ಜನರ ಪ್ರಾಣದ ಜೊತೆ ಜಲಮಂಡಳಿ ಆಟ

7

ಜನರ ಪ್ರಾಣದ ಜೊತೆ ಜಲಮಂಡಳಿ ಆಟ

Published:
Updated:

ಜನರ ಪ್ರಾಣದ ಜೊತೆ ಜಲಮಂಡಳಿ ಆಟ

ಬಿ.ಬಿ.ಎಂ.ಪಿ. ಕಾಚರಕನಹಳ್ಳಿ ವಾರ್ಡ್ ನಂ. 29ರ ವ್ಯಾಪ್ತಿಗೆ ಬರುವ ಎಚ್. ಬಿ. ಆರ್. ಬಡಾವಣೆ, 1ನೇ ಹಂತ, 1ನೇ ಬ್ಲಾಕ್‌ನ ಜ್ಯೋತಿನಗರದ ಮುಖ್ಯರಸ್ತೆಯಲ್ಲಿ ಜಲಮಂಡಳಿ ಇ - 1 ವ್ಯಾಪ್ತಿಗೆ ಬರುವ ಒಳಚರಂಡಿಯ ಮ್ಯಾನ್ ಹೋಲ್‌ಗಳು, ರಸ್ತೆಯ ಮಟ್ಟಕ್ಕಿಂತ ಮೂರು ನಾಲ್ಕು ಅಡಿಗಳಷ್ಟು ಆಳವಾಗಿವೆ.ಪಾದಚಾರಿಗಳು, ವಾಹನ ಚಾಲಕರು ಹಾಗೂ ಮಕ್ಕಳು ಆಟವಾಡುತ್ತಾ ಅದೆಷ್ಟೊ ಬಾರಿ ಈ ಗುಂಡಿಯಲ್ಲಿ ಬಿದ್ದು ಸಣ್ಣ ಪುಟ್ಟ ಗಾಯ ಮಾಡಿಕೊಂಡಿದ್ದಾರೆ.

ಮ್ಯಾನ್ ಹೋಲ್‌ಗಳನ್ನು ಭೂಮಿಯ ಮಟ್ಟಕ್ಕೆ ಎತ್ತರಿಸಲು ಸಂಬಂಧಪಟ್ಟ ಜಲಮಂಡಳಿ  ಇ - 1 ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ, ಹಾಗೂ ಸಹಾಯಕ ಅಭಿಯಂತರವರಿಗೂ ಹಲವು ಬಾರಿ ದೂರು ಸಲ್ಲಿಸಿದರೂ ಯಾವುದೇ ಉಪಯೋಗವಾಗಿಲ್ಲ. ಸಾರ್ವಜನಿಕ ಸಮಸ್ಯೆಗಳನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳೇ ನಿರ್ಲಕ್ಷ್ಯ ತೋರಿದರೆ ಈ ಸಮಸ್ಯೆಯನ್ನು ಬಗೆ ಹರಿಸುವವರು ಯಾರು?  ಹಿರಿಯ ಅಧಿಕಾರಿಗಳು ಹಾಗೂ ಜಲಮಂಡಳಿ ಅಧ್ಯಕ್ಷರು ತುರ್ತು ಕ್ರಮ ಕೈಗೊಳ್ಳಲು ಮನವಿ.

 ಪಿ. ಮಂಜೇಶ್ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry