ಜನರಿಗೆ ನ್ಯಾಯ ಒದಗಿಸಲು ಶ್ರಮಿಸಿ

7

ಜನರಿಗೆ ನ್ಯಾಯ ಒದಗಿಸಲು ಶ್ರಮಿಸಿ

Published:
Updated:

ಶಿಡ್ಲಘಟ್ಟ: ನ್ಯಾಯದಾನ ವ್ಯವಸ್ಥೆಯಲ್ಲಿ ವಕೀಲರು ಮತ್ತು ನ್ಯಾಯಾಧೀಶರ ಸಂಬಂಧ ಗುರುಶಿಷ್ಯರ ಸಂಬಂಧವಿದ್ದಂತೆ ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ತಿಳಿಸಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಸೋಮವಾರ ನಡೆದ ನೂತನ ಪ್ರಧಾನ ಸಿವಿಲ್ ನ್ಯಾಯಾಧೀಶ ಎಸ್.ಮಹೇಶ್ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ವಿಜಯ ಅರಸ್ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿ, ಅವರು, `ಜನರಿಗೆ ನ್ಯಾಯ ಒದಗಿಸುವುದು ವಕೀಲರ ಮತ್ತು ನ್ಯಾಯಾಧೀಶರ ಮುಖ್ಯ ಉದ್ದೇಶ~ ಎಂದರು.ವಯಸ್ಸಿಗಿಂತ ಜ್ಞಾನವಷ್ಟೇ ಇಲ್ಲಿ ಪ್ರಾಮುಖ್ಯತೆ ಪಡೆಯುತ್ತದೆ. ಕಲಿಯುವ ಮನಸ್ಸಿರುವವರಿಗೆ ವಯಸ್ಸಿನ ಹಂಗಿರುವುದಿಲ್ಲ. ನ್ಯಾಯಾಧೀಶರಿಗೆ ತಾಲ್ಲೂಕು ವಕೀಲರ ಸಂಘದ ಸದಸ್ಯರು ಸ್ನೇಹಪೂರ್ವಕ ಬೆಂಬಲ ಮತ್ತು ಉತ್ತಮ ಬಾಂಧವ್ಯ ಹೊಂದುವುದಾಗಿ ತಿಳಿಸಿದರು.ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್.ಮಹೇಶ್ ಮಾತನಾಡಿ, `ಗ್ರಾಮೀಣ ಪ್ರದೇಶದ ಹಿನ್ನೆಲೆಯಿಂದ ಬಂದಿರುವುದರಿಂದ ಕಕ್ಷಿದಾರರ ನೋವು ಅರ್ಥವಾಗುತ್ತದೆ. ವಕೀಲರೂ ಈ ಬಗ್ಗೆ ಸ್ಪಂದಿಸಿ, ಸಹಕರಿಸಿದರೆ ಎಲ್ಲರಿಗೂ ಅನುಕೂಲಕರ ಎಂದು ಹೇಳಿದರು.ವಕೀಲರಾದ ಡಿ.ಅಶ್ವತ್ಥನಾರಾಯಣ, ಬೈರಾರೆಡ್ಡಿ, ನಾರಾಯಣಪ್ಪ, ರವೀಂದ್ರನಾಥ್, ವೇಣುಗೋಪಾಲ್, ರಮೇಶ್, ಸತ್ಯನಾರಾಯಣ್, ಸುಬ್ರಮಣ್ಯಪ್ಪ, ಅಶೋಕ್, ವೆಂಕಟೇಶ್, ಯೋಗಾನಂದ್, ವಿಶ್ವನಾಥ್, ಲಕ್ಷ್ಮೀ, ನಾಗಮಣಿ ಉಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry