ಮಂಗಳವಾರ, ಮೇ 11, 2021
21 °C

`ಜನರ ಮನಸ್ಸಿನಲ್ಲಿ ಶಾಶ್ವತವಾಗಿರುವ ಪಿಬಿಎಸ್'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಕನ್ನಡ ಚಿತ್ರರಂಗದ `ಸಾವಿಲ್ಲದ' ಸುಮಧುರ ಹಾಡುಗಳಿಗೆ ಧ್ವನಿ ನೀಡುವ ಮೂಲಕ ಹಿರಿಯ ಹಿನ್ನೆಲೆ ಗಾಯಕ ಪಿ.ಬಿ. ಶ್ರೀನಿವಾಸ್ ಅವರು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ ಎಂದು ಚಿತ್ರ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ಹೇಳಿದರು.ನಗರದ ಕಲಾಮಂದಿರದಲ್ಲಿ ಭಾನುವಾರ ಸ್ಪಂದನ ಸಾಂಸ್ಕೃತಿಕ   ಟ್ರಸ್ಟ್ ಆಯೋಜಿಸಿದ್ದ `ಡಾ. ಪಿ.ಬಿ.ಶ್ರೀನಿವಾಸ್ ನೆನಪಿಸುವ ಹಾಡುಗಳ ಸುಮಧುರ ಗೀತೆಗಳ ಮಿಲನ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. `ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು.., ಒಲವಿನ ಪ್ರಿಯಲತೆ ಅವಳದೇ ಚಿಂತೆ.., ನಾವಾಡುವ ನುಡಿಯೇ ಕನ್ನಡ ನುಡಿ..' ಸೇರಿದಂತೆ ಅನೇಕ ಚಲನಚಿತ್ರ ಗೀತೆಗಳು ಕನ್ನಡದ ಮಟ್ಟಿಗೆ ಇಂದಿಗೂ ಪ್ರಸ್ತುತವಾಗಿರಲು ಪಿಬಿಎಸ್ ಅವರ ಸುಮಧುರ ಕಂಠವೇ ಕಾರಣ ಎಂದು ಬಣ್ಣಿಸಿದರು.ಪಿ.ಬಿ. ಶ್ರೀನಿವಾಸ್ ಅವರು ಯಾವಾಗಲೂ ಪೇಟ ಧರಿಸುತ್ತಿದ್ದರು. ಜೇಬಿನಲ್ಲಿ ಒಂದು ಪುಟ್ಟ ಪುಸ್ತಕ, ಹತ್ತಕ್ಕಿಂತ ಹೆಚ್ಚು ಪೆನ್ನುಗಳನ್ನು ಇಟ್ಟುಕೊಂಡಿರುತ್ತಿದ್ದರು. ಕೆಲಸದಲ್ಲಿ ಶಿಸ್ತು, ಶ್ರದ್ಧೆ ಹೊಂದಿದ್ದ ಸರಳ, ಸಜ್ಜನ ವ್ಯಕ್ತಿ ಎಂದು ಕೊಂಡಾಡಿದರು. ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಸಿನಿಮಾಗಳಲ್ಲಿ ಸಹ

ವಿಶ್ರಾಂತ ಪ್ರಾಂಶುಪಾಲ ಡಾ.ಪಿ.ವಿ. ನಂಜೇರಾಜೇ ಅರಸು ಮಾತನಾಡಿ, `ಡಾ. ಪಿ.ಬಿ.ಶ್ರೀನಿವಾಸ್ ಅವರು, ಕನ್ನಡ ಚಿತ್ರರಂಗದ ಎಲ್ಲ ನಟರ ಆತ್ಮವಾಗಿದ್ದರು' ಎಂದು ಗುಣಗಾನ ಮಾಡಿದರು.ಬದ್ಧತೆ, ಭಾವನಾತ್ಮಕತೆ, ನಿಷ್ಠೆ, ತಲ್ಲೆನತೆಯನ್ನು ರೂಢಿಸಿಕೊಂಡಿದ್ದ `ಪಿಬಿಎಸ್' ಅವರು, ಸಂಗೀತದ ಧ್ವನಿಯ ಮೂಲಕ ನಮ್ಮ ನಡುವೆ ಬದುಕಿರುತ್ತಾರೆ ಎಂದು ಅವರು  ಹೇಳಿದರು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎನ್. ಶಂಕರಪ್ಪ, ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಹುರಗಲವಾಡಿ ರಾಮಯ್ಯ, ನಗರಸಭಾ ಸದಸ್ಯರಾದ ಎಂ.ಪಿ.ಅರುಣ್‌ಕುಮಾರ್, ಶಿವಪ್ರಕಾಶ್‌ಬಾಬು, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಟಿ. ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.