ಭಾನುವಾರ, ನವೆಂಬರ್ 17, 2019
28 °C

ಜನರಿಗೆ ಅಭಿವೃದ್ಧಿ ಕಾರ್ಯಗಳ ಅರಿವಿದೆ: ಹಾಲಾಡಿ

Published:
Updated:

ಕುಂದಾಪುರ: ಟೀಕಿಸುವ ಮಾತಿಗೆ ಕಿವಿಗೊಡುವುದರಲ್ಲಿ ಅರ್ಥವಿಲ್ಲ. ಮೂರು ಬಾರಿ ಶಾಸಕನಾಗಿದ್ದಾಗ ಜನಪರ ಸಮಸ್ಯೆಗಳ ಕುರಿತು ಸದನದಲ್ಲಿ ಮಾತನಾಡಿದ್ದೇನೆ. ನನ್ನ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಕ್ಷೇತ್ರದ ಜನರಿಗೆ ಅರಿವಿದೆ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.ಭಾನುವಾರ ನಗರದ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ನಡೆದ ``ನಮಗಾಗಿ ನೀವು ನಿಮ್ಮಂದಿಗೆ ನಾವು'' ಕುರಿತ ಅಭಿಮಾನಿಗಳ ಹಾಗೂ ಹಿತೈಷಿಗಳ ಸಮ್ಮಿಲನ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನನಗೆ ನನ್ನ ಅಭಿಮಾನಿಗಳು, ಹಿತೈಷಿಗಳು ಮತ್ತು ಮತದಾರರೆ ಕಾರ್ಯಕರ್ತರು. ಸಾಮಾಜಿಕ ಜೀವನದಲ್ಲಿ ಜಾತಿ-ಬೇಧದ ಕೆಲಸ ಮಾಡಿಲ್ಲ. ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿ ಕ್ಷೇತ್ರದ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವಲ್ಲಿ ಜವಾಬ್ದಾರಿ ಯುತ ಶಾಸಕನಾಗಿ ಕರ್ತವ್ಯ ನಿರ್ವಹಿಸಿರುವುದರಿಂದ ಕ್ಷೇತ್ರದ ಹೆಚ್ಚಿನ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ನನ್ನೊಡನೆ ಗುರುತಿಸಿಕೊಂಡಿದ್ದಾರೆ. ಪ್ರತಿಫಲಾಪೇಕ್ಷೆ ಇಲ್ಲದ ಅವರ ತ್ಯಾಗ ಮನೋ ಭಾವನೆಗಳೇ ನನಗೆ ಶ್ರೀರಕ್ಷೆ ಎಂದರು.ಪಂಚಾಯತ್‌ರಾಜ್ ತಜ್ಞ ಟಿ. ಬಾಲಚಂದ್ರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಗಣಪತಿ ಟಿ. ಶ್ರೀಯಾನ್, ಪ್ರಕಾಶ್ ಟಿ. ಮೆಂಡನ್, ತಾಲ್ಲೂಕು ಪಂಚಾಯಿತಿ ಸದಸ್ಯ ಮಂಜು ಬಿಲ್ಲವ,  ಕೊಂಕಣ ಖಾರ್ವಿ ಸಭಾದ ಅಧ್ಯಕ್ಷ ಕೆ.ಬಿ.ಖಾರ್ವಿ ಮಾತನಾಡಿದರು.ಕುಂದಾಪುರ ಜೆಡಿಎಸ್ ಮುಖಂಡ ಸಬ್ಲಾಡಿ ಮಂಜಯ್ಯ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೀಪಿಕಾ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ದೀನಪಾಲ್ ಶೆಟ್ಟಿ , ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸುನೀತಾ ರಾಜರಾಂ, ಜ್ಯೋತಿ ಶೆಟ್ಟಿ, ರಶ್ವಥ್ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯ ರಾದ ಪೂರ್ಣಿಮಾ ಪೂಜಾರಿ ಬಸ್ರೂರು, ರಮೇಶ್ ಶೆಟ್ಟಿ ಮೊಳಹಳ್ಳಿ, ಪ್ರದೀಪ್ ಶೆಟ್ಟಿ ಬಿದ್ಕಲ್‌ಕಟ್ಟೆ, ನವೀನಚಂದ್ರ ಶೆಟ್ಟಿ, ಲಕ್ಷಣ ಬಿಜೂರು, ನಾಗೇಶ್, ಪಾರ್ವತಿ, ಭಾಸ್ಕರ ಬಿಲ್ಲವ ಕೋಣಿ, ದೇವಕಿ ಶೆಟ್ಟಿ , ಪುರಸಭಾ ಸದಸ್ಯರಾದ ವಿಠಲ ಕುಂದರ್, ಸಿಸಿಲಿ ಕೋಟ್ಯಾನ್, ರಾಘವೇಂದ್ರ ದೇವಾಡಿಗ, ನಾಗರಾಜ್ ಕೆ,  ಉದಯ ಮೆಂಡನ್, ವಿಜಯ ಎಸ್. ಪೂಜಾರಿ, ಗೀತಾ ಇತತರು ಇದ್ದರು.

ಪ್ರತಿಕ್ರಿಯಿಸಿ (+)