ಮಂಗಳವಾರ, ಜನವರಿ 28, 2020
21 °C

ಜನವರಿಯಲ್ಲೂ ಕೊಬ್ಬರಿ ತೆಂಗಿಗೆ ಉತ್ತಮ ಧಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಯಮತ್ತೂರು(ಪಿಟಿಐ): ಹಬ್ಬ, ಜಾತ್ರೆ ಗಳ ಸಂದರ್ಭವಾಗಿರುವುದರಿಂದ 2014  ಜನವರಿ ಅಂತ್ಯದವರೆಗೂ ತೆಂಗಿನ ಕಾಯಿ ತಲಾ 1ಕ್ಕೆ ₨15ರಿಂದ 16 ಮತ್ತು ಕೊಬ್ಬರಿ ಧಾರಣೆ ಕೆ.ಜಿ.ಗೆ ₨75ರಿಂದ 82ರಷ್ಟು ಇರಲಿದೆ ಎಂದು ತಮಿಳುನಾಡು ಕೃಷಿ ವಿಶ್ವವಿದ್ಯಾ ಲಯ ತಿಳಿಸಿದೆ.ತೆಂಗಿನಕಾಯಿಗೆ ಪೊಲ್ಲಾಚ್ಚಿ ಮಾರುಕ ಟ್ಟೆಯಲ್ಲಿ, ಕೊಬ್ಬರಿಗೆ ಕೊಯಮತ್ತೂರು, ಈರೋಡ್‌ ಜಿಲ್ಲೆಯ ಮಾರುಕಟ್ಟೆಗಳಲ್ಲಿ ಈ ಬೆಲೆ ಲಭಿಸುತ್ತಿದೆ. ಕರ್ನಾಟಕ, ಆಂಧ್ರ ಪ್ರದೇಶದಿಂದ ಕೊಬ್ಬರಿ ಆವಕ ತಗ್ಗಿರುವು ದರಿಂದ ಕೇರಳ, ತಮಿಳುನಾಡು ಮಾರು ಕಟ್ಟೆಯಲ್ಲಿ ಸರಕಿಗೆ ಕೊರತೆ ಉಂಟಾಗಿದೆ. ಇದೂ ಕೂಡ ಧಾರಣೆ ಮೇಲ್ಮಟ್ಟದಲ್ಲೇ ಇರಲು ಕಾರಣ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಕ್ರಿಯಿಸಿ (+)