ಬುಧವಾರ, ನವೆಂಬರ್ 20, 2019
24 °C

ಜನರಿಗೆ ಬೇಸರ ನಿಜ: ವೆಂಕಯ್ಯನಾಯ್ಡು

Published:
Updated:

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ. ಆದರೆ, ವರ್ಷದಿಂದ ಈಚೆಗೆ ಪಕ್ಷದಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ಜನರಲ್ಲಿ ಬೇಸರ ಇದೆ. ಅದನ್ನು ಹೋಗಲಾಡಿಸಲು ಪ್ರಯತ್ನಿಸಲಾಗುವುದು ಎಂದು ಬಿಜೆಪಿ ಹಿರಿಯ ಮುಖಂಡ ವೆಂಕಯ್ಯ ನಾಯ್ಡು ಮಂಗಳವಾರ ಇಲ್ಲಿ ಹೇಳಿದರು.ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

`ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲೂ ಉತ್ತಮ ಸಾಧನೆ ಮಾಡಿದೆ. ಸಾಧನೆಯನ್ನು ಜನ ಮೆಚ್ಚಿದ್ದಾರೆ. ಆದರೆ, ಕೆಲವು ಬೆಳವಣಿಗೆಗಳಿಂದ ಜನರಿಗೆ ಬೇಸರ ಆಗಿರುವುದು ನಿಜ. ಆದರೆ, ನಾವು ಜನರ ಬಳಿ ಹೋಗಿ ಬಿಜೆಪಿಯನ್ನು ಪುನಃ ಬೆಂಬಲಿಸುವಂತೆ ಮನವೊಲಿಸುತ್ತೇವೆ' ಎಂದು ಹೇಳಿದರು.`ವಿಧಾನಸಭಾ ಚುನಾವಣೆಯಲ್ಲಿ ವರ್ಚಸ್ಸು ಇರುವ ವ್ಯಕ್ತಿಗಳಿಗೆ ಟಿಕೆಟ್ ನೀಡಲಾಗುವುದು. ಈ ವಿಷಯದಲ್ಲಿ ಹಿಂದೆ ಮಾಡಿದ ತಪ್ಪುಗಳು ಪುನರಾವರ್ತನೆ ಆಗುವುದಿಲ್ಲ. ತಪ್ಪುಗಳಿಂದ ಸಾಕಷ್ಟು ಪಾಠ ಕಲಿತಿದ್ದೇವೆ' ಎಂದರು.

ಯು.ಪಿ.ಎ ಸರ್ಕಾರ ಅವಧಿ ಪೂರೈಸುವುದು ಅನುಮಾನ. ಸಂಸತ್ತಿಗೆ ಯಾವುದೇ ಸಂದರ್ಭದಲ್ಲಿ ಚುನಾವಣೆ ಎದುರಾಗಬಹುದು ಎಂದರು.

ಪ್ರತಿಕ್ರಿಯಿಸಿ (+)