಕ ಹೊತ್ತು ತಂದು ಭಕ್ತಿಯನ್ನು ಮೆರೆದರು. ಮೆರವಣಿಗೆಯುದ್ದಕ್ಕೂ ಮಹಿಳೆಯೆರು ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳನ್ನು ಪಠಣೆ ಮಾಡಿದರು.ಹೊನ್ನಪ್ಪ ತಿಮ್ಮೇನಹಳ್ಳಿ ವಕೀಲರ ಅನ್ನಸಂತರ್ಪಣೆ ನಡೆಸಿಕೊಟ್ಟರು. ಕೆ.ಎಸ್. ನೀಲಪ್ಪನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ರವಿಕುಮಾರ, ಆರ್.ಎಚ್.ಐರಣಿ,  ಚಿತ್ರಶೇಕರ ತಿಮ್ಮೇನಹಳ್ಳಿ, ಹಾಲೇಶ ಮಾಕನೂರು, ನಾಗಪ ನಿಟ್ಟೂರು, ಭೀಮಪ್ಪ ನಿಟ್ಟೂರ, ಸುರೇಶ ಹಾವನೂರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.