ಸೋಮವಾರ, ಮೇ 17, 2021
24 °C

ಜನರಿಗೆ ಹೊಸ ದರದ ಬರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರ ಮುಂಗಡಪತ್ರದಲ್ಲಿ ಪ್ರಸ್ತಾಪಿಸಿದ ಸೇವಾ ದರ ಹೆಚ್ಚಳ ಭಾನುವಾರದಿಂದ (ಏ.1) ಜಾರಿಗೆ ಬಂದಿದ್ದು, ದೂರವಾಣಿ ಕರೆ, ರೆಸ್ಟೊರೆಂಟ್ ದರ ಹಾಗೂ ಇನ್ನಿತರ ಹಲವು ಸೇವೆಗಳು ಜನರ ಜೇಬಿಗೆ ಕತ್ತರಿ ಹಾಕಲಿವೆ.

ಸೇವಾ ತೆರಿಗೆಯಿಂದ 2012-13 ರಲ್ಲಿ ರೂ. 18,660 ಕೋಟಿ ಹೆಚ್ಚುವರಿಯಾಗಿ (ಒಟ್ಟು 1.24 ಲಕ್ಷ ಕೋಟಿ) ಸಂಗ್ರಹಿಸುವ ಗುರಿ ಹೊಂದಿರುವ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಈ ತೆರಿಗೆಯನ್ನು ಶೇ 10.30ರಿಂದ ಶೇ 12.36ಕ್ಕೆ ಹೆಚ್ಚಿಸಲಾಗುವುದೆಂದು ಬಜೆಟ್‌ನಲ್ಲಿ ಪ್ರಕಟಿಸಿದ್ದರು.

120ಕ್ಕೂ ಹೆಚ್ಚು ಬಗೆಯ ಸೇವೆಗಳಿಗೆ ಈ ಹೆಚ್ಚಳ ಅನ್ವಯವಾಗಲಿದೆ. ಹವಾನಿಯಂತ್ರಿತ ರೈಲು ಪ್ರಯಾಣ, ವಿಮಾನ ಪ್ರಯಾಣ, ಕೊರಿಯರ್, ಜೀವ ವಿಮೆ, ಬ್ಯೂಟಿ ಪಾರ್ಲರ್, ಜಾಹೀರಾತು, ಡ್ರೈಕ್ಲೀನಿಂಗ್, ಹೆಲ್ತ್ ಕ್ಲಬ್, ಕೇಬಲ್ ಆಪರೇಟರ್, ಕ್ರೆಡಿಟ್ ಕಾರ್ಡ್, ಕ್ರೆಡಿಟ್ ರೇಟಿಂಗ್‌ಗಳು ಈ ಹೆಚ್ಚಳ ವ್ಯಾಪ್ತಿಯಲ್ಲಿ ಸೇರಿವೆ.

ಮನರಂಜನಾ ಕಾರ್ಯಕ್ರಮಗಳ ಪ್ರವೇಶ, ಮೋಜು ಸೌಲಭ್ಯಗಳು  ರೇಡಿಯೊ ಟ್ಯಾಕ್ಸಿ ಪ್ರಯಾಣ, ಆಟೊ ಪ್ರಯಾಣ, ಅಂತ್ಯಸಂಸ್ಕಾರ, ಶವ ಸಾಗಣೆ ಸೇವಾ ತೆರಿಗೆ ವಿನಾಯಿತಿ ಪಟ್ಟಿಯಲ್ಲಿ ಸೇರಿವೆ. ಶಾಲೆ, ವಿಶ್ವವಿದ್ಯಾಲಯ ಶಿಕ್ಷಣ ಹಾಗೂ ಮಾನ್ಯತೆ ಪಡೆದ ಔದ್ಯೋಗಿಕ ಕೋರ್ಸ್‌ಗಳನ್ನು ಕೂಡ ತೆರಿಗೆ ಏರಿಕೆಯಿಂದ ಮುಕ್ತಗೊಳಿಸಲಾಗಿದೆ. ಆದರೆ ಕೋಚಿಂಗ್ ಕ್ಲಾಸ್, ತರಬೇತಿ ಸಂಸ್ಥೆಗಳಿಗೆ ಈ ವಿನಾಯಿತಿ ಅನ್ವಯವಾಗುವುದಿಲ್ಲ.

ಶೇ 10ರಷ್ಟು ತೆರಿಗೆ ವ್ಯಾಪ್ತಿಯ ಮಿತಿ ಹೆಚ್ಚಿಸಿರುವುದರಿಂದ  ರೂ. 10 ಲಕ್ಷದೊಳಗಿನ ಆದಾಯವಿರುವವರಿಗೆ ವರ್ಷಕ್ಕೆ ರೂ. 1030 ಉಳಿಯಲಿದೆ.

ವಿದೇಶಿ ಬ್ಯಾಂಕು ಖಾತೆಗಳನ್ನು ಹಾಗೂ ಆಸ್ತಿ ಹೊಂದಿರುವ ತೆರಿಗೆದಾರರು ತಾವು ಬ್ಯಾಂಕ್ ಖಾತೆ ಅಥವಾ ಆಸ್ತಿ ಹೊಂದಿರುವ ರಾಷ್ಟ್ರದ ಹೆಸರು, ಬ್ಯಾಂಕಿನ ವಿಳಾಸ, ಖಾತೆಯಲ್ಲಿರುವ ಹೆಸರು, ವರ್ಷಾವಧಿಯಲ್ಲಿ ತಮ್ಮ ಖಾತೆಯಲ್ಲಿದ್ದ ಗರಿಷ್ಠ ಹಣ ಇತ್ಯಾದಿಗಳನ್ನು ರೂಪಾಯಿ ಮೊತ್ತಕ್ಕೆ ಪರಿವರ್ತಿಸಿ ನಮೂದಿಸಬೇಕಾಗುತ್ತದೆ.

ವಾಹನ ಮಾಲೀಕರು ವಿಮೆಗಾಗಿ ಹೆಚ್ಚು ಪಾವತಿಸಬೇಕಾಗುತ್ತದೆ. 1000 ಸಿ.ಸಿ ಒಳಗಿನ ಕಾರಿಗೆ ಥರ್ಡ್ ಪಾರ್ಟಿ ವಿಮೆಗೆ ವಾರ್ಷಿಕ ರೂ. 784 ಭರಿಸಬೇಕಾಗುತ್ತದೆ. 1000ಸಿ.ಸಿ ಯಿಂದ 1500 ಸಿ.ಸಿ ವರೆಗೆ ರೂ. 925, ಅದಕ್ಕಿಂತ ಹೆಚ್ಚಿನ ಸಿ.ಸಿ ಯ ಕಾರಿಗೆ ವರ್ಷಕ್ಕೆ ರೂ. 2853 ಪಾವತಿಸಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.