ಜನರಿಗೇನು ಲಾಭ? ಮೊಯಿಲಿ ಪ್ರಶ್ನೆ

ಬುಧವಾರ, ಜೂಲೈ 17, 2019
29 °C

ಜನರಿಗೇನು ಲಾಭ? ಮೊಯಿಲಿ ಪ್ರಶ್ನೆ

Published:
Updated:

ಬೆಂಗಳೂರು: ಡಿ.ವಿ. ಸದಾನಂದ ಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಸಚಿವ ಜಗದೀಶ ಶೆಟ್ಟರ್ ಅವರನ್ನು ಆ ಸ್ಥಾನಕ್ಕೆ ತರುವುದು ಬಿಜೆಪಿಯ ಆಂತರಿಕ ನಿರ್ಧಾರವಾದರೂ, ಇದರಿಂದ ರಾಜ್ಯದ ಜನತೆಗೆ ಆಗುವ ಪ್ರಯೋಜನ ಏನು ಎಂದು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವ ಎಂ. ವೀರಪ್ಪ ಮೊಯಿಲಿ ಪ್ರಶ್ನಿಸಿದರು. ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಮೊಯಿಲಿ, `ರಾಜ್ಯದಲ್ಲಿ ನಡೆಯುತ್ತಿರುವ ಸ್ವಜನ ಪಕ್ಷಪಾತ, ಭ್ರಷ್ಟಾಚಾರಕ್ಕೆ ಕೊನೆಯಿಲ್ಲ ಎಂಬ ಸಂದೇಶ ಮುಖ್ಯಮಂತ್ರಿಯವರನ್ನು ಬದಲಾಯಿಸುವ ವರಿಷ್ಠರ ನಿರ್ಧಾರದಿಂದ ರವಾನೆಯಾಗಿದೆ~ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry