ಶುಕ್ರವಾರ, ಮಾರ್ಚ್ 5, 2021
27 °C
ಚೀಲೂರು: ಜನಸಂಪರ್ಕ ಸಭೆಯಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಅಭಿಪ್ರಾಯ

ಜನಸಂಪರ್ಕ ಸಭೆಗಳಲ್ಲಿ ಸಮಸ್ಯೆಗಳಿಗೆ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನಸಂಪರ್ಕ ಸಭೆಗಳಲ್ಲಿ ಸಮಸ್ಯೆಗಳಿಗೆ ಪರಿಹಾರ

ಹೊನ್ನಾಳಿ:  ‘ಜನಸಂಪರ್ಕ ಸಭೆಗಳಿಂದ ತಾಲ್ಲೂಕಿನಲ್ಲಿ ಸಾಕಷ್ಟು ಸಮಸ್ಯೆಗಳಿಗೆ  ಪರಿಹಾರ ಸಿಕ್ಕಿದೆ’ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು. ತಾಲ್ಲೂಕಿನ ಗೋವಿನಕೋವಿ–1ನೇ ಹೋಬಳಿ ವ್ಯಾಪ್ತಿಯ  ಚೀಲೂರು ಗ್ರಾಮದ ಬಸವೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆ ಉದ್ಘಾಟಿಸಿದ ಶಾಸಕರು, ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಗಳನ್ನು ವಿತರಿಸಿ ಮಾತನಾಡಿದರು.‘ಗೋವಿನಕೋವಿ– 1 ನೇ ಹೋಬಳಿ ವ್ಯಾಪ್ತಿಯಲ್ಲಿ  62 ಜನರಿಗೆ ಸಂಧ್ಯಾ ಸುರಕ್ಷಾ, 22 ಮಂದಿಗೆ ವಿಧವಾ ವೇತನ, 17 ಜನರಿಗೆ ಅಂಗವಿಕಲ ವೇತನ, ಎರಡು ಜೋಡಿ ಆದರ್ಶ ವಿವಾಹಿತರಿಗೆ, ಪಹಣಿ ವ್ಯತ್ಯಾಸ ಸರಿಪಡಿಸಿದ 6 ಜನ ಫಲಾನುಭವಿಗಳಿಗೆ ಹಾಗೂ ಮುಖ್ಯ ಮಂತ್ರಿ ಪರಿಹಾರ ನಿಧಿ ಪಡೆದುಕೊಂಡು ಮೂರು ಜನ ಫಲಾನುಭವಿಗಳು ಸೇರಿ ಒಟ್ಟು 112 ಫಲಾನುಭವಿಗಳು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ’ ಎಂದರು.ಪ್ರತಿ ಶನಿವಾರ ತಾಲ್ಲೂಕು ಕಚೇರಿಯಲ್ಲಿ ಅಕ್ರಮ ಸಕ್ರಮ ಸಮಿತಿ ಸಭೆಯನ್ನು ಕರೆಯಲಾಗುತ್ತಿದ್ದು, ಅದಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಅಲ್ಲಿಯೇ ಪರಿಹಾರ ನೀಡುವುದಾಗಿ ಶಾಂತನಗೌಡ ಹೇಳಿದರು.ಜಿ.ಪಂ. ಅಧ್ಯಕ್ಷೆ ಉಮಾ ರಮೇಶ್ ಮಾತನಾಡಿ, ‘ಸರ್ಕಾರ ತಮ್ಮ ಮನೆ ಬಾಗಿಲಿಗೆ ಸೇವೆ ನೀಡುವ ಸಲುವಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುತ್ತಿದ್ದು, ಅರ್ಹ ಫಲಾನುಭವಿಗಳು ಸೌಲಭ್ಯಗಳನ್ನು ಪಡೆದು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದರು.ಚೀಲೂರು ಜಿ.ಪಂ. ಸದಸ್ಯ ಡಿ.ಜಿ. ವಿಶ್ವನಾಥ್ ಮಾತನಾಡಿ, ‘ಚೀಲೂರು ವ್ಯಾಪ್ತಿಯಲ್ಲಿ ಬಹಳಷ್ಟು ಗ್ರಾಮಗಳು ಪೋಡಿಮುಕ್ತ ಆಗಿಲ್ಲ ಎಂದರು. ಆದ್ದರಿಂದ ಅಧಿಕಾರಿಗಳು ತಕ್ಷಣವೇ ಪೋಡಿಮುಕ್ತವನ್ನಾಗಿ ಮಾಡಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು’ ಎಂದರು.ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರ ಸ್ವಾಮಿ, ತಾ.ಪಂ. ಅಧ್ಯಕ್ಷೆ ಸುಲೋಚನಮ್ಮ ಫಾಲಾಕ್ಷಪ್ಪ, ಸದಸ್ಯೆ ಛಾಯಾ ದೇವರಾಜ ಅರಸ್, ಗ್ರಾ.ಪಂ. ಅಧ್ಯಕ್ಷೆ ಅನುಸೂಯಮ್ಮ ಅಜೇಯ, ಸದಸ್ಯರಾದ ಸಿ.ಎಲ್. ಸತೀಶ್, ಗೋವಿನಕೋವಿ ಗ್ರಾ.ಪಂ. ಅಧ್ಯಕ್ಷೆ ರೇಣುಕಮ್ಮ, ಚಿ. ಕಡದಕಟ್ಟೆ ಗ್ರಾ.ಪಂ. ಅಧ್ಯಕ್ಷ ಅಸ್ಲಂಬಾಷಾ, ಟಿ.ಜಿ. ಹಳ್ಳಿ ಗ್ರಾ.ಪಂ. ಅಧ್ಯಕ್ಷ ನಾಗರಾಜ ರಾವ್, ಗಂಗನಕೋಟೆ ಗ್ರಾ.ಪಂ. ಅಧ್ಯಕ್ಷೆ ಜಯಮ್ಮ ಮಂಜಪ್ಪ, ಬಸವನಹಳ್ಳಿ ಗ್ರಾ.ಪಂ. ಅಧ್ಯಕ್ಷ ಗೌರಮ್ಮ ಸುರೇಶ್, ತಹಶೀಲ್ದಾರ್ ಎನ್.ಜೆ. ನಾಗರಾಜ್, ತಾ.ಪಂ. ಇಒ ಡಾ.ಶಿವಪ್ಪ ಹುಲಿಕೆರೆ, ಉಪ ತಹಶೀಲ್ದಾರ್ ನಾಗರಾಜ್, ಹಾಗೂ ಸುರೇಶ್ ನಾಯ್ಕ, ಕಂದಾಯ ಇಲಾಖೆಯ ರಮೇಶ್, ಗಣೇಶ್, ಪರಮೇಶನಾಯ್ಕ  ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.