ಸೋಮವಾರ, ಜನವರಿ 27, 2020
22 °C

ಜನ್ಮದಿನ ವಿವಾದ: ಪ್ರತಿಕ್ರಿಯೆಗೆ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ತಮ್ಮ ಜನ್ಮ ದಿನಾಂಕಕ್ಕೆ ಸಂಬಂಧಿಸಿದ ವಿವಾದ ಶೀಘ್ರ ಬಗೆಹರಿಯುವ ಯಾವುದೇ ಮುನ್ಸೂಚನೆ ತಮಗಿಲ್ಲ ಎಂದಿರುವ ಭೂಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್, `ಆದರೆ ಆಗಾಗ ಈ ವಿಷಯ ಪ್ರಸ್ತಾಪಿಸದೆ, ಅದರಷ್ಟಕ್ಕೆ ಬಿಡು ವುದು ಒಳಿತು ಮತ್ತು ಸಾರ್ವಜನಿಕ ಚರ್ಚೆಯೂ ಬೇಕಿಲ್ಲ~ ಎಂದು ನುಡಿದಿದ್ದಾರೆ.ಅವರು ಭಾನುವಾರ ಇಲ್ಲಿ ನಡೆದ ಸೇನಾ ದಿನಾಚರಣೆಯಲ್ಲಿ ಭಾಗವ ಹಿಸಿದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, `ಈ ವಿವಾದದ ಬಗ್ಗೆ ತಾವು ಯಾವುದೇ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಮತ್ತು ಇದರಿಂದ ತಪ್ಪು ತಿಳಿವಳಿಕೆ ಉಂಟಾಗುತ್ತದೆ~ ಎಂದು ಹೇಳಿದರು.ವಿವಾದದ ನಡುವೆಯೂ ತಮ್ಮ ಮೇಲೆ ರಕ್ಷಣಾ ಸಚಿವ ಎ.ಕೆ. ಆಂಟನಿ ವಿಶ್ವಾಸ ಹೊಂದಿರುವ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿದ ಅವರು, ಆದರೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಪ್ರತಿಕ್ರಿಯಿಸಿ (+)