ಶನಿವಾರ, ಏಪ್ರಿಲ್ 10, 2021
32 °C

ಜನರ ಕೆಲಸಕ್ಕೆ ವಿಳಂಬ ಬೇಡ: ಡಿವೈಎಸ್‌ಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸೀಕೆರೆ: ಸರ್ಕಾರಿ ನೌಕರರ ನಿರ್ಲಕ್ಷ್ಯ ಹಾಗೂ ಸೋಮಾರಿತನದಿಂದ ಜನರ ಕೆಲಸ ನಡೆಯುತ್ತಿಲ್ಲ ಎಂದು ಜಿಲ್ಲಾ ಲೋಕಾಯುಕ್ತ ಡಿವೈಎಸ್‌ಪಿ ಶಿವಬಸಪ್ಪ ಅಸಮಾಧಾನ ವ್ಯಕ್ತ ಪಡಿಸಿದರು.ಸೋಮವಾರ ತಾಲ್ಲೂಕು ಕಚೇರಿಗೆ ಆಗಮಿಸಿದ ಅವರು, ಮಾಸಾಶನ, ಜಾತಿ, ಆದಾಯ ಧೃಢೀಕರಣ ಪ್ರಮಾಣ ಪತ್ರಗಳ ದಾಖಲೆಗಳನ್ನು ಸಮರ್ಪಕ ವಾಗಿ ನಿರ್ವಹಣೆ ಮಾಡಿಲ್ಲ ಎಂದು ನೌಕರರನ್ನು ತರಾಟೆಗೆ ತೆಗೆದು ಕೊಂಡರು. ರೈತರು ಪ್ರತಿನಿತ್ಯ ತಾಲ್ಲೂಕು ಕಚೇರಿಗೆ ಅಲೆಯುವಂತೆ ಮಾಡುತ್ತಿ ರುವುದು ಸರಿಯಲ್ಲ.ಸಾರ್ವಜನಿಕರು ನೀಡಿದ ಅರ್ಜಿಯನ್ನು ನಿಗದಿತ ಸಮಯಕ್ಕೆ ಅವರಿಗೆ ನೀಡಬೇಕು. ಅಲ್ಲದೆ ಅವರು ಅಲೆಯುವುದನ್ನು ತಪ್ಪಿಸಬೇಕು ಎಂದರು.ಸಾರ್ವಜನಿಕರು ಸರ್ಕಾರಿ ಕಚೇರಿ ಬಾಗಿಲಲ್ಲಿ ಕೂರುವುದು, ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಬೇಕು. ಪ್ರಸ್ತುತ ತಿಂಗಳಲ್ಲಿ ವಿಧವಾ ವೇತನ ಕೋರಿ ಪುನರ್ ಪರಿಶೀಲನೆಗೆ ಬಂದ ಅರ್ಜಿಗಳಲ್ಲಿ 10 ಅರ್ಜಿಗಳು ಉಳಿದಿವೆ. ಸಂಧ್ಯಾ ಸುರಕ್ಷಾಗೆ 16 ಅರ್ಜಿ ಬಂದಿವೆ ಎಂದು ಗುಮಾಸ್ತೆ ನಾಗರತ್ನ ಮಾಹಿತಿ ನೀಡಿದರು. ಅಂಗವಿಕಲರ ವೇತನ ಕೋರಿ 16 ಅರ್ಜಿ ಬಂದಿವೆ. ಅವು ಎಲ್ಲಿ ಎಂದಾಗ ಸಂಬಂಧಿಸಿದ ಅಧಿಕಾರಿ ಮೌನಕ್ಕೆ ಶರಣಾದರು.ರಾಷ್ಟ್ರೀಯ ಸಾಮಾಜಿಕ ಭದ್ರತಾ ಕುಟುಂಬ ಯೋಜನೆಯಡಿ ನಿರ್ಗತಿಕ ಕುಟುಂಬಕ್ಕೆ ನೀಡುವ 10 ಸಾವಿರ ರೂಪಾಯಿ ಸಹಾಯಧನ ಕೋರಿ 466 ಅರ್ಜಿಗಳು ಬಂದಿವೆ. ಅವುಗಳಲ್ಲಿ ಕೇವಲ 15 ಕುಟುಂಬಕ್ಕೆ ಮಾತ್ರ ಹಣ ಬಿಡುಗಡೆ ಮಾಡಲಾಗಿದೆ. ಆದರೆ ಉಳಿದ ಅರ್ಜಿಗೆ ಅನುದಾನ ಬಿಡುಗಡೆಯಾಗದೆ ಬಾಕಿ ಉಳಿದಿವೆ. ಅಲ್ಲದೆ ಅಂತ್ಯ ಸಂಸ್ಕಾರಕ್ಕೆ ನೀಡುವ 1000 ಸಾವಿರ ಹಣ ಕೋರಿ 569 ಅರ್ಜಿಗಳು ಬಂದಿವೆ. ಅವುಗಳ ಪೈಕಿ 400 ಫಲಾನುಭವಿಗಳಿಗೆ ಚೆಕ್ ನೀಡಲಾಗಿದೆ, 169 ಅರ್ಜಿಗಳು ಬಾಕಿ ಉಳಿದಿವೆ ಎಂದು ಗುಮಾಸ್ತೆ ಶೈಲಾ ಮಾಹಿತಿ ನೀಡಿದರು.ಯಾದಾಪುರ ನಿವಾಸಿ ಪದ್ಮಾ ತಮಗೆ ಬರುತ್ತಿದ್ದ ವಿಧವಾ ವೇತನ ನಿಂತು ಐದು ತಿಂಗಳು ಕಳೆದಿವೆ. ಈವರೆಗೂ ತಮಗೆ  ಹಣ ಬಂದಿಲ್ಲ ಎಂದು ಲೋಕಾಯುಕ್ತರ ಗಮನ ಸೆಳೆದರು. ಗಂಡಸಿ ಹೋಬಳಿ ಹೊನಕುಮಾರನಹಳ್ಳಿ ನಿವಾಸಿ ಶಿವ ಕುಮಾರ್ ಎಂಬವರು ಕಳೆದ 6 ತಿಂಗಳಿ ನಿಂದ ತಮ್ಮ ಜಮೀನು ಸರ್ವೆ ಮಾಡಿ ಸಲು ಭೂಮಾಪಕ ಕಚೇರಿಗೆ ಅಲೆದು ಸಾಕಾಗಿದೆ. ಅಧಿಕಾರಿಗಳು ಕೆಲಸ ಮಾಡಿಕೊಡುತ್ತಿಲ್ಲ ಎಂದು ದೂರಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.