ಬುಧವಾರ, ನವೆಂಬರ್ 20, 2019
21 °C

ಜನಸಾಮಾನ್ಯರ ಪಕ್ಷ ಬೆಂಬಲಿಸಿ: ರುದ್ರಯ್ಯ

Published:
Updated:

ಚಿಕ್ಕಮಗಳೂರು: ಜನವಿರೋಧಿ ವರ್ಗಗಳ ಎಲ್ಲ ರಾಜಕೀಯ ಪಕ್ಷಗಳನ್ನು ತಿರಸ್ಕರಿಸಿ ಈ ಚುನಾವಣೆಯಲ್ಲಿ ದುಡಿಯುವರ, ಜನಸಾಮಾನ್ಯರ ಪಕ್ಷ ಸಿಪಿಐಎಂಎಲ್ ರೆಡ್‌ಸ್ಟಾರ್ ಪಕ್ಷ ಬೆಂಬಲಿಸಬೇಕೆಂದು ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಮನವಿ ಮಾಡಿದರು.ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯವನ್ನಾಳಿದ ಕಾಂಗ್ರೆಸ್, ಬಿಜೆಪಿ ಮತ್ತು ಜಾತ್ಯತೀತ ಜನತಾದಳ ಪಕ್ಷಗಳು ಬೇರೆ, ಬೇರೆಯಾದರೂ ಅವುಗಳ ನೀತಿ ಮಾತ್ರ ಒಂದೇ ಆಗಿದೆ. ಜನರ ಮೂಲ ಸಮಸ್ಯೆಗಳನ್ನು ಬಗೆಹರಿಸಲಾಗದೆ. ಈ ನಾಡಿನ ನೆಲ, ಜಲ, ಸಂಪತ್ತನ್ನು ಬಂಡವಾಳಶಾಹಿ ಮತ್ತು ಕಾರ್ಪೋರೆಟ್ ಕುಟುಂಬಗಳಿಗೆ ಮಾರಾಟ ಮಾಡಿದ ಅಗ್ಗಳಿಗೆ ಈ ಪಕ್ಷಗಳಿಗೆ ಸಲ್ಲುತ್ತದೆ ಎಂದು ಟೀಕಿಸಿದರು.ರಾಷ್ಟ್ರೀಯ ಸಂಪತ್ತನ್ನು ವಿದೇಶ ದವರಿಗೆ ಮಾರಾಟ ಮಾಡಲು ಜನರ ಅನುಮತಿ ಕೇಳಲು ಈ ಚುನಾ ವಣೆ ಯಲ್ಲಿ ಸ್ಪರ್ಧಿಸುತ್ತಿವೆ. ಕುಡಿಯಲು ಸಮ ರ್ಪಕ ನೀರು ಕೊಡಲಾಗದೆ, ಬಡವರಿಗೆ ಭೂಮಿ ಹಂಚಲಾಗದೆ, ಸಿರಿವಂತರನ್ನು ಶ್ರೀಮಂತರನ್ನಾಗಿಸಲು,  ಬಡವರನ್ನು ಕಡುಬಡವರನ್ನಾಗಿಸಲು ಜನರ ಅನುಮತಿಗಾಗಿ ಚುನಾವಣೆಯಲ್ಲಿ ಮತ ಕೇಳಲು ಮುಂದಾಗುತ್ತಿವೆ. ಈ ವ್ಯವಸ್ಥೆ ಬದಲಾಯಿಸುವ ಶಕ್ತಿ ಹೊಂದಿರುವ ಮತದಾರರು, ಬಡವರ ಪರವಾಗಿ ದನಿ ಎತ್ತಿ ಹೋರಾಟ ನಡೆಸುವ ವ್ಯಕ್ತಿಗಳನ್ನು ಬೆಂಬಲಿಸ ಬೇಕೆಂದು ಮನವಿ ಮಾಡಿದರು.ಆರ್ಥಿಕ ರಂಗದ ಪುನರ್ ನಿರ್ಮಾಣ, ಒಕ್ಕಲುತನವನ್ನು ಮುಕ್ತಗೊಳಿಸುವುದು, ಸಮಾಜವಾದಿ ಹಕ್ಕುಗಳ ರಕ್ಷಣೆ, ಬಲವರ್ಧನೆ, ಸಾರ್ವಜನಿಕ ವಿತರಣಾ ವ್ಯವಸ್ಥೆ ಹಾಗೂ ಸಮಾಜ ಕಲ್ಯಾಣ ಕಾರ್ಯಕ್ರಮಗಳ ಮರು ಸ್ಥಾಪನೆ, ಜಾತ್ಯತಿತತೆ ಖಚಿ ತಪಡಿಸುವುದು, ನಿರ್ಜಾತಿ ರಾಜ್ಯದ ನಿರ್ಮಾಣಕ್ಕೆ ಹಂತಹಂತವಾಗಿ ಸಾಗುವುದು , ಮಹಿಳಾ ಸಮಾನತೆ ಖಚಿತಪಡಿಸುವುದು, ಆದಿವಾಸಿಗಳ ಹಕ್ಕು ರಕ್ಷಣೆ, ಪರಿಸರ ಸಂರಕ್ಷಣೆಗೆ ಮೊದಲ ಆದ್ಯತೆ, ಭ್ರಷ್ಟಾ ಚಾರ ನಿರ್ಮೂಲನೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ಕುರಿತು ಚುನಾ ವಣಾ ಪ್ರನಾಣಿಕೆ ಹೊರತರಲಾಗಿದೆ ಎಂದು ಹೇಳಿದರು.ಕಾಂಗ್ರೆಸ್, ಜನತಾದಳ, ಬಿಜೆಪಿ ಶ್ರೀಮಂತರ ಪ್ರತಿನಿಧಿಗಳು. ಈ ಪಕ್ಷಗಳಿಂದ ಚುನಾವಣೆಯಲ್ಲಿ ಜಯ ಗಳಿಸಿದವರು ಇದುವರೆಗೂ ಬಡವರ ಪರವಾಗಿ ಕೆಲಸ ಮಾಡಲಿಲ್ಲ. ಚುನಾವಣೆಯಲ್ಲಿ ಗೆಲುವು ಕಂಡಿರುವುದು ಸಿರಿತನ, ಸೋಲುಂಡಿ ರುವುದು ಬಡತನ ಎಂದರು.ಚುನಾವಣೆಯಲ್ಲಿ ಆಯ್ಕೆಯಾದವರು ಬಾಲಸುಬ್ರಹ್ಮಣ್ಯ ವರದಿ ಬಗ್ಗೆ ಚಕಾರ ಎತ್ತಲಿಲ್ಲ. ಮಲೆನಾಡು ಭೂಮಿಗೆ ಭೂಮಿತಿ ಕಾಯ್ದೆ ಜಾರಿಗೆ ಒತ್ತಾಯಿಸಿ ತುಟಿ ಬಿಚ್ಚಲಿಲ್ಲ. ಸಿಪಿಐ ನಿವೇಶನಕ್ಕಾಗಿ ಹೋರಾಟ ನಡೆಸುತ್ತಿದೆ. ಆದರೆ, ಸರ್ಕಾರಿ ಭೂಮಿಯಲ್ಲಿ ಜಾಗ ಕೇಳುತ್ತಿದೆ. ಈಗ ಸರ್ಕಾರಿ ಭೂಮಿ ಇಲ್ಲದಂತಾಗಿದೆ. ಆ ಭೂಮಿ ಉಳ್ಳವರು ಒತ್ತುವರಿ ಮಾಡಿದ್ದಾರೆ. ಒತ್ತುವರಿ ಮಾಡಿರುವವರ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಟೀಕಿಸಿದರು.ರಾಜ್ಯ ಸಮಿತಿ ಸದಸ್ಯ ಗಂಗಾಧರ, ಜಿಲ್ಲಾ ಕಾರ್ಯದರ್ಶಿ ಐ.ಎಂ. ಪೂರ್ಣೇಶ್, ಜಿಲ್ಲಾ ಅಭ್ಯರ್ಥಿಗಳಾದ ಕೆಳವಲ ಉಮೇಶ್, ಸುರೇಶ್, ಜಿಲ್ಲಾ ಸಮಿತಿ ಸದಸ್ಯರಾದ ಉಮೇಶ್, ಉದ್ದಪ್ಪ, ಬಸವರಾಜ್, ಮಹೇಶ್ ಇದ್ದರು.ಜನರಿಗೆ ಸ್ಪಂದಿಸಿದ್ದೇನೆ: ಧರ್ಮೇಗೌಡ

ಚಿಕ್ಕಮಗಳೂರು:
  `ಬೀರೂರು ಕ್ಷೇತ್ರವಿದ್ದಾಗ ಶಾಸಕನಾಗಿ 6 ಮೊರಾರ್ಜಿ ಶಾಲೆ ಮತ್ತು 9 ವಸತಿ ಶಾಲೆಗಳನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಬಡ ಜನರ ಆಶೋತ್ತರಗಳಿಗೆ ಪ್ರಮಾಣಿಕವಾಗಿ ಸ್ಪಂದಿಸಿದ್ದೇನೆ' ಎಂದು ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಧರ್ಮೇಗೌಡ ಹೇಳಿದರು.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಿಡಘಟ್ಟ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಅವರು ಮಾತನಾಡಿದರು.ಕಳಸಾಪುರ, ಬೆಳವಾಡಿ ಸುತ್ತಮುತ್ತ ಜನರು ಅನುಭವಿಸುತ್ತಿದ್ದ ನೀರಿನ ಸಮಸ್ಯೆ ನೀಗಿಸಲು ಮುಗುಳುವಳ್ಳಿ ಪಿಕಪ್ ಮಾಡಿಸಿ, ವಿದರ್ಭ ಯೋಜನೆಯಡಿ ಅನುದಾನ ಮಂಜುರಾತಿ ಮಾಡಿಸಿರುವುದು ಸುಳ್ಳಾದರೆ ಜನರಿಗೆ ತಲೆಬಾಗುತ್ತೇನೆ ಎಂದು ಸವಾಲು ಹಾಕಿದರು.

ಬಿಪಿಎಲ್ ಕಾರ್ಡ್‌ನಿಂದ ಹಿಡಿದು ಆಸ್ತಿ ಖಾತೆ ಹೆಸರಿಗೆ ವರ್ಗಾ ಯಿಸಿಕೊಳ್ಳುವವರೆಗೂ ಲಂಚದ ಹಾವಳಿ ತಾಂಡವವಾಡುತ್ತಿದೆ.ಭ್ರಷ್ಟಾಚಾರ, ಆಡಳಿತ ವೈಫಲ್ಯವನ್ನು ಕಾರ್ಯಕರ್ತರು ಮತದಾರರಿಗೆ ಮನ ಮುಟ್ಟುವಂತೆ ತಿಳಿಸಬೇಕು ಎಂದು ಕರೆನೀಡಿದರು.

ಎಚ್‌ಡಿಕೆ ಅಭಿಮಾನಿಗಳ ಸಂಘದ ಜಿಲ್ಲಾ ಅಧ್ಯಕ್ಷ ಹೊಲದಗದ್ದೆ ಗಿರೀಶ್, ಕ್ಷೇತ್ರ ಸಮಿತಿ ಅಧ್ಯಕ್ಷ ಚಂದ್ರಯ್ಯ, ಮುಖಂಡರಾದ ಸೋಮೇಶ್, ಪುಟ್ಟರಾಜು ಯೋಗೀಶ್ ಇತರರು ಹಾಜರಿದ್ದರು.ಕಾಂಗ್ರೆಸ್ ಅಭ್ಯರ್ಥಿ ಶಾಂತೇಗೌಡ ಪ್ರಚಾರ 

ಚಿಕ್ಕಮಗಳೂರು:
ತಾಲ್ಲೂಕಿನ ಪಿಳ್ಳೇನ ಹಳ್ಳಿ ಗ್ರಾಮದಲ್ಲಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಮತಯಾಚಿಸಿದರು.ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿ ಗಳು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಮಾಡುತ್ತಿರುವ ಅಪಪ್ರಚಾರಕ್ಕೆ ಮತ ದಾರರು, ಕಿವಿಗೊಡದೆ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಬೇಕೆಂದು ಮನವಿ ಮಾಡಿದರು.ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎನ್.ಎಸ್.ಚಂದ್ರಪ್ಪ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್ ಭ್ರಷ್ಟಾಚಾರದಿಂದ ಜನರು ಬೇಸತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂದರು.ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕಲ್ಮರಡಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಶ್ರೀನಿವಾಸಗೌಡ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಚಂದ್ರಶೇಖರಪ್ಪ, ಪಂಚಾಯಿತಿ ಸದಸ್ಯರಾದ ಲೋಕೇಶ್, ಸತೀಶ ನಾಯಕ್, ವೆಂಕಟೇಶ ನಾಯ್ಕ, ಮಂಜುನಾಥ, ಎನ್.ಡಿ.ಚಂದ್ರಪ್ಪ ಹಾಜರಿದ್ದರು.

ಪ್ರತಿಕ್ರಿಯಿಸಿ (+)