ಜನರಿಗೆ ಹಿಂಸೆ, ಕಿರಿಕಿರಿ

7

ಜನರಿಗೆ ಹಿಂಸೆ, ಕಿರಿಕಿರಿ

Published:
Updated:ಅಡುಗೆ ಅನಿಲ ಸಂಪರ್ಕ ಮತ್ತು ವಿದ್ಯುತ್ ದರ ಪಾವತಿಯ ದಾಖಲೆ ಗಳನ್ನು ಆಧರಿಸಿ ಅಕ್ರಮ ಪಡಿತರ ಚೀಟಿಗಳನ್ನು ಪತ್ತೆ ಹಚ್ಚುವುದಾಗಿ ಹೊರ ಟಿರುವ ರಾಜ್ಯ ಸರ್ಕಾರದ ಕ್ರಮ ಬೆಂಗಳೂರು ನಗರದ ಜನತೆಯನ್ನು ವಿನಾ ಕಾರಣ ಗೋಳು ಹುಯ್ದುಕೊಳ್ಳುವ ವಿಕೃತಿಯಂತೆ ತೋರುತ್ತದೆ. ಅಡುಗೆ ಅನಿಲದ ಬೇಡಿಕೆ ಮತ್ತು ಪೂರೈಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನಿರ್ಣಾಯಕ ಪಾತ್ರವಿಲ್ಲ. ಅವುಗಳ ವಿತರಣೆಯನ್ನು ನೋಡಿಕೊಳ್ಳುವ ಜವಾ ಬ್ದಾರಿಯಷ್ಟೆ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯದಾ ಗಿದೆ. ಆದರೆ ಪಡಿತರ ಚೀಟಿಯ ವಿತರಣೆ ಮತ್ತು ಆಹಾರ ಧಾನ್ಯಗಳ ಪೂರೈ ಕೆಯ ನೇರ ಹೊಣೆ ರಾಜ್ಯ ಸರ್ಕಾರದ್ದಾಗಿದೆ.ಬಡತನದ ರೇಖೆಯ ಕೆಳಗಿ ನವರಿಗೆ (ಬಿಪಿಎಲ್) ಮತ್ತು ಬಡತನ ರೇಖೆಯ ಮೇಲಿನವರಿಗೆ (ಎಪಿ ಎಲ್) ಎರಡೂ ಬಗೆಯ ಪಡಿತರ ಚೀಟಿಗಳನ್ನು ವಿತರಿಸುವ ಹಾಗೂ ಅವರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಅವಶ್ಯಕ ವಸ್ತುಗಳನ್ನು ಪೂರೈ ಸುವ ಕರ್ತವ್ಯವನ್ನು ಈ ಇಲಾಖೆ ನಿರ್ವಹಿಸಬೇಕಾಗಿದೆ. ನಕಲಿ ಪಡಿತರ ಚೀಟಿಗಳ ಹಾವಳಿ ತಡೆಯುವ ಉದ್ದೇಶದಿಂದ ಅವುಗಳಲ್ಲಿ ಕುಟುಂಬ ಮುಖ್ಯ ಸ್ಥರ ಭಾವಚಿತ್ರವನ್ನು ಲಗತ್ತಿಸುವ ಪ್ರಕ್ರಿಯೆಯನ್ನು ಇಲಾಖೆ 2001ರಷ್ಟು ಹಿಂದೆಯೇ ಆರಂಭಿಸಿತ್ತು.ಹತ್ತು ವರ್ಷಗಳ ನಂತರವಾದರೂ ಈ ಪ್ರಕ್ರಿಯೆ ಮುಗಿದಿಲ್ಲ. ಅಷ್ಟೇ ಅಲ್ಲ, 2007ರಿಂದ ಈಚೆಗೆ ಹೊಸ ಪಡಿತರ ಚೀಟಿ ನೀಡುವ ಇಲ್ಲವೇ ಹೊಸದಾಗಿ ಹೆಸರು ಸೇರಿಸುವ ಪ್ರಕ್ರಿಯೆಯೂ ನಡೆಯುತ್ತಿಲ್ಲ.ಪಡಿತರ ಚೀಟಿ ಮತ್ತು ಅದರ ಮೂಲಕ ವಿತರಿಸುವ ಆಹಾರಧಾನ್ಯಗಳಿಗೆ ಸಾರ್ವಜನಿಕರ ತೆರಿಗೆಯ ಹಣವೇ ಬಳಕೆಯಾಗುತ್ತಿದ್ದರೂ ಈ ಸೌಲಭ್ಯವನ್ನು ರಾಜಕೀಯ ಲಾಭಕ್ಕಾಗಿಯೇ ಬಳಸಿಕೊಳ್ಳುವ ರಾಜಕೀಯ ಪಕ್ಷಗಳ ಹುನ್ನಾ ರವೇ ನಕಲಿ ಪಡಿತರ ಚೀಟಿಗಳ ಸೃಷ್ಟಿಗೆ ಕಾರಣ. ‘ಅನ್ನಪೂರ್ಣ’, ‘ಅಂತ್ಯೋ ದಯ’, ‘ಅಕ್ಷಯ’ ಇತ್ಯಾದಿ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ ಒಂದೊಂದು ಕಾರ್ಡ್ ವಿತರಿಸುವ ಹುಚ್ಚಾಟವೂ ಕೆಲವು ಕಾಲ ನಡೆದು ಬಡವರಿಗೆ ನಿಗದಿ ಯಾದ ಸೌಲಭ್ಯಗಳು ಎಲ್ಲೆಲ್ಲೋ ಹರಿದುಹೋದವು. ‘ನೆಮ್ಮದಿ ಕೇಂದ್ರ’ಗಳ ಮೂಲಕ ವಿತರಿಸಬೇಕೆಂದಿದ್ದ ‘ಸ್ಮಾರ್ಟ್ ಕಾರ್ಡ್’ ಪರಿಕಲ್ಪನೆಯನ್ನು ಗುತ್ತಿಗೆದಾರರು, ಪುಢಾರಿಗಳು ಮತ್ತು ಜನಪ್ರತಿನಿಧಿಗಳು ಹಣ ಮಾಡು ವುದಕ್ಕೆ ದುರುಪಯೋಗಪಡಿಸಿಕೊಂಡರು.ಪಡಿತರ ವ್ಯವಸ್ಥೆಯಲ್ಲಿ ಬೇರುಬಿಟ್ಟ ಭ್ರಷ್ಟಾಚಾರವನ್ನು ಗಮನಿಸಿದ ಪ್ರಧಾನಿಯವರೇ ಬಡವರ ನೆರವಿಗೆ ಹಣ ಸಹಾಯ ಮಾಡುವ ನಿರ್ದೇಶನಾಲಯ ರಚನೆಯ ಪ್ರಸ್ತಾಪ ಮಾಡಬೇಕಾ ಯಿತು. ಆದರೂ  ಶೇ 70ರಷ್ಟು ಬಡವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿಯೇ ಉಳಿದಿದ್ದಾರೆಂದು ಕೆಲವು ತಿಂಗಳ ಹಿಂದಿನ ಅಧ್ಯಯನ ವೊಂದು ವರದಿ ಮಾಡಿತ್ತು. ನಕಲಿ ಪಡಿತರ ಚೀಟಿಗಳು ಅದಕ್ಷ ಅಧಿಕಾರಿಗಳು ಮತ್ತು ಭ್ರಷ್ಟ ಜನಪ್ರತಿನಿಧಿಗಳ ಸೃಷ್ಟಿ. ಇವರ ಕರ್ತವ್ಯ ಲೋಪವನ್ನು ಸರಿಪಡಿ ಸುವುದಕ್ಕೆ ಸಾರ್ವಜನಿಕರು ತಮ್ಮ ವಿದ್ಯುತ್ ಬಿಲ್ಲಿನ ಪ್ರತಿಯನ್ನು ಹಿಡಿದು ಅಡುಗೆ ಅನಿಲ ವಿತರಣಾ ಕೇಂದ್ರದ ಮುಂದೆ ಸರತಿ ಸಾಲಿನಲ್ಲಿ ನಿಲ್ಲಬೇಕೇ? ಅಷ್ಟಕ್ಕೂ ಅಡುಗೆ ಅನಿಲ ಸಂಪರ್ಕ ನೀಡಿದ ಕೇಂದ್ರ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು (ರಾಜ್ಯದ ಆಹಾರ ಇಲಾಖೆ ನಕಲಿ ಪಡಿತರ ಚೀಟಿಗಳನ್ನು ನೀಡಿ ದಂತೆ) ನಿಯಮಗಳನ್ನು ಉಲ್ಲಂಘಿಸಿ ಅನಿಲ ಸಂಪರ್ಕ ನೀಡಿವೆ ಎಂಬುದನ್ನು ರಾಜ್ಯದ ಅಧಿಕಾರಿಗಳು ಪತ್ತೆ ಮಾಡಬೇಕಿದೆಯೇ? ಇಂಥ ಕಿರುಕುಳವನ್ನು ತಕ್ಷಣ ನಿಲ್ಲಿಸಿ ಜನರ ಅಗತ್ಯಗಳನ್ನು ಪೂರೈಸುವತ್ತ ಸರ್ಕಾರ ಗಮನ ಹರಿಸಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry