ಜನ್ಮಾಷ್ಟಮಿ ಕಬಡ್ಡಿ: ರಾಮಾಂಜನೇಯ ಚಾಂಪಿಯನ್

7

ಜನ್ಮಾಷ್ಟಮಿ ಕಬಡ್ಡಿ: ರಾಮಾಂಜನೇಯ ಚಾಂಪಿಯನ್

Published:
Updated:
ಜನ್ಮಾಷ್ಟಮಿ ಕಬಡ್ಡಿ: ರಾಮಾಂಜನೇಯ ಚಾಂಪಿಯನ್

ಸುರತ್ಕಲ್: ರಾಮಾಂಜನೇಯ ತಂಡ ಸೀನಿಯರ್ ವಿಭಾಗದ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಗಣೇಶಪುರ ತಂಡವನ್ನು 41-30 ಅಂತರದಲ್ಲಿ  ಸೋಲಿಸಿ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಕಾಟಿಪಳ್ಳ ಕ್ಷೇತ್ರ ವತಿಯಿಂದ ಗಣೇಶಪುರ ಮೈದಾನದಲ್ಲಿ ಭಾನುವಾರ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಚಾಂಪಿಯನ್  ಪ್ರಶಸ್ತಿಯನ್ನು ಪಡೆದಿದೆ.ಬೆಳಿಗ್ಗೆಯಿಂದ ಆರಂಭವಾಗಿದ್ದ ಪಂದ್ಯಾಟದಲ್ಲಿ ಒಟ್ಟು  ಎಂಟು ತಂಡಗಳು ಸ್ಪರ್ಧೆಯಲ್ಲಿದ್ದವು. ಸೆಮಿಫೈನಲ್ ಪಂದ್ಯದಲ್ಲಿ ರಾಮಾಂಜನೇಯ ತಂಡ ವಿನಾಯಕ ತಂಡವನ್ನು 49-29 ಅಂತರದಲ್ಲಿ ಗಣೇಶಪುರ ಕೃಷ್ಣಾಪುರ ತಂಡವನ್ನು 17-14 ಅಂತರದಲ್ಲಿ ಸೋಲಿಸಿ ಅಂತಿಮ ಪಂದ್ಯಕ್ಕೆ ಪ್ರವೇಶ ಪಡೆಯಿತು.ಜೂನಿಯರ್ ವಿಭಾಗದಲ್ಲಿ ಬಾಳ ತಂಡ ಮಂಗಳಪೇಟೆ ತಂಡವನ್ನು 14-12 ಅಂತರದಲ್ಲಿ ಸೋಲಿಸಿ ಪ್ರಶಸ್ತಿ ಪಡೆದಿದೆ. ಆ.28ರಂದು ಗಣೇಶಪುರ ಮೈದಾನದಲ್ಲಿ ನಡೆಯುವ ಮೊಸರುಕುಡಿಕೆ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಣೆ ನಡೆಯಲಿದೆ.ಕಬಡ್ಡಿ ಪಂದ್ಯಾಟವನ್ನು ಉದ್ಯಮಿ ಧರ್ಮೇಂದ್ರ ಗಣೇಶಪುರ ಉದ್ಘಾಟಿಸಿ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಪಾಲ್ಗೊಳ್ಳುವುದು ಮುಖ್ಯ. ದೇಸಿ ಸೊಗಡಿನ ಕ್ರೀಡಾ ಚಟುವಟಿಕೆಯಲ್ಲಿ ಹೆಚ್ಚು ಹೆಚ್ಚು ಪಾಲ್ಗೊಳ್ಳುವಂತೆ ಆಗಬೇಕು ಎಂದರು.ಕಬಡ್ಡಿ ಭಾರತದ ಕ್ರೀಡೆ. ದೇಶದಲ್ಲಿ ಕ್ರಿಕೆಟ್‌ಗೆ ಮಾತ್ರ ಹೆಚ್ಚಿನ ಪ್ರಾಧಾನ್ಯತೆ ದೊರಕುತ್ತಿದೆ. ಇದರಿಂದಾಗಿ ಇತರ ಕ್ರೀಡೆಗಳು ಮೂಲೆಗೆ ಸರಿಯುತ್ತಿವೆ ಎಂದು ವಿಷಾದಿಸಿದರು. ಸಮಿತಿಯ ನಿಕಟಪೂರ್ವ ಅಧ್ಯಕ್ಷ ಪ್ರಫುಲ್ಲಚಂದ್ರ ರೈ, ನಿಕಟಪೂರ್ವ ಕಾರ್ಯದರ್ಶಿ ವಾದಿರಾಜ್, ಅಧ್ಯಕ್ಷ ಸುಕುಮಾರ ಭಂಡಾರಿ, ಕಾರ್ಯದರ್ಶಿ ಜಯಶೀಲ ಸೂರಿಂಜೆ  ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry