ಶನಿವಾರ, ಮೇ 8, 2021
19 °C

ಜನರ ಸಮಸ್ಯೆ ನಿವಾರಣೆಗೆ ಮೊದಲ ಆದ್ಯತೆ:ಬಾವಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರತ್ಕಲ್: ನನ್ನ ಕ್ಷೇತ್ರದ ಜನತೆಯೊಂದಿಗೆ ನಿರಂತರವಾಗಿ ಸಂಪರ್ಕ ಇಟ್ಟುಕೊಂಡು ಅವರ ಸಮಸ್ಯೆ ಹಾಗೂ ಅಭಿವೃದ್ಧಿಗೆ ಸ್ಪಂದಿಸುವುದು ನನ್ನ ಮೊದಲ ಆದ್ಯತೆ ಎಂದು ಶಾಸಕ ಮೊದಿನ್ ಬಾವಾ ಹೇಳಿದರು.ಹೊಗೆದಿಡ್ಡು ಶ್ರಿ ನಾಗಬ್ರಹ್ಮ ಸ್ಥಾನ ಸೇವಾ ಟ್ರಸ್ಟ್‌ನ ಶ್ರಿ ನಾಗಬ್ರಹ್ಮ ಹಾಗೂ ಪರಿವಾರ ಶಕ್ತಿಗಳ ನಾಲ್ಕನೇ ವರ್ಷದ ಪ್ರತಿಷ್ಠಾ ಮಹೋತ್ಸವದ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕ್ಷೇತ್ರದ ಪ್ರಧಾನ ಕಾರ್ಯದರ್ಶಿ, ದುರ್ಗಾ ಡೆವಲಪರ್ಸ್‌ನ ಪುಂಡಲೀಕ ಹೊಸಬೆಟ್ಟು, ಉದ್ಯಮಿ ಶರಣ್ಯ ಬೋಟ್ ಮಾಲಕ ಶರತ್ ಎಲ್.ಕರ್ಕೇರ, ಹೊಸಬೆಟ್ಟು ಸತ್ಯ ಜಾರಂದಾಯ ಧೂಮಾವತಿ ದೈವಸ್ಥಾನದ ಮೊಕ್ತೇಸರರಾದ ಪುರಂದರ ಗುರಿಕಾರ,

ಶೇಷಪ್ಪ ಗುರಿಕಾರ, ಜತೆ ಕಾರ್ಯದರ್ಶಿ ಸುರೇಂದ್ರ ಆಚಾರ್ಯ, ಅನ್ನಪೂರ್ಣ ಪರ್ಸಿನ್ ಬೋಟ್‌ನ ಪಾಲುದಾರರಾದ ಪ್ರವೀಣ್ ಸಾಲ್ಯಾನ್, ಶೇಖರ ಕರ್ಕೇರ, ವಿಠಲ ಕಿರೋಡಿಯನ್, ಅರುಣ್ ,ದಿನೇಶ್ ದೇವಾಡಿಗ, ಶಿವರಾಂ ಗುಡ್ಡೆಕೊಪ್ಲ  ,ಹೊಸಬೆಟ್ಟು ಮಹಿಳಾ ಮೊಗವೀರ ವೇದಿಕೆಯ ಸದಸ್ಯೆಯರು ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.