ಜನಸಂಖ್ಯೆ ಮುಖ್ಯವಲ್ಲ, ಸಂಕಲ್ಪ ಮುಖ್ಯ

7

ಜನಸಂಖ್ಯೆ ಮುಖ್ಯವಲ್ಲ, ಸಂಕಲ್ಪ ಮುಖ್ಯ

Published:
Updated:
ಜನಸಂಖ್ಯೆ ಮುಖ್ಯವಲ್ಲ, ಸಂಕಲ್ಪ ಮುಖ್ಯ

ತುಮಕೂರು: ಜನಸಂಖ್ಯೆ ಮುಖ್ಯವಲ್ಲ,  ಮನಸಿನ ಸಂಕಲ್ಪ, ಮನೋಬಲ ಮುಖ್ಯ ಎಂದು ದಾವಣಗೆರೆ ಗುತ್ತೂರು ಪ್ರಭುಲಿಂಗ ಸ್ವಾಮೀಜಿ ತಿಳಿಸಿದರು.ಉಪ್ಪಾರಹಳ್ಳಿಯಲ್ಲಿ ಜಿಲ್ಲಾ ನೇಕಾರ ಪದ್ಮಶಾಲಿ ಸಂಘ ಆಯೋಜಿಸಿದ್ದ ಮಾರ್ಕಂಡೇಯ ಜಯಂತಿ, ಸಮುದಾಯ ಭವನದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಮುದಾಯ ಭವನ ನಿರ್ಮಿಸಲು ಭಕ್ತರು, ಸಮಾಜದ ಬಂಧುಗಳು ನೆರವು ನೀಡುವುದರಲ್ಲಿ ಅನುಮಾನ ಬೇಡ. ನೇಕಾರ ಸಮುದಾಯದ ಒಳಪಂಗಡಗಳು ಒಂದೇ ವೇದಿಕೆಯಲ್ಲಿ ಒಗ್ಗೂಡಿದರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.ಸಮಾಜದ ಅಭಿವೃದ್ಧಿಗೆ ವಿದ್ಯಾಭ್ಯಾಸ ಮುಖ್ಯ. ಪದ್ಮಶಾಲಿ ಜನಾಂಗದ ಸಮುದಾಯ ಭವನದ ಜೊತೆಗೆ ಹಾಸ್ಟೆಲ್ ನಿರ್ಮಿಸಬೇಕು. ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಂಸದರ ನಿಧಿಯಿಂದ 5 ಲಕ್ಷ  ರೂಪಾಯಿ ನೀಡುವ ಭರವಸೆ ನೀಡಿದರು.ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ್ ಮಾತನಾಡಿ, ನೇಕಾರಲ್ಲಿ 26 ಒಳಪಂಗಡಗಳಿವೆ. ಎಲ್ಲರೂ ಒಗ್ಗೂಡುವಂತೆ ಕೈ ಜೋಡಿಸಿ ಮನವಿ ಮಾಡುತ್ತೇನೆ. ತುಮಕೂರಿನಲ್ಲಿ ನೇಕಾರ ಪದ್ಮಶಾಲಿ ಸಮುದಾಯ ಭವನಕ್ಕೆ 10 ಲಕ್ಷ ರೂಪಾಯಿ ಬಿಡುಗಡೆ ಮಾಡುವುದಾಗಿ ತಿಳಿಸಿದರು. ತುಮಕೂರು ಜಿಲ್ಲಾ ನೇಕಾರ ಪದ್ಮಶಾಲಿ ಸಂಘದ ಅಧ್ಯಕ್ಷರಾದ ನ್ಯಾಯಂ ಗೋವಿಂದಪ್ಪ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್. ಹುಲಿ ನಾಯ್ಕರ್, ಹಿರೇಮಠದ ಅಧ್ಯಕ್ಷ ಡಾ. ಶಿವಾನಂದ ಶಿವಾನಂದ ಸ್ವಾಮೀಜಿ, ಪದ್ಮಶಾಲಿ ಸಂಘದ ಉಪಾಧ್ಯಕ್ಷ ನೀಲಂ ರಾಮಣ್ಣ, ವೈ.ವಿ. ಪ್ರಕಾಶ್, ಕಾರ್ಯದರ್ಶಿ ಪ್ರಾಣನಾಥಂ ಗಿರೀಶ್, ಮುಖಂಡರಾದ ಕನಮ್ಯಾಕಲು ನಂಜಪ್ಪ, ಕೆ. ಗಂಗಪ್ಪ, ಕೃಷ್ಣಯ್ಯ, ಜಿಂಕಾ ನರಸಿಂಹಮೂರ್ತಿ, ಮೇಡ ರಾಮಕೃಷ್ಣ, ಮೇರುನಾಥ್, ಮೇಡ ಶ್ರೀಧರ್, ಗುಂಟಿ ಭಾನುಪ್ರಕಾಶ್, ನಿವೃತ್ತ ಶಿಕ್ಷಕ ಬಿ. ನಾಗರಾಜು, ವೈ. ಗೋಪಾಲಯ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry