ಮಂಗಳವಾರ, ನವೆಂಬರ್ 19, 2019
23 °C

ಜನ್ನತ್ ಹುಸೇನ್ ಮಹತ್ವದ ಸಾಕ್ಷಿ

Published:
Updated:

ಹೈದರಾಬಾದ್: ಜಗನ್‌ಮೋಹನ್ ರೆಡ್ಡಿ ಅವರ ವಿರುದ್ಧದ ಅಕ್ರಮ ಸಂಪತ್ತು ಪ್ರಕರಣದ ವಿಚಾರಣೆಯಲ್ಲಿ, ದಿವಂಗತ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರಿಗೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಜನ್ನತ್ ಹುಸೇನ್ ಅವರು ಮಹತ್ವದ ಸಾಕ್ಷಿಯಾಗಲಿದ್ದಾರೆ.ಈ ಕುರಿತು ತನಿಖೆ ನಡೆಸಿದ ಸಿಬಿಐ, ಜಗನ್‌ರವರ ತಂದೆ ರಾಜಶೇಖರ ರೆಡ್ಡಿ ಅವರ ಆಪ್ತ ಸಹಾಯಕರಾಗಿದ್ದ ಸುರೀದು ಮತ್ತು ಜನ್ನತ್ ಹುಸೇನ್ ಅವರನ್ನೇ ಪ್ರಮುಖ ಸಾಕ್ಷಿಗಳನ್ನಾಗಿ ಹೆಸರಿಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)