ಜನಹಿತ ಮೇಳ

7

ಜನಹಿತ ಮೇಳ

Published:
Updated:
ಜನಹಿತ ಮೇಳ

ಲಖನೌದ ಜನಹಿತ ಸಮಾಜಸೇವಾ ಸನಾತನ ಕರಕುಶಲ ಮತ್ತು ಕೈಮಗ್ಗ ಸಂಸ್ಥೆ, ರಾಷ್ಟ್ರ ಮನ್ನಣೆ ಪಡೆದ ಕುಶಲಕರ್ಮಿಗಳು ಸಿದ್ಧಪಡಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಸುತ್ತಿದೆ.ಕೈಮಗ್ಗ ಹಾಗೂ ಕುಶಲಕರ್ಮಿಗಳ ಆರ್ಥಿಕ ಮಟ್ಟವನ್ನು ಸುಧಾರಿಸುವ ಉದ್ದೇಶದ ಈ ಪ್ರದರ್ಶನ ಮಧ್ಯವರ್ತಿಗಳ ಹಾವಳಿಯಿಂದ ಮುಕ್ತವಾಗಿದೆ. ಕಲಾವಿದರ ಸೃಜನಶೀಲತೆಯ ಮೂಸೆಯೊಳಗೆ ರೂಪುಗೊಂಡ ಕರಕುಶಲ ವಸ್ತುಗಳು ಹಾಗೂ ಕೈಮಗ್ಗ ಜವಳಿಯನ್ನು ಗ್ರಾಹಕರು ನೇರವಾಗಿ ಖರೀದಿಸುವ ಅವಕಾಶ ಇಲ್ಲಿ ಲಭ್ಯ.ಪುರ್ದಿಲ್‌ನಗರ ಕಲಾವಿದರ ಕೈಚಳಕದಲ್ಲಿ ತಯಾರಾದ ಮಾರ್ಬಲ್ ಕ್ರಾಫ್ಟ್ಸ್, ಜರಿ-ಜರ್ದೋಸಿ, ಕಾರ್ಪೆಟ್, ಕಸೂತಿ ಕಲೆ, ಗಾಜಿನ ಬೊಂಬೆ, ಚಿಕಣಿ ಕಲೆ, ಬೆಡ್‌ಶೀಟ್‌ಗಳು, ಗ್ಲಾಸ್ ಜ್ಯುವೆಲರಿ ಮನಸೆಳೆಯುತ್ತವೆ.ಮಣ್ಣಿನಿಂದ ತಯಾರಾದ ಆಕರ್ಷಕ ಬೊಂಬೆಗಳು, ಅಲಿಘರ್ ಹಾಗೂ ಮೊರಾದಾಬಾದ್‌ನ ಮೆಟಲ್ ಕ್ರಾಫ್ಟ್ಸ್, ಸಹರಾನಪುರ ಪೀಠೋಪಕರಣಗಳು, ವಾರಣಾಸಿಯ ಸೀರೆಗಳು, ಆಕರ್ಷಕ ಕೆತ್ತನೆಯುಳ್ಳ ಮರದ ಶಿಲ್ಪಗಳು, ಕಾಶ್ಮೀರದ ಉಣ್ಣೆ ಉಡುಪು, ಡ್ರೆಸ್ ಮೆಟಿರೀಯಲ್ಸ್,ಪಂಜಾಬ್ ಮತ್ತು ಹರ್ಯಾಣದ ಕುರ್ತಾ, ಲೆದರ್ ವರ್ಕ್, ರಾಜಸ್ತಾನದ ಸಿಲ್ವರ್ ಪೇಂಟಿಂಗ್, ಬಂಗಾಳದ ಕಾಂತಾ ಸೀರೆಗಳು, ಎಂಬ್ರಾಯಿಡರಿ ಬೆಡ್‌ಶೀಟ್‌ಗಳು, ಶಾಂತಿನಿಕೇತನದ ಲೆದರ್ ವರ್ಕ್ಸ್, ಗುಜರಾತಿ ಮಿರರ್ ವರ್ಕ್, ಮಧುಬನಿ ಕಲಾಕೃತಿಗಳು, ಅಸ್ಸಾಂನ ಬಿದಿರು ಕಲೆ, ಮಣಿಪುರ್‌ನ ಡ್ರೈ ಪ್ಲವರ್ಸ್‌, ಹ್ಯಾಂಡ್‌ಲೂಮ್ ಸೀರೆಗಳು, ಇಂದೋರ್‌ನ ಸಿಲ್ಕ್ ಬಟ್ಟೆಗಳು, ತಂಜಾವೂರು ಪೇಂಟಿಂಗ್,

 

ಆಂಧ್ರದ ಮೋತಿ ಜ್ಯುವೆಲರಿ, ಕೊಲ್ಲಾಪುರಿ ಚಪ್ಪಲಿ, ಕರ್ನಾಟಕದ ಸಿಲ್ಕ್ ಸೀರೆ, ಕೇರಳದ ತೆಂಗಿನ ಕಲಾ ವಸ್ತುಗಳು, ಮೈಸೂರಿನ ಮರದ ಶಿಲ್ಪಗಳು ಮತ್ತು ಅಗರಬತ್ತಿ ಹೀಗೆ ಸುಮಾರು 8 ಸಾವಿರಕ್ಕೂ ಅಧಿಕ ಬಗೆಯ ವಸ್ತುಗಳು ಒಂದೇ ಸೂರಿನಡಿಯಲ್ಲಿ ಲಭ್ಯ.

ಸ್ಥಳ: ಗಾಯತ್ರಿ ವಿಹಾರ, ಅರಮನೆ ಮೈದಾನ. ಪ್ರದರ್ಶನ ಭಾನುವಾರ ಮುಕ್ತಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry