ಜನವರಿಗೆ ಕಾರು ದುಬಾರಿ

7
ಮಾರುತಿ ಗರಿಷ್ಠ ರೂ 20000 ಬೆಲೆ ಏರಿಕೆ

ಜನವರಿಗೆ ಕಾರು ದುಬಾರಿ

Published:
Updated:
ಜನವರಿಗೆ ಕಾರು ದುಬಾರಿ

ನವದೆಹಲಿ (ಪಿಟಿಐ): ನೂತನ ವರ್ಷ 2013ರಲ್ಲಿ ಹೊಸ ಕಾರು ಖರೀದಿ ದುಬಾರಿ ಆಗಲಿದೆ. ದೇಶದಲ್ಲೇ ಅತಿಹೆಚ್ಚು ಕಾರು ತಯಾರಿಸುವ `ಮಾರುತಿ ಸುಜುಕಿ ಇಂಡಿಯ'(ಎಂಎಸ್‌ಐ) ಸೇರಿದಂತೆ ವಿವಿಧ ಕಾರು ಕಂಪೆನಿಗಳು ಬೆಲೆ ಏರಿಕೆಗೆ ಮುಂದಾಗಿವೆ. ಮಾರುತಿ ಮತ್ತು ಟೊಯೊಟಾ ಕಾರುಗಳ ಬೆಲೆ ಶೇ 1ರಿಂದ 2ರಷ್ಟು ಹೆಚ್ಚಲಿದೆ. ಹೋಂಡಾ ಕಾರ್ಸ್‌ ಇಂಡಿಯ, ಫೋಕ್ಸ್‌ವ್ಯಾಗನ್ ಇಂಡಿಯ ಕಂಪೆನಿಗಳೂ ಕಾರು ಬೆಲೆ ಹೆಚ್ಚಿಸುವ ಚಿಂತನೆಯಲ್ಲಿಯೇ ಇವೆ.ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕುಸಿದಿರುವುದು ಲಾಭ ಗಳಿಕೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಹೀಗಾಗಿ ಕಾರುಗಳ ಬೆಲೆ ಏರಿಕೆ ಅನಿವಾರ್ಯವಾಗಿದೆ. ವಿವಿಧ ಮಾದರಿಗಳಿಗೆ ಅನುಗುಣವಾಗಿ ದರ ಹೆಚ್ಚಳವಾಗಲಿದೆ. ಗರಿಷ್ಠ ಏರಿಕೆರೂ20000 ಇರಲಿದೆ ಎಂದು `ಎಂಎಸ್‌ಐ'ನ ಮಾರಾಟ ವಿಭಾಗ ಮುಖ್ಯ ನಿರ್ವಹಣಾಧಿಕಾರಿ ಮಯಾಂಕ್ ಪಾರೀಕ್ ಗುರುವಾರ ತಿಳಿಸಿದರು.ಕಂಪೆನಿ ಸದ್ಯ ಮಾರುತಿ-800ದಿಂದ ಆರಂಭಿಸಿ ಜಪಾನ್‌ನಿಂದ ಆಮದು ಮಾಡಿಕೊಳ್ಳುವ `ಕಿಝಶಿ'ವರೆಗೆ ಹಲವು ಮಾದರಿ ಕಾರುಗಳನ್ನು ಮಾರಾಟ ಮಾಡುತ್ತಿದೆ. ಈ ಕಾರುಗಳ ಆರಂಭಿಕ   (ಎಕ್ಸ್‌ಷೋರೂಂ) ಬೆಲೆರೂ2.09 ಲಕ್ಷದಿಂದರೂ17.52 ಲಕ್ಷದವರೆಗೂ ಇದೆ.ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ        `ಎಂಎಸ್‌ಐ' ಲಾಭರೂ227.45 ಕೋಟಿಗೆ ಕುಸಿದಿದ್ದಿತು. ಅಂದರೆ, ಲಾಭ ಪ್ರಮಾಣ ಶೇ 5.41ರಷ್ಟು ಇಳಿದ್ದಿತು.

ಟೊಯೊಟಾ ಕಿರ್ಲೋಸ್ಕರ್: ಜನವರಿ 1ರಿಂದಲೇ ತನ್ನ ಎಲ್ಲ ಮಾದರಿ ಕಾರುಗಳ ಬೆಲೆಯನ್ನು ಶೇ 1ರಿಂದ ಶೇ 2ರಷ್ಟು ಹೆಚ್ಚಿಸುವುದಾಗಿ `ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್'(ಟಿಕೆಎಂ) ವಕ್ತಾರ ಗುರುವಾರ ಸುದ್ದಿಸಂಸ್ಥೆಗೆ ತಿಳಿಸಿದರು.ಸದ್ಯ `ಟಿಕೆಎಂ' ಹ್ಯಾಚ್‌ಬ್ಯಾಕ್ ಶೈಲಿ ಕಾರು ಇಟಿಯೋಸ್ ಲಿವಾ (ದೆಹಲಿ ಎಕ್ಸ್‌ಷೋರೂಂ ಬೆಲೆ ರೂ. 4.44 ಲಕ್ಷ)ದಿಂದ ಆರಂಭಿಸಿ ಕ್ರೀಡಾ ಬಳಕೆಯ ಆಮದು ಕಾರು ಲ್ಯಾಂಡ್ ಕ್ರೂಸರ್(ರೂ. 99.27ಲಕ್ಷ)ವರೆಗೂ ಹತ್ತಾರು ಮಾದರಿಗಳನ್ನು ಮಾರಾಟ ಮಾಡುತ್ತಿದೆ.ಜನರಲ್ ಮೋಟಾರ್ಸ್: `ಸ್ಪಾರ್ಕ್'(ಎಕ್ಸ್ ಷೋರೂಂ ರೂ. 3.32) ಮಾದರಿಯೊಂದಿಗೆ ಸಣ್ಣ ಕಾರು ಮಾರುಕಟ್ಟೆಗೆ ಸ್ಪರ್ಧೆ ನೀಡುತ್ತಿರುವ ಜನರಲ್ ಮೋಟಾರ್ಸ್ ಸಹ ತನ್ನೆಲ್ಲ ಕಾರುಗಳ ಬೆಲೆಯನ್ನೂ ಶೇ 1ರಿಂದ ಶೇ 3ರವರೆಗೂ ಏರಿಸುವುದಾಗಿ ಹೇಳಿದೆ.ಫೋಕ್ಸವ್ಯಾಗನ್: ಬಿಡಿಭಾಗ ಗಳು ದುಬಾರಿಯಾಗಿರುವ ಪರಿಣಾಮ ಕಾರು ತಯಾರಿಕೆ ವೆಚ್ಚವೂ ಹೆಚ್ಚಿದೆ. ಹಾಗಾಗಿ ಕಾರು ಬೆಲೆ ಏರಿಕೆ ಅನಿವಾರ್ಯ ಎಂದು `ಫೋಕ್ಸ್‌ವ್ಯಾಗನ್ ಇಂಡಿಯ' ವಕ್ತಾರ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry