ಜನಸೇವೆಗಾಗಿ ಜೈಲಿಗೆ ಹೋಗಲೂ ಸಿದ್ಧ

7

ಜನಸೇವೆಗಾಗಿ ಜೈಲಿಗೆ ಹೋಗಲೂ ಸಿದ್ಧ

Published:
Updated:

ಕನಕಪುರ: ತಾಲ್ಲೂಕಿನ ಜನತೆಗೆ ಕೊಟ್ಟ ಭರವಸೆಯನ್ನು ಈಡೇರಿಸುವ ದಿಸೆಯಲ್ಲಿ ನಾನು ಜೈಲಿಗೂ ಹೋಗಲು ಸಿದ್ಧ ಎಂದು  ಶಾಸಕ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಹೇಳಿದರು.ಪಟ್ಟಣದ ದೇಗುಲಮಠದಲ್ಲಿ  ಹಮ್ಮಿಕೊಂಡಿದ್ದ ಎಂ.ಜಿ. ರಸ್ತೆ ಸಂತ್ರಸ್ತರಿಗೆ ಬದಲಿ ನಿವೇಶವನ್ನು ಲಾಟರಿ ಮೂಲಕ ಹಂಚಿಕೆ ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಎಂ.ಜಿ.ರಸ್ತೆ ವಿಸ್ತರಣೆ ಸಂದರ್ಭದಲ್ಲಿ ರಸ್ತೆಯ ಎರಡೂ ಬದಿಯ ಜನತೆ ತಮ್ಮ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ನಾನು ಇವರಿಗೆಲ್ಲಾ ಸಹಾಯ ಮಾಡುವ ಭರವಸೆ ನೀಡಿದ್ದೆ.ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತಂದು 13 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಆದರೆ ಕೆಲ ರಾಜಕೀಯ ವಿರೋಧಿಗಳು, ಸಂಘಟನೆ ಮುಖ್ಯಸ್ಥರು ಸಂತ್ರಸ್ತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. `ಶಿವಕುಮಾರ್ ತಮ್ಮ ಹಿಂಬಾಲಕರಿಗೆ ನಿವೇಶನಗಳನ್ನು ನೀಡಲು ಹೊರಟಿದ್ದಾರೆ~ ಎಂದು ಅಪಪ್ರಚಾರದಲ್ಲಿ ತೊಡಗಿದ್ದಾರೆ. ನಾನು ಏನು ಮಾಡಿದ್ದೆೀನೆಂಬುದು ಎಲ್ಲವೂ ನಿಮಗೆ ಗೊತ್ತಿದೆ. ಹಂಚಿಕೆಯು ಪಾರದರ್ಶಕವಾಗಿರಲಿ ಎಂದು ಸಾರ್ವಜನಿಕವಾಗಿ ದೇಗುಲಮಠದ ಆವರಣದಲ್ಲಿ ಲಾಟರಿ ಮೂಲಕ ಹಂಚಿಕೆ ಕಾರ್ಯವನ್ನು ಮಾಡಿದ್ದೆೀನೆ ಎಂದು ಹೇಳಿದರು.  ಸರ್ವೇ ನಂಬರ್ 505ರ ಪೇಟೆಕೆರೆ ಅಂಗಳದಲ್ಲಿ ಸಂತ್ರಸ್ತರಿಗೆ 9 ಎಕರೆ 28 ಗುಂಟೆ ಜಮೀನನ್ನು ಸಂಪುಟ ಸಭೆಯಲ್ಲಿಟ್ಟು ಮಂಜೂರು ಮಾಡಿಸಿ ಕಾನೂನು ಬದ್ದವಾಗಿ ನಿವೇಶವನ್ನು ರಚಿಸಲಾಗಿದೆ. ಆದರೆ ಕೆಲವರು ಕೆರೆ ಅಂಗಳವನ್ನು ಮುಚ್ಚಿ ನಿವೇಶನ ಮಾಡಲಾಗಿದೆ.ಯಡಿಯೂರಪ್ಪನವರು ಡೀನೋಟಿಫಿಕೇಷನ್ ಮಾಡಿ ಜೈಲಿಗೆ ಹೋದಂತೆ, ನನ್ನನ್ನೂ ಜೈಲಿಗೆ ಹಾಕುತ್ತಾರೆಂದು ಗುಲ್ಲು ಎಬ್ಬಿಸಲಾಗಿದೆ. ಹಾಗೊಂದು ವೇಳೆ ಆದರೆ ನಿಮಗಾಗಿ ನಾನು ಜೈಲಿಗೆ ಹೋಗಲೂ ಸಿದ್ಧನಿದ್ದೇನೆ ಎಂದು ಅವರು ಭಾವುಕರಾಗಿ ನುಡಿದರು.ಎಚ್.ಡಿ.ಕುಮಾರಸ್ವಾಮಿ ಮುಖ್ಯ ಮಂತ್ರಿಗಳಾಗಿದ್ದಾಗ ಕನಕಪುರದ ಎಂ.ಜಿ.ರಸ್ತೆ ಅಗಲೀಕರಣಕ್ಕಾಗಿ 50 ಕೋಟಿ ರೂ ಅಂದಾಜು ವೆಚ್ಚ ಮಾಡಿಸಿ ಜಾಹಿರಾತಿಗಾಗಿ 15 ಸಾವಿರವನ್ನೂ ಇಡದೆ ಕ್ಷೇತ್ರದಿಂದ ಪಲಾಯನ ಮಾಡಿದರು. ಆದರೆ ನಾನು ನಿಮಗೆ ಕೊಟ್ಟ ಭರವಸೆಯಂತೆ ಎಲ್ಲಾ ಕೆಲಸಗಳನ್ನು ಮಾಡಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದೆೀನೆ. ನಿಮ್ಮಿಂದ ನಾನು ಏನನ್ನೂ ಅಪೇಕ್ಷಿಸುವುದಿಲ್ಲ. ಬದಲಿಗೆ ನನ್ನ ಕೈ ಬಲಪಡಿಸಿ. ನಾನು ಬದುಕಿರುವ ತನಕ ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು. ಪುರಸಭೆ ಮುಖ್ಯಾಧಿಕಾರಿ ಕೆ. ಮಾಯಣ್ಣಗೌಡ ಮಾತನಾಡಿ, 194 ನಿವೇಶನಗಳನ್ನು ವಿಂಗಡಿಸಿ ಆದ್ಯತೆ ಮೇರೆಗೆ ಅರ್ಹ ಫಲಾನುಭವಿಗಳಿಗೆ ಲಾಟರಿ ಮೂಲಕ ಹಂಚಿಕೆ ಮಾಡಲಾಗುತ್ತಿದೆ ಎಂದರು.ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರವಿ, ಪುರಸಭೆ ಅಧ್ಯಕ್ಷ ಆರ್. ಕೃಷ್ಣಮೂರ್ತಿ, ಉಪಾಧ್ಯಕ್ಷೆ  ನಿರ್ಮಲಾ ಗುಂಡಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಮೋಹಿನ್,  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿಲೀಪ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಕನ್ಯಾ ರಂಗಸ್ವಾಮಿ, ಪುರಸಭಾ ಸದಸ್ಯರಾದ ಜಯರಾಮು, ಹೇಮಾವತಿ, ಶಂಕರ್ ನಾರಾಯಣ್ ಇನ್ನಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry