ಶನಿವಾರ, ಮೇ 8, 2021
26 °C

`ಜನ ಪ್ರೀತಿಯಿಂದ ಪೊಲೀಸ್ ಒತ್ತಡ ಕಡಿಮೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: `ಪೊಲೀಸರು ಜನರ ಪ್ರೀತಿ ಮತ್ತು ವಿಶ್ವಾಸ ಗಳಿಸುವುದು ಬಹಳ ಮುಖ್ಯ. ಜನರ ಸಹಯೋಗ, ಸಹಕಾರ ದೊರೆತರೆ ಪೊಲೀಸ್ ಒತ್ತಡ ಕಡಿಮೆಯಾಗುತ್ತದೆ' ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಸ್.ಟಿ.ರಮೇಶ್ ಹೇಳಿದರು.ಬೆಂಗಳೂರು ನಗರ ಪೊಲೀಸ್ ಮತ್ತು ಜನಾಗ್ರಹ ಸಂಸ್ಥೆಯ ಸಹಭಾಗಿತ್ವದಲ್ಲಿ ಕೋಗಿಲು ಮುಖ್ಯರಸ್ತೆಯ ಆದಿತ್ಯ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ `ಕಮ್ಯುನಿಟಿ ಪೊಲೀಸಿಂಗ್' ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. `ಪೊಲೀಸರು ನಾಗರಿಕರ ಜೊತೆ ಕೈಜೋಡಿಸಿ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು, ಇದನ್ನು ಯಶಸ್ವಿಗೊಳಿಸಲು ಎಲ್ಲರೂ ಶ್ರಮಿಸಬೇಕು' ಎಂದು ಸಲಹೆ ನೀಡಿದರು.ನಗರ ಜಂಟಿ ಪೊಲೀಸ್ ಆಯುಕ್ತ ಪ್ರಣಬ್ ಮೊಹಾಂತಿ ಮಾತನಾಡಿ, `ಈ ಹಿಂದೆಯೂ ಸಮುದಾಯ ಪೊಲೀಸ್ ವ್ಯವಸ್ಥೆ ನಮ್ಮಲ್ಲಿ ಇತ್ತು. ಕೆಲವು ಕಡೆಗಳಲ್ಲಿ ಈ ವ್ಯವಸ್ಥೆ ಯಶಸ್ವಿಯಾಗಿತ್ತು. ಜನಾಗ್ರಹ ಸಂಸ್ಥೆಯವರು ಅಧ್ಯಯನ ನಡೆಸಿ, ವ್ಯವಸ್ಥಿತವಾಗಿ ಈ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದಾರೆ. ವ್ಯವಸ್ಥೆಗೆ ಯಶಸ್ಸು ದೊರಕುವ ವಿಶ್ವಾಸ ಇದೆ' ಎಂದರು.ಸಂಸ್ಥೆಯ ಸಮನ್ವಯಾಧಿಕಾರಿ ಮೇಜರ್ ಜನರಲ್ ಕೆ.ಆರ್.ಪ್ರಸಾದ್ ಮಾತನಾಡಿ, `ನಗರದಲ್ಲಿ ಇದು ಮೊದಲ ಕಾರ್ಯಕ್ರಮ. ಎಲ್ಲ ವಲಯಗಳಲ್ಲಿ ಸುರಕ್ಷಾ ಮಿತ್ರರನ್ನು ನೇಮಿಸಿ, ಅವರಿಗೆ ಸೂಕ್ತ ತರಬೇತಿ ನೀಡಲಾಗುವುದು.ಅಪರಾಧಗಳನ್ನು ಪತ್ತೆ ಹಚ್ಚಲು ಪೊಲೀಸರೊಂದಿಗೆ ಕೈಜೋಡಿಸಿ ನಾಗರಿಕರಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಯಲಹಂಕ ಠಾಣೆಯ ವ್ಯಾಪ್ತಿಯಲ್ಲಿ 41 ವಲಯ ಸುರಕ್ಷಾ ಮಿತ್ರರನ್ನು ನೇಮಿಸಲಾಗಿದೆ' ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.