ಜನಹಿತ ಬಯಸುವ ರಾಜಕಾರಣ ಅಗತ್ಯ

7

ಜನಹಿತ ಬಯಸುವ ರಾಜಕಾರಣ ಅಗತ್ಯ

Published:
Updated:

ಮೂಲ್ಕಿ: `ಕೆಲವೊಂದು ಭ್ರಷ್ಟ ರಾಜಕಾರಣಿಗಳಿಂದಾಗಿ ಸಭ್ಯರೂ ಜನರ ಸಂಶಯಕ್ಕೆ ಒಳಗಾಗುವ ಮುಜುಗರ ಅನುಭವಿಸುತ್ತಿದ್ದಾರೆ. ಇಂತಹ ವಾತಾವರಣದಲ್ಲಿ ಮಾಜಿ ಶಾಸಕ ಸೋಮಪ್ಪ ಸುವರ್ಣ ಅವರ ಶಿಸ್ತುಬದ್ಧ ರಾಜಕೀಯ ಜೀವನ ಇಂದಿನ ಎಲ್ಲಾ ರಾಜಕಾರಣಿಗಳಿಗೆ ಆದರ್ಶಪ್ರಾಯ~ ಎಂದು ರಾಜ್ಯ ವಿಧಾನ ಸಭೆಯ ಮುಖ್ಯ ವಿಪಕ್ಷ ಸಚೇತಕ ಕೆ.ಅಭಯಚಂದ್ರ ಹೇಳಿದರು.ಶಾಸಕ ಕೆ.ಸೋಮಪ್ಪ ಸುವರ್ಣ ಅವರಿಗೆ ಶನಿವಾರ ಮೂಲ್ಕಿ ಲಲಿತ್ ಮಹಲ್‌ನಲ್ಲಿ ಕಾಂಗ್ರೆಸ್ ಪರ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದರು. ಕೆಪಿಸಿಸಿ ಸದಸ್ಯ ಗುರುರಾಜ್ ಪೂಜಾರಿ ಮಾತನಾಡಿ ಸೋಮಪ್ಪ ಸುವರ್ಣರ ನಾಯಕತ್ವದ ಬಲದಿಂದ ಮೂಲ್ಕಿ ಮೂಡುಬಿದಿರೆಯಲ್ಲಿ ಕಾಂಗ್ರೆಸ್ ಹ್ಯಾಟ್ರಿಕ್ ಬಾರಿಸಿತು ಎಂದರು.ಹಿರಿಯ ಕಾಂಗ್ರೆಸ್ ಮುಖಂಡ ತೋಕೂರು ಗುಣಪಾಲ ಶೆಟ್ಟಿ, ಮಹಿಳಾ ಕಾಂಗ್ರೆಸ್‌ನ ಮನೋರಮಾ ಹೆನ್ರಿ, ಬಾಲಾದಿತ್ಯ ಆಳ್ವಾ ಕೆಮ್ರಾಲ್, ತಾಲ್ಲೂ ಪಂಚಾಯಿತಿ ಸದಸ್ಯ ರಾಜು ಕುಂದರ್, ಪೂರ್ಣಿಮಾ ಹಳೆಯಂಗಡಿ, ಮೂಲ್ಕಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಶಿಕಾಂತ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಗೋಪಿನಾಥ ಪಡಂಗ, ಧನಂಜಯ ಕೋಟ್ಯಾನ್ ಮಟ್ಟು, ವಸಂತ ಬೆರ್ನಾರ್ಡ್ ಹಳೆಯಂಗಡಿ, ಬಿ.ಎಂ.ಆಸಿಫ್ ಇನ್ನಿತರರು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry