ಜನಸ್ನೇಹಿಗಳಾಗಿ: ವೈದ್ಯರಿಗೆ ಕಿವಿಮಾತು

ಭಾನುವಾರ, ಜೂಲೈ 21, 2019
22 °C

ಜನಸ್ನೇಹಿಗಳಾಗಿ: ವೈದ್ಯರಿಗೆ ಕಿವಿಮಾತು

Published:
Updated:

ಕೃಷ್ಣರಾಜಪುರ:  `ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳ ಸಮಸ್ಯೆಗೆ ಸ್ಪಂದಿಸಲು ವೈದ್ಯರು ಜನಸ್ನೇಹಿ ಗಳಾಗಬೇಕು' ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಕಿವಿಮಾತು ಹೇಳಿದರು.ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, `ನಿಜವಾದ ಅರ್ಹರು, ಬಡವರು, ನಿರ್ಗತಿಕರು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅವರಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದು ಸೇರಿದಂತೆ ಇಲ್ಲ ರೀತಿಯ ನೆರವುಗಳನ್ನು ವೈದ್ಯರು ನೀಡಬೇಕು' ಎಂದು ಅವರು ಸೂಚಿಸಿದರು.ಶಾಸಕ ಬೈರತಿ ಎ.ಬಸವರಾಜು, `ಎರಡೂ ಕ್ಷೇತ್ರಗಳ ವ್ಯಾಪ್ತಿಗೆ ಆಸ್ಪತ್ರೆ ಸೇರಿದೆ. ಹಾಗಾಗಿ 150 ಹಾಸಿಗೆಗೆ ವಿಸ್ತರಿಸಬೇಕು. ತುರ್ತು ಚಿಕಿತ್ಸಾ ಘಟಕ, ತೀವ್ರ ನಿಗಾ ಘಟಕಗಳನ್ನು ನಿರ್ಮಿಸ ಬೇಕು' ಎಂದು ಆಗ್ರಹಿಸಿದರು.ಜಿಲ್ಲಾ ಆರೋಗ್ಯಾಧಿಕಾರಿ ರಜನಿ, ಆಡಳಿತ ವೈದ್ಯಾಧಿಕಾರಿ ಶಿವಪ್ರಕಾಶ್, ತಾಲ್ಲೂಕು ವೈದ್ಯಾಧಿಕಾರಿ ಚಂದ್ರಶೇಖರ್ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry