ಭಾನುವಾರ, ಜನವರಿ 26, 2020
23 °C
ಫೋಕ್ಸ್‌ವ್ಯಾಗನ್‌ ಶೇ 2.5 ಬೆಲೆ ಏರಿಕೆ

ಜನವರಿಯಿಂದ ಕಾರು ದುಬಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಹೊಸ ವರ್ಷ ದಲ್ಲಿ ಕಾರು ಖರೀದಿಸೋಣ ಎಂದು ನಿರ್ಧರಿಸಿರುವವರಿಗೆ ಕಹಿ ಸುದ್ದಿ. ಮಾರುತಿ ಸುಜುಕಿ, ಹುಂಡೈ ಮೋಟಾರ್‌, ಫೋಕ್ಸ್‌ವ್ಯಾಗನ್‌ ಸೇರಿ ದಂತೆ ಪ್ರಮುಖ ಕಂಪೆನಿಗಳು ಜನವರಿ ಯಿಂದ ಕಾರುಗಳ ಬೆಲೆ ಹೆಚ್ಚಿಸುವುದಾಗಿ ಹೇಳಿವೆ.ಕಚ್ಚಾ ವಸ್ತುಗಳು ಮತ್ತು ತಯಾರಿಕಾ ವೆಚ್ಚ ಹೆಚ್ಚಿರುವ ಹಿನ್ನೆಲೆ­ಯಲ್ಲಿ ಜನವರಿ ಯಿಂದ ಕಾರುಗಳ ಬೆಲೆ­ಯನ್ನು ಶೇ 2.5 ರಷ್ಟು ಹೆಚ್ಚಿಸುವುದಾಗಿ ಜರ್ಮನಿ ಮೂಲದ ಕಾರು ತಯಾರಿಕಾ ಕಂಪೆನಿ ಫೋಕ್ಸ್‌­ವ್ಯಾಗನ್‌ ಹೇಳಿದೆ. ಇದರಿಂದ ‘ಪೊಲೊ’ ‘ವೆಂಟೊ’, ‘ಜೆಟ್ಟಾ’ ಮಾದರಿ ಗಳು ತುಟ್ಟಿಯಾ­ಗಲಿವೆ.ವಿಲಾಸಿ ಕಾರುಗಳಾದ ‘ಬಿಎಂಡಬ್ಲ್ಯು’, ಆಡಿ ಮತ್ತು ಹೋಂಡಾ ಕಾರುಗಳು ಕೂಡ ಬೆಲೆ ಹೆಚ್ಚಿಸಿಕೊಳ್ಳಲಿವೆ.

‘ಪರಿಷ್ಕೃತ ದರ ಜ. 1ರಿಂದಲೇ ಜಾರಿಗೆ ಬರಲಿದೆ. ಕಳೆದ ಕೆಲವು ತಿಂಗ­ಳಿಂದ ನಿರ್ಮಾಣ ವೆಚ್ಚ ಗಣನೀಯವಾಗಿ ಹೆಚ್ಚಿದೆ. ಈ ಹೆಚ್ಚುವರಿ ವೆಚ್ಚದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಿದೆ’ ಎಂದು ಫೋಕ್ಸ್‌­ವ್ಯಾಗನ್‌ ಕಂಪೆನಿ ಮಾರು ಕಟ್ಟೆ ಮುಖ್ಯಸ್ಥ ಅರವಿಂದ್‌ ಸಕ್ಸೇನಾ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಡಸ್ಟರ್‌ ಶೇ 2ರಷ್ಟು ತುಟ್ಟಿ

ಮಹೀಂದ್ರಾ ಅಂಡ್‌ ಮಹೀಂದ್ರಾ ಕಂಪೆನಿ ಜನವರಿಯಿಂದ ವಾಣಿಜ್ಯ ಬಳಕೆ ಮತ್ತು ಪ್ರಯಾಣಿಕ ವಾಹನಗಳ ಬೆಲೆ ಯನ್ನು ಶೇ 2ರಷ್ಟು ಹೆಚ್ಚಿಸುವುದಾಗಿ ಹೇಳಿದೆ. ಕಂಪೆನಿ ಕೂಡ ಬೆಲೆ ಏರಿಕೆಗೆ ತಯಾರಿಕಾ ವೆಚ್ಚ ಹೆಚ್ಚಿರುವುದೇ ಕಾರಣ ಎಂದಿದೆ. ‘ಡಸ್ಟರ್‌‘, ‘ಪ್ಲಸ್‌‘ ಮಾದರಿ ಖರೀದಿ­ಸಬೇಕೆಂ­ದುಕೊಂ­ಡವರಿಗೆ  ಜೇಬು ಭಾರವಾಗಲಿದೆ.

ಪ್ರತಿಕ್ರಿಯಿಸಿ (+)