ಬುಧವಾರ, ನವೆಂಬರ್ 13, 2019
28 °C

ಜನ ಜಾಗೃತಿಗಾಗಿ ಪಥ ಸಂಚಲನ

Published:
Updated:

ಬಾಗೇಪಲ್ಲಿ:  ವಿಧಾನಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮಂಗಳವಾರ  ಸಿಆರ್‌ಪಿಎಫ್ ಯೋಧರು ಹಾಗೂ ಬಾಗೇಪಲ್ಲಿ ಮತ್ತು ಗುಡಿಬಂಡೆ ವೃತ್ತದ ಪೊಲೀಸರು ಮತದಾರರಲ್ಲಿ ಜನಜಾಗೃತಿ ಮೂಡಿಸುವ ಸಲುವಾಗಿ ಪಥಸಂಚಲನ ನಡೆಸಿದರು.ಆಂಧ್ರಪ್ರದೇಶದ ಗಡಿ ಪ್ರದೇಶ ಎನಿಸಿಕೊಂಡಿರುವ ಹಾಗೂ ಕ್ಷೇತ್ರದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಇರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಚುನಾವಣಾ ಆಯೋಗ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ. ಗಡಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪಟ್ಟಣದ ಬಾಲಕಿಯರ ಸರ್ಕಾರಿ ಶಾಲಾ ಆವರಣದಿಂದ ಪಾತಬಾಗೇಪಲ್ಲಿ ಕ್ರಾಸ್, ನ್ಯಾಷನಲ್ ಕಾಲೇಜು, ರಾಘವೇಂದ್ರ ಮಠದವರಿಗೂ ಜಿಲ್ಲಾ ಮೀಸಲು ಪಡೆ, ಕರ್ನಾಟಕ ರಾಜ್ಯ ಮೀಸಲು ಪಡೆ, ಸೆಂಟ್ರಲ್ ಇಂಡಸ್ಟ್ರೀಯಲ್ ಸೆಕ್ಯೂರಿಟಿ ಪೋರ್ಸ್, ಸೆಂಟ್ರಲ್ ಸೆಕ್ಯೂರೆಟಿ ಪೋರ್ಸ್ ಸೇರಿದಂತೆ ಬಾಗೇಪಲ್ಲಿ ಹಾಗೂ ಗುಡಿಬಂಡೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಒಳಗೊಂಡಂತೆ ಬ್ಯಾಂಡ್ ಸೆಟ್ ಮೂಲಕ ಜನ ಜಾಗೃತಿ ಮೂಡಿಸಿದರು.ಸರ್ಕಲ್ ಇನ್ಸ್‌ಪೆಕ್ಟರ್ ಗೋಪಾಲರೆಡ್ಡಿ ಮಾತನಾಡಿ `ಆಂದ್ರಪ್ರದೇಶದ ಗಡಿ ಪ್ರದೇಶದಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ಇದೆ. ವಿಧಾನಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ತೆರೆಯಲಾಗಿರುವ ಚೆಕ್ ಪೋಸ್ಟ್ ಗಳಲ್ಲಿ ಬಿಗಿ ಬಂದೋ ಬಸ್ತ್ ಏರ್ಪಡಿಸಲಾಗಿದೆ ಎಂದರು.ಜಾಗೃತ ದಳದವರು ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರ ಚಲನವಲನಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಯಾವುದೇ ಅಹಿತರ ಘಟನೆ ಹಾಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಅಭ್ಯರ್ಥಿಗಳು, ಸಾರ್ವಜನಿಕರು ಅವಕಾಶ ನೀಡದಂತೆ ಸಹಕರಿಸಬೇಕಾಗಿದೆ' ಎಂದು ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)