ಜಪಾನ್‌ ಓಪನ್‌ಗೆ ಸೈನಾ ಅಲಭ್ಯ

7

ಜಪಾನ್‌ ಓಪನ್‌ಗೆ ಸೈನಾ ಅಲಭ್ಯ

Published:
Updated:

ನವದೆಹಲಿ (ಪಿಟಿಐ): ಭಾರತದ ಸೈನಾ ನೆಹ್ವಾಲ್‌ ಸೆಪ್ಟೆಂಬರ್‌ 17ರಿಂದ 22ರ ವರೆಗೆ ನಡೆಯಲಿರುವ ಜಪಾನ್‌ ಓಪನ್‌ ಸೂಪರ್ ಸರಣಿ ಬ್ಯಾಡ್ಮಿಂಟನ್‌ ಟೂರ್ನಿಗೆ ಅಲಭ್ಯರಾಗಿದ್ದಾರೆ.‘ಮುಂದಿನ ತಿಂಗಳು ಡೆನ್ಮಾರ್ಕ್‌ ಸೂಪರ್‌ ಸರಣಿ ನಡೆಯಲಿರುವ ಕಾರಣ ಜಪಾನ್‌ ಸರಣಿಯಲ್ಲಿ ಕೆಲ ಆಟಗಾರರು ಆಡದಿರಲು ನಿರ್ಧರಿಸಿದ್ದಾರೆ’ ಎಂದು ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ ಹೇಳಿದೆ.ಪಿ. ಕಶ್ಯಪ್‌, ಪಿ.ವಿ. ಸಿಂಧು, ಅಜಯ್‌ ಜಯರಾಮ್, ಬಿ. ಸಾಯಿ ಪ್ರಣೀತ್‌, ಕೆ. ಶ್ರೀಕಾಂತ್‌, ಸೌರಭ್‌ ವರ್ಮಾ, ಮನು ಅತ್ರಿ, ಸುಮಿತ್‌ ರೆಡ್ಡಿ ಅವರು ಜಪಾನ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry