ಶುಕ್ರವಾರ, ಮೇ 14, 2021
31 °C

ಜನ ಜಾಗೃತಿ ಮೂಡಿಸುವುದೇ ಪತಂಜಲಿ ಯೋಗದ ಆಶಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಜನರಲ್ಲಿ ಜಾಗೃತಿ ಮೂಡಿಸಿ, ಸ್ವದೇಶಿ ಭಾವನೆಯನ್ನು ಮೂಡಿಸುವುದೇ ಪತಂಜಲಿ ಯೋಗ ಕೇಂದ್ರದ ಮುಖ್ಯ ಆಶಯವಾಗಿದೆ~ ಎಂದು ಆಚಾರ್ಯ ಬಾಲಕೃಷ್ಣಜಿ ಹೇಳಿದರು.ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತಂಜಲಿ ಆಯುರ್ವೇದ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಹಿಂದೆ ಗಾಂಧೀಜಿ ಸ್ವದೇಶಿ ಅಭಿಯಾನ ಆರಂಭಿಸಿದ್ದರು. ಇಂದು ಬಾಬಾ ರಾಮದೇವ್ ಅವರು ಆ ಅಭಿಯಾನ ಮುಂದುವರಿಸಿದ್ದಾರೆ. ಯಾವುದೇ ಸಂಸ್ಥೆಯ ಬಗ್ಗೆ  ಮಾತನಾಡುವ ಮೊದಲು ಆ ಸಂಸ್ಥೆಯ ನಾಯಕನ ಬಗ್ಗೆ ತಿಳಿದುಕೊಳ್ಳಬೇಕು. ಬಾಬಾ ರಾಮದೇವ್ ಅವರನ್ನು ಜರಿದವರೇ ಇಂದು ಅವರನ್ನು ಅನುಸರಿಸುತ್ತಿದ್ದಾರೆ~ ಎಂದರು.`ಮಧುಮೇಹ, ಒತ್ತಡಗಳಿಗೆ ಯಾವುದೇ ಔಷಧಿಯಿಲ್ಲ ಎಂದು ಹೇಳಲಾಗುತ್ತಿತ್ತು. ಆದರಿಂದು ಯೋಗದಿಂದ ಇಂತಹ ಕಾಯಿಲೆಗಳನ್ನು ಸರಿಪಡಿಸಬಹುದು ಎಂಬುದನ್ನು ಬಾಬಾ ರಾಮದೇವ್ ಅವರು ತೋರಿಸಿಕೊಟ್ಟಿದ್ದಾರೆ.ಅವರನ್ನು ಮತ್ತು ಅವರ ಯೋಗವನ್ನು ವಿರೋಧಿಸುವ ವಿರೋಧಿಗಳೇ ಇಂದು ಅವರ ಯೋಗವನ್ನು ಅನುಸರಿಸುತ್ತಿದ್ದಾರೆ~ ಎಂದು ಹೇಳಿದರು. `ನಮ್ಮ ದೇಶದ ರೈತರಿಗೆ ಅನ್ಯಾಯವಾಗುತ್ತಿದೆ. ಅವರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ.ಆದ್ದರಿಂದ ಪತಂಜಲಿ ಯೋಗ ಕೇಂದ್ರವು ರೈತರ ಬೆಳೆಗಳನ್ನು ಕೊಂಡು ಅದರಿಂದ ನೈಸರ್ಗಿಕವಾಗಿ ವಸ್ತುಗಳನ್ನು ತಯಾರಿಸಿ ದೇಶದ ಜನರಿಗೆ ಮಾರಾಟ ಮಾಡುವುದು ಆಶಯವಾಗಿದೆ~ ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ಪ್ರೆಸ್‌ಕ್ಲಬ್ ಅಧ್ಯಕ್ಷ ಎಂ.ಎ.ಪೊನ್ನಪ್ಪ, ಪತಂಜಲಿ ಆಯುರ್ವೇದ ಕೇಂದ್ರದ ಮಾರುಕಟ್ಟೆ ಅಧಿಕಾರಿ ಎಸ್.ಕೆ.ರೈ, ಜ್ಞಾನಾನಂದ ಸ್ವಾಮೀಜಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.