ಬುಧವಾರ, ನವೆಂಬರ್ 13, 2019
28 °C

ಜಪಾನ್‌ನಲ್ಲಿ ಭೂಕಂಪನ

Published:
Updated:

ಟೋಕಿಯೊ (ಎಎಫ್‌ಪಿ): ಉತ್ತರ ಜಪಾನ್ ಸಮೀಪ 7.2 ತೀವ್ರತೆಯ ಪ್ರಬಲ ಭೂಕಂಪನ ಶುಕ್ರವಾರ ಸಂಭವಿದೆ.ಆದರೆ ಸುನಾಮಿಯ ಎಚ್ಚರಿಕೆ ನೀಡಿಲ್ಲ ಎಂದು ಭೂಗರ್ಭಶಾಸ್ತ್ರಜ್ಞರು ತಿಳಿಸಿದ್ದಾರೆ. ಉತ್ತರ ಟೋಕಿಯೊ ಸಮೀಪದ ರಷ್ಯಾ ಆಳ್ವಿಕೆಗೆ ಒಳಪಟ್ಟಿರುವ ಸರಣಿ ದ್ವೀಪಗಳಲ್ಲಿ ಒಂದಾದ ಕುರಿಲ್ ದ್ವೀಪದಲ್ಲಿ ನಸುಕಿನಲ್ಲಿ 3.05 ಗಂಟೆಗೆ ಈ ಭೂಕಂಪನ ಸಂಭವಿಸಿದೆ.ಭೂಕಂಪನದಿಂದ ಪ್ರಾಣ ಹಾನಿಯಾಗಿರುವ ವರದಿಗಳಿಲ್ಲ ಎಂದು ಹೊಕೈಡೊ ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)