ಜನಸ್ನೇಹಿ ಶೌಚಾಲಯ: ಗೇಟ್ಸ್‌ ನೆರವು

7

ಜನಸ್ನೇಹಿ ಶೌಚಾಲಯ: ಗೇಟ್ಸ್‌ ನೆರವು

Published:
Updated:

ನವದೆಹಲಿ (ಪಿಟಿಐ): ನೈರ್ಮಲ್ಯದ ಕೊರತೆ­­ಯಿಂದ ಆರೋಗ್ಯ ಸಮಸ್ಯೆ ಉಂಟಾ­­­ಗು­ವುದನ್ನು ತಪ್ಪಿಸುವ ಉದ್ದೇ­ಶ­­ದಿಂದ ಕೇಂದ್ರ ಸರ್ಕಾರವು ಬಿಲ್‌ ಮತ್ತು ಮೆಲಿಂಡಾ ಗೇಟ್ಸ್‌ ಪ್ರತಿ­ಷ್ಠಾನದ ಸಹ­ಭಾಗಿತ್ವ­ದಲ್ಲಿ ದೇಶ­ದೆಲ್ಲೆಡೆ ಜನ­ಸ್ನೇಹಿ ಶೌಚಾಲಯ­ಗಳನ್ನು ನಿರ್ಮಿಸ­ಲಿದೆ.ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರನ್ನು ಶುಕ್ರ­ವಾರ ಇಲ್ಲಿ ಭೇಟಿ ಮಾಡಿದ ಬಿಲ್‌ ಗೇಟ್ಸ್‌ ದೇಶ­ದಲ್ಲಿ ನೈರ್ಮಲ್ಯ ಕಾಪಾ­ಡಲು ಕೇಂದ್ರ ಸರ್ಕಾರ ಕೈಗೊಂಡಿ­ರುವ ಕ್ರಮಗಳ ಬಗ್ಗೆ ಮಾಹಿತಿ ಪಡೆ­ದರು.ಶೌಚಾಲಯ ಮತ್ತು ಒಳಚರಂಡಿ ನಿರ್ವಹಣೆಗೆ ವಿನೂತನ ತಂತ್ರಜ್ಞಾನ ಅಳ­ವಡಿಕೆ, ಸ್ಥಳೀಯ ಮಟ್ಟದಲ್ಲೇ ತ್ಯಾಜ್ಯ ವಿಲೇವಾರಿ ನಡೆಸುವ ವಿಕೇಂದ್ರೀ­ಕೃತ ಒಳಚರಂಡಿ ವ್ಯವಸ್ಥೆಗೆ ಉತ್ತೇಜನ, ನೈರ್ಮಲ್ಯ ಕ್ಷೇತ್ರಕ್ಕೆ ಬಲ ನೀಡುವುದು ಮತ್ತು ಶೌಚಾಲಯ ಬಳಕೆಗೆ ಉತ್ತೇಜನ ನೀಡುವ ಒಟ್ಟು ನಾಲ್ಕು ಪ್ರಮುಖ ಕ್ಷೇತ್ರಗಳಿಗೂ ನೆರವು ವಿಸ್ತರಿಸಲು ಸಚಿವರೊಂದಿಗಿನ ಚರ್ಚೆ­ಯಲ್ಲಿ ಬಿಲ್‌ ಗೇಟ್ಸ್‌ ಸಮ್ಮತಿಸಿದರು.ದೇಶದ ಹಿತ ಕಾಪಾಡುವ ನಿರ್ಧಾರ­ಗಳನ್ನು ತೆಗೆದುಕೊಳ್ಳಲು ಸರ್ಕಾರ ಸಿದ್ಧವಿದೆಯೇ ಎಂಬುದು ಅದರ ಮುಂದಿರುವ ನಿಜವಾದ ಪರೀಕ್ಷೆ. ಜನರಿಗೆ ಹಿತವಾಗದಿದ್ದರೂ ದೇಶಕ್ಕೆ ಹಿತ­ವಾಗುವ ನಿರ್ಧಾರಗಳನ್ನು ಕೈಗೊಳ್ಳ­ದಿದ್ದರೆ ಏನು ಉಪಯೋಗ ಎಂದು ಅವರು ಪ್ರಶ್ನಿಸಿದರು.

ಬಿಲ್‌ ಗೇಟ್ಸ್‌–ಮೆಲಿಂಡಾ ದಂಪತಿಯ ದಾನ ಧರ್ಮಕುರಿತು ಲೇಖಕ ಚೇತನ್‌ ಭಗತ್‌ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿ­ದರು. ಎಐಐಎಂಎಸ್‌, ಐಐಟಿ ಹಾಗೂ ದೆಹಲಿ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಪ್ರಧಾನಿ ಭೇಟಿ: ‘ಮೈಕ್ರೋಸಾಫ್ಟ್‌’  ಸಂಸ್ಥೆಯ ಸ್ಥಾಪಕ ಬಿಲ್‌ ಗೇಟ್ಸ್‌ ತಮ್ಮ ಪತ್ನಿ ಮೆಲಿಂಡಾ ಗೇಟ್ಸ್‌ ಜತೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾದರು.ತುರ್ತು ನೆರವು ನಿಧಿ:  ಪ್ರವಾಹದಿಂದ ನಲು­ಗಿರುವ ಜಮ್ಮು ಕಾಶ್ಮೀರಕ್ಕೆ   ಬಿಲ್‌ ಗೇಟ್ಸ್‌ ದಂಪತಿ ಸುಮಾರು ₨4.6 ಕೋಟಿ  ಪರಿಹಾರವನ್ನು  ಪ್ರಕಟಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry