ಜನರ ಮಾತಿಗೆ ಮನ್ನಣೆ: ರಾಹುಲ್‌ಗೆ ಸಲಹೆ

7

ಜನರ ಮಾತಿಗೆ ಮನ್ನಣೆ: ರಾಹುಲ್‌ಗೆ ಸಲಹೆ

Published:
Updated:

ಬೆಂಗಳೂರು: ಯಾವುದೇ ಸರ್ಕಾರ ಏಕಮುಖವಾಗಿ ಕಾರ್ಯ ನಿರ್ವಹಿಸ­ಬಾರದು. ಅದು ನಿರ್ಣಯಗಳನ್ನು ಕೈ­ಗೊಳ್ಳುವ ಹಂತದಲ್ಲೇ ಜನರ ಭಾಗೀ­ದಾರಿಕೆಗೆ ಅವಕಾಶ ವ್ಯವಸ್ಥೆ ರೂಪಿಸ­ಬೇಕು ಎಂದು ಕಾಂಗ್ರೆಸ್‌ ಪಕ್ಷವು ಶನಿ­ವಾರ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿದ್ದ ಯುವಕ, ಯುವತಿ­ಯರು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಸಲಹೆ ನೀಡಿದ್ದಾರೆ.ದೇಶದಲ್ಲಿ ಹೊಸ ನಾಯಕತ್ವ ಸೃಷ್ಟಿಗೆ ಒತ್ತು ನೀಡಬೇಕು. ಉದ್ಯೋಗ ಸೃಷ್ಟಿಗೆ ಗಮನಹರಿಸಿದರೆ ಸಾಲದು. ಉದ್ಯಮ­ಗಳನ್ನು ಆರಂಭಿಸಲು ಮುಂದಾ­­­­­­­­ಗುವ ಯುವಜನರಿಗೆ ಉತ್ತೇಜನ ನೀಡು­ವ ಯೋಜನೆ­ಗಳನ್ನು ರೂಪಿಸಬೇಕು ಎಂಬ ಸಲಹೆ­ಗಳೂ ಯುವಜನರಿಂದ ಬಂದಿವೆ.ಚುನಾವಣಾ ಪ್ರಣಾಳಿಕೆ ರೂಪಿ­ಸುವ ವಿಚಾರದಲ್ಲಿ ಹೊಸ ಕ್ರಮ ಜಾರಿಗೆ ರಾಹುಲ್‌ ಮುಂದಾಗಿದ್ದಾರೆ. ವಿವಿಧ ವರ್ಗ, ಸಮುದಾಯ ಮತ್ತು ಕ್ಷೇತ್ರಗಳನ್ನು ಪ್ರತಿನಿಧಿಸುವ ಜನರ ಅಭಿಪ್ರಾಯ ಆಲಿಸಿ, ಅವುಗಳನ್ನು ಪ್ರಣಾಳಿಕೆಯಲ್ಲಿ ಅಳವಡಿಸಲು ನಿರ್ಧ­ರಿಸಿದ್ದಾರೆ. ಅದರ ಭಾಗ­ವಾಗಿಯೇ ದೆಹಲಿಯಲ್ಲಿ ಎರಡು ಸಮಾ­ಲೋಚನಾ ಸಭೆಗಳನ್ನು ನಡೆಸಿದ್ದರು. ಮೂರನೇ ಸಮಾಲೋಚನಾ ಸಭೆ ಬೆಂಗಳೂರಿನಲ್ಲಿ ನಡೆಯಿತು.‘ನಿಮ್ಮ ಧ್ವನಿ–ನಮ್ಮ ಪ್ರತಿಜ್ಞೆ’ ಹೆಸರಿನಡಿ ಅರಮನೆ ಮೈದಾನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ, ದೇಶದ 21 ರಾಜ್ಯಗಳ 250ಕ್ಕೂ ಹೆಚ್ಚು ಯುವಕ ಯುವತಿಯರು ಭಾಗ­ವಹಿಸಿ­ದ್ದರು. ಆದರೆ ಈ ಸಭೆಗೆ ಮಾಧ್ಯಮಗಳ ಪ್ರವೇಶ ನಿಷೇಧಿಸಲಾಗಿತ್ತು. ಸಭೆಯಲ್ಲಿ  ಪ್ರತಿ­ಕ್ರಿಯಿಸಿದ ರಾಹುಲ್‌, ರಾಜಕೀಯ ಪಕ್ಷ­ಗಳು ಅಭ್ಯರ್ಥಿಗಳ ಆಯ್ಕೆ ವೇಳೆ­ಜನರ ಅಭಿಪ್ರಾಯಕ್ಕೆ ಒತ್ತು ನೀಡುವ ಅಗತ್ಯ ಪ್ರತಿಪಾದಿಸಿ­ದರು.ಯುವಕರಿಗೆ ಆದ್ಯತೆ: ದೇಶದಲ್ಲಿ ಯುವ­ಕರ ಸಂಖ್ಯೆಗನುಗುಣವಾಗಿ ರಾಜ­ಕೀಯ ಪ್ರಾತಿನಿಧ್ಯ ನೀಡುವ ವ್ಯವಸ್ಥೆ ಜಾರಿ­ಯಾಗಬೇಕು ಎಂಬ ಬೇಡಿಕೆ ಸಂವಾದ­ದಲ್ಲಿ ಕೇಳಿಬಂತು. ನಗರದ ಬಸಂತಿ ವೈದ್ಯಕೀಯ ಎಂಜಿನಿಯ­ರಿಂಗ್‌ ವಿದ್ಯಾ­ರ್ಥಿ­ನಿಯ ಅಭಿಪ್ರಾಯಕ್ಕೆ ಪ್ರತಿ­ಕ್ರಿಯಿಸಿದ ರಾಹುಲ್‌, ಈ ವಿಚಾರದಲ್ಲಿ ಕಾಂಗ್ರೆಸ್‌ ಮುಕ್ತ ಎಂದರು ಎನ್ನಲಾಗಿದೆ.

‘ರಾಜಕೀಯ ಪ್ರವೇಶ ಮತ್ತು ಅಲ್ಲಿ ಮೇಲಕ್ಕೇರುವುದು ಪಾರದರ್ಶಕವಾಗಿ ನಡೆಯುತ್ತಿಲ್ಲ. ಚುನಾವಣೆಗೆ ಅಭ್ಯರ್ಥಿ­ಗಳ ಆಯ್ಕೆಮಾಡುವ ವಿಧಾನದಲ್ಲೇ ಸಮಸ್ಯೆ ಇದೆ. ಯಾವುದಾದರೂ ರಾಜಕೀಯ ಪಕ್ಷ ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಜನಾಭಿಪ್ರಾಯಕ್ಕೆ ಮಾನ್ಯತೆ ನೀಡುತ್ತಿದೆಯೇ?’ ಎಂದು ಅವರು ಸಂವಾದದಲ್ಲಿ ಭಾಗಿಯಾದವರಿಗೆ ಪ್ರಶ್ನೆ ಎಸೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry