ಶುಕ್ರವಾರ, ಮೇ 14, 2021
32 °C

ಜನರ ವಿರೋಧ: ಗ್ರಾಮ ಸಭೆ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ತಾಲ್ಲೂಕಿನ ಕೂಟಗಲ್ ಹೋಬಳಿಯ ದೊಡ್ಡಗಂಗವಾಡಿ ಗ್ರಾಮದಲ್ಲಿ ಮಂಗಳವಾರ ನಡೆಯಬೇಕಿದ್ದ ಗ್ರಾಮಸಭೆ ಗ್ರಾಮದ ಜನರ ವಿರೋಧದ ಸಲುವಾಗಿ ರದ್ದಾಯಿತು.ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ರ ನಿಯಮಗಳ ಅನ್ವಯ ಸಭೆ ಆಯೋಜಿಸಿಲ್ಲದ ಕಾರಣ ಸಭೆಯನ್ನು ರದ್ದುಪಡಿಸಬೇಕು ಎಂದು ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ತಡೆ ಕಾಯ್ದೆ 1989ರ ಸಬಲೀಕರಣ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಡಿ.ಆರ್.ಸುಂದರೇಶ್ ನೇತೃತ್ವದಲ್ಲಿ ಗ್ರಾಮದ ಕೆಲ ಜನರು  ವಿರೋಧಿಸಿದ ಕಾರಣ ಸಭೆ ರ್ದ್ದದು ಮಾಡಲಾಯಿತು.ಕಾನೂನು ಪ್ರಕಾರ ಗ್ರಾಮ ಸಭೆ ನಡೆಸಲು 15 ದಿನ ಮುಂಚಿತವಾಗಿ ನೋಟಿಸ್ ನೀಡಬೇಕು. ಭಿತ್ತಿ ಪತ್ರಗಳನ್ನು ಹಂಚಬೇಕು. ಸಾರ್ವಜನಿಕ ಸ್ಥಳದಲ್ಲಿ ಜಾಹಿರಾತು ಪ್ರಕಟಿಸಬೇಕು. ಅಲ್ಲದೆ ದಲಿತ ಕೇರಿಗಳಲ್ಲಿ ಡಂಗೂರ ಸಾರಬೇಕು. ಆದರೆ ಇದ್ಯಾವುದನ್ನೂ ಗ್ರಾಮದಲ್ಲಿ ಮಾಡಿಲ್ಲ ಎಂದು ಸುಂದರೇಶ್ ದೂರಿದರು.ಅಲ್ಲದೆ ಪಂಚಾಯಿತಿ ಮತದಾರರ 100ನೇ 10ರಷ್ಟು ಅಥವಾ 100 ಜನ ಇದ್ದರೆ ಗ್ರಾಮ ಸಭೆ ಮಾಡಬೇಕು. ಆದರೆ ಮಂಗಳವಾರದ ಸಭೆಗೆ ಬಂದಿದ್ದವರು ಕೇವಲ 30ರಿಂದ 40 ಜನ ಮಾತ್ರ. ಅಲ್ಲದೆ ಆಹ್ವಾನ ಪತ್ರಿಕೆಯಲ್ಲಿ ಹಾಕಿದ್ದ ಗಣ್ಯರು ಸಭೆಗೆ ಗೈರು ಹಾಜರಾಗಿದ್ದರು ಎಂದು ತಿಳಿಸಿದರು.ಸಮಸ್ಯೆ ಪರಿಹರಿಸಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು ಇಲ್ಲದ ಮೇಲೆ ಸಭೆ ನಡೆಸುವುದರಲ್ಲಿ ಅರ್ಥ ಇಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ಯುವ ಮುಖಂಡರಾದ ಗುರುಪ್ರಸಾದ, ಉಮೇಶ್ ಹಾಗೂ ಹಸಿರು ಸೇನೆಯ ಯುವ ಘಟಕದ ಅಧ್ಯಕ್ಷರಾದ ಎನ್.ಆರ್.ಸುರೇಂದ್ರ ಮೊದಲಾದವರು ಸಭೆ ನಡೆಯುವುದಕ್ಕೆ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ನೋಡಲ್ ಅಧಿಕಾರಿ ಪುಟ್ಟಲಿಂಗಯ್ಯರವರು ಸಭೆಯನ್ನು ಮುಂದೂಡಿದರು ಎಂದು ಸುಂದರೇಶ್ ಪ್ರಕಟಣೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.