ಜಪಾನ್ ಚುನಾವಣೆ: ಎಲ್‌ಡಿಪಿಗೆ ಭಾರಿ ಗೆಲುವು

7

ಜಪಾನ್ ಚುನಾವಣೆ: ಎಲ್‌ಡಿಪಿಗೆ ಭಾರಿ ಗೆಲುವು

Published:
Updated:
ಜಪಾನ್ ಚುನಾವಣೆ: ಎಲ್‌ಡಿಪಿಗೆ ಭಾರಿ ಗೆಲುವು

ಟೋಕಿಯೊ (ಎಪಿ): ಜಪಾನ್‌ನಲ್ಲಿ ಭಾನುವಾರ ನಡೆದ ಸಂಸತ್ ಚುನಾವಣೆಯಲ್ಲಿ ವಿರೋಧಪಕ್ಷ ಲಿಬರಲ್ ಡೆಮಾಕ್ರಟಿಕ್       (ಎಲ್‌ಡಿಪಿ) ಅಭೂತಪೂರ್ವ ಜಯ ಗಳಿಸುವ ಮೂಲಕ ಮರಳಿ ಅಧಿಕಾರ ಪಡೆಯುವಲ್ಲಿ ಯಶಸ್ಸು ಕಂಡಿದೆ.ಈ ಬಾರಿಯ ಚುನಾವಣೆಯಲ್ಲಿ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷವು ಹೀನಾಯ ಸೋಲು ಕಂಡಿದ್ದು, ಪ್ರಧಾನಿ ಯೊಶಿಹಿಕೊ ನೊಡಾ ಅವರಿಗೆ ತೀವ್ರ ಮುಖಭಂಗವಾಗಿದೆ.`ಜಪಾನ್ ಸಂಸತ್ತಿನ ಕೆಳಮನೆಯ ಒಟ್ಟು 480 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್‌ಡಿಪಿ 275ರಿಂದ 300 ಸ್ಥಾನಗಳನ್ನು ಪಡೆದಿದೆ' ಎಂದು ಮತಗಟ್ಟೆ ಸಮೀಕ್ಷೆ ತಿಳಿಸಿದ್ದು ಮಂಗಳವಾರ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.ಕಳೆದ ಮೂರು ವರ್ಷಗಳಿಂದ ವಿರೋಧಪಕ್ಷದ ಸ್ಥಾನದಲ್ಲಿ ಕುಳಿತಿದ್ದ ಎಲ್‌ಡಿಪಿಯ ಅಚ್ಚರಿಯ ಜಯದಿಂದ ಮಾಜಿ ಪ್ರಧಾನಿ ಶಿಂಜೊ ಏಬ್ ಅವರು ಎರಡನೇ ಬಾರಿ ದೇಶದ ಚುಕ್ಕಾಣಿ ಹಿಡಿಯುವ ಅವಕಾಶವನ್ನು ಪಡೆದಂತಾಗಿದೆ. 2006-2007 ಅವಧಿಯಲ್ಲಿ ಅವರು ಪ್ರಧಾನಿಯಾಗ್ದ್ದಿದರು. ಎರಡನೇ ಮಹಾಯುದ್ಧದ ನಂತರ ದೀರ್ಘಕಾಲ  ಆಡಳಿತ ನಡೆಸಿದ್ದ ಎಲ್‌ಡಿಪಿ, 2009ರಲ್ಲಿ ಅಧಿಕಾರ ಕಳೆದುಕೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry