ಜಪಾನ್ ಓಪನ್: ನಡಾಲ್‌ಗೆ ಮುಖಭಂಗ

7

ಜಪಾನ್ ಓಪನ್: ನಡಾಲ್‌ಗೆ ಮುಖಭಂಗ

Published:
Updated:

ಟೋಕಿಯೊ (ಐಎಎಎನ್‌ಎಸ್): ಇಂಗ್ಲೆಂಡ್‌ನ ಆ್ಯಂಡಿ ಮರ‌್ರೆ ಇಲ್ಲಿ ನಡೆದ ಜಪಾನ್ ಓಪನ್ ಟೆನಿಸ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು.ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮರ‌್ರೆ  3-6, 6-2, 6-0ರಲ್ಲಿ ಕಳೆದ ಬಾರಿಯ ಚಾಂಪಿಯನ್ ಸ್ಪೇನ್‌ನ ರಫೆಲ್ ನಡಾಲ್ ಎದುರು ಗೆಲುವು ಪಡೆದು ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು.ವಿಶ್ವದ ಎರಡನೇ ಶ್ರೇಯಾಂಕದ ಆಟಗಾರ ನಡಾಲ್ ಮೊದಲ ಸೆಟ್‌ನಲ್ಲಿ ಮರ‌್ರೆಗೆ ಸೋಲುಣಿಸಿದರು. ಆದರೆ ಮುಂದಿನ ಎರಡೂ ಸೆಟ್‌ಗಳಲ್ಲಿ ಯಾವ ಹಂತದಲ್ಲಿಯೂ ಸವಾಲು ಒಡ್ಡಲು ನಡಾಲ್‌ಗೆ ಸಾಧ್ಯವಾಗಲಿಲ್ಲ.

ಈ ವರ್ಷದ ಆಸ್ಟ್ರೇಲಿಯಾ ಓಪನ್ ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿಯು ಮರ‌್ರೆ ಪ್ರಶಸ್ತಿ ಜಯಿಸಿದ್ದರು.ಈ ವರ್ಷದುದ್ದಕ್ಕೂ ಈ ಆಟಗಾರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಫ್ರೆಂಚ್ ಓಪನ್, ವಿಂಬಲ್ಡನ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು. ಆದರೆ ಈ ಚಾಂಪಿಯನ್‌ಷಿಪ್‌ನಲ್ಲಿ ಅವರಿಗೆ ಪ್ರಶಸ್ತಿ ಜಯಿಸಲು ಸಾಧ್ಯವಾಗಿದೆ.ಬೀಜಿಂಗ್ ವರದಿ:  ಲೊದ್ರಾ-ಜಿಮೊಂಜಿಕ್‌ಗೆ ಡಬಲ್ಸ್ ಕಿರೀಟ: ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಸರ್ಬಿಯಾದ ಮೈಕಲ್ ಲೋದ್ರಾ ಹಾಗೂ ನಿನಾದ್ ಜಿಮೊಂಜಿಕ್ ಜೋಡಿ ಚೀನಾದಲ್ಲಿ ನಡೆದ ಚೀನಾ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು.ಫೈನಲ್ ಪಂದ್ಯದಲ್ಲಿ ಈ ಜೋಡಿ 7-6, 7-6ರ ನೇರ ಸೆಟ್‌ಗಳಿಂದ ರಾಬರ್ಟ್ ಲಿಂಡ್‌ಸ್ಟೆಲ್ಸ್ ಹಾಗೂ ಹೂರಿಯಾ ಟೇಕೂ ಜೋಡಿಯನ್ನು ಮಣಿಸಿತು. ಎರಡೂ ಸೆಟ್‌ಗಳಲ್ಲಿ ಮೂರನೇ ಶ್ರೇಯಾಂಕದ ಜೋಡಿ ಭಾರಿ ಪ್ರತಿರೋಧ ಎದುರಿಸಬೇಕಾಯಿತು.  ಈ ಹೋರಾಟ ಒಂದು ಗಂಟೆ 48 ನಿಮಿಷಗಳ ಕಾಲ ನಡೆಯಿತು.ಥಾಮಸ್ ಬೆರ್ಡಿಕ್ ಚಾಂಪಿಯನ್: ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಕ್ ಚೀನಾ ಓಪನ್ ಟೂರ್ನಿಯ ಸಿಂಗಲ್ಸ್ ನಲ್ಲಿ ಪ್ರಶಸ್ತಿ ಜಯಿಸಿದ್ದರು. ಈ ಮೂಲಕ 29 ತಿಂಗಳಿನ ನಂತರ ಈ ಆಟಗಾರನಿಗೆ ಪ್ರಶಸ್ತಿ ಜಯಿಸಲು ಸಾಧ್ಯವಾಯಿತು.ಫೈನಲ್‌ನಲ್ಲಿ ಬೆರ್ಡಿಕ್ 3-6, 6-4, 6-1ರಲ್ಲಿ ಮರಿನ್ ಸಿಲಿಕ್ ಅವರನ್ನು ಮಣಿಸಿದರು. ಜೆಕ್ ಗಣರಾಜ್ಯದ ಆಟಗಾರನ ವೃತ್ತಿ ಜೀವನದಲ್ಲಿ ಸಿಕ್ಕ ಆರನೇ ಎಟಿಪಿ ಪ್ರಶಸ್ತಿ ಇದಾಗಿದೆ. `29 ತಿಂಗಳಿನ ನಂತರ ಮತ್ತೆ ಪ್ರಶಸ್ತಿ ಜಯಿಸಿದ್ದಕ್ಕೆ ಖುಷಿಯಾಗಿದೆ. ಪ್ರಶಸ್ತಿ ಜಯಿಸಲು ಎರಡೂ ವರ್ಷಕ್ಕೂ ಹೆಚ್ಚು ಕಾಲ ಕಾಯಬೇಕಾಯಿತು~ ಎಂದು ಬೆರ್ಡಿಕ್ ಪ್ರತಿಕ್ರಿಯಿಸಿದರು. ಅತ್ಯುತ್ತಮ ರಿಟರ್ನ್‌ಗಳ ಮೂಲಕ ಬೆರ್ಡಿಕ್ ಸೆಟ್ ಗೆದ್ದುಕೊಂಡರು. ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಸಿಲಿಕ್ ಸುಲಭವಾಗಿ ಶರಣಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry