ಜನಸಂದಣಿ ವೇಳೆ ಕುಂಭಮೇಳಕ್ಕೆ ಭೇಟಿ ನೀಡದಂತೆ ಸಲಹೆ

7

ಜನಸಂದಣಿ ವೇಳೆ ಕುಂಭಮೇಳಕ್ಕೆ ಭೇಟಿ ನೀಡದಂತೆ ಸಲಹೆ

Published:
Updated:

ಲಖನೌ (ಐಎಎನ್‌ಎಸ್): ಜನವರಿ 14ರಿಂದ ಅಲಹಾಬಾದ್‌ನಲ್ಲಿ ಆರಂಭಗೊಳ್ಳುವ ಕುಂಭಮೇಳಕ್ಕೆ, ಜನಸಂದಣಿ ಹೆಚ್ಚಾಗಿರುವ ದಿನಗಳಲ್ಲಿ ಗಣ್ಯರು ಭೇಟಿ ನೀಡಬಾರದು ಎಂದು ಉತ್ತರ ಪ್ರದೇಶ ಸರ್ಕಾರ ಕೋರಿದೆ.`ಮಕರ ಸಂಕ್ರಾಂತಿ ಪ್ರಯುಕ್ತ ಮಾರ್ಚ್ 10ರ ವರೆಗೆ ನಡೆಯುವ ಕುಂಭಮೇಳದ ಪ್ರಮುಖ ದಿನಗಳಲ್ಲಿ ಪವಿತ್ರ ಸ್ನಾನಕ್ಕೆ ನಿರೀಕ್ಷೆಗೂ ಮೀರಿ ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಈ ವೇಳೆ, ಗಣ್ಯರಿಗೆ ಸರಿಯಾದ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುವುದಿಲ್ಲ' ಎಂದು ಸಂಪುಟ ಕಾರ್ಯದರ್ಶಿ ಅಲೋಕ್ ಕುಮಾರ್ ಅವರು ಈ ಕುರಿತು ಎಲ್ಲಾ ಗಣ್ಯರಿಗೂ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry