ಜನರಿಗೆ ಸುಳ್ಳು ಹೇಳುವುದೇಕೆ?
ಪರೀಕ್ಷೆಯ ಕಾಲ. ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ವಿದ್ಯುತ್ ಕಡಿತ ಮಾಡುವುದಿಲ್ಲ.ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಆಗಾಗ ಮಾತಿನ ಮುತ್ತನ್ನು ಉದಿರಿಸುತ್ತಾರೆ. ಆದರೆ, ವಸ್ತುಸ್ಥಿತಿಯನ್ನು ಅವರು ಮುಚ್ಚಿಡುತ್ತಿರುವುದು ಅವರ ಇಬ್ಬಗೆಯ ನೀತಿಯನ್ನು ತೋರಿಸುತ್ತದೆ.
ಮೂಡುಬಿದಿರೆ, ಮುಲ್ಕಿ, ಕಾರ್ಕಳ ಮುಂತಾದ ಕಡೆಗಳಲ್ಲಿ ಪ್ರತಿದಿನ ಅನಿಯಮಿತವಾಗಿ ವಿದ್ಯುತ್ ಮಾಯವಾಗುತ್ತಿದೆ.ಒಂದೆರಡು ಗಂಟೆಗಳ ನಂತರ ಪ್ರತ್ಯಕ್ಷವಾಗುತ್ತದೆ. ಹೀಗೆ ಮನಬಂದಂತೆ ವಿದ್ಯುತ್ ಕಡಿತದಿಂದ ವಿದ್ಯಾರ್ಥಿಗಳಿಗೆ ಮತ್ತು ಜನರಿಗೆ ತುಂಬ ತೊಂದರೆಯಾಗುತ್ತಿದೆ. ನುಡಿದಂತೆ ನಡೆಯಬಾರದೆ? ಜನರಿಗೆ ಸುಳ್ಳು ಹೇಳುವುದೇಕೆ?
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.