ಶುಕ್ರವಾರ, ನವೆಂಬರ್ 15, 2019
21 °C

ಜಪಾನ್ ನಿರಾಶ್ರಿತರ ಶಿಬಿರದಲ್ಲಿ ಇನ್ನೂ 90 ಸಾವಿರ ಸಂತ್ರಸ್ತರು

Published:
Updated:

ಮಾಸ್ಕೊ (ಐಎಎನ್‌ಎಸ್): ಜಪಾನ್‌ನಲ್ಲಿ ಪ್ರಕೃತಿ ವಿಕೋಪ ಸಂಭವಿಸಿ ಮೂರು ತಿಂಗಳು ಕಳೆದರೂ 90 ಸಾವಿರಕ್ಕೂ ಹೆಚ್ಚು ಸಂತ್ರಸ್ತರು ಇನ್ನೂ ನಿರಾಶ್ರಿತರ ಶಿಬಿರದಲ್ಲಿಯೇ ಇದ್ದಾರೆ ಎಂದು ಎನ್‌ಎಚ್‌ಕೆ ವಾಹಿನಿ ಶನಿವಾರ ವರದಿ ಮಾಡಿದೆ.

ಸ್ಥಳಾಂತರಿಸಲಾದ ಸಂತ್ರಸ್ತರಿಗಾಗಿ 28 ಸಾವಿರ ತಾತ್ಕಾಲಿಕ ಮನೆಗಳನ್ನು ನಿರ್ಮಿಸಲಾಗಿದೆ. ಇನ್ನು 52 ಸಾವಿರ ಮನೆಗಳನ್ನು ನಿರ್ಮಿಸಲು ಜಪಾನ್ ಸರ್ಕಾರ ಯೋಜನೆ ರೂಪಿಸಿದೆ. ನಿರಾಶ್ರಿತರ ತಾಣದಲ್ಲಿ ಸಿಗುತ್ತಿರುವ ನೆರವು ತಾತ್ಕಾಲಿಕ ವಸತಿಗಳಲ್ಲಿ ದೊರಕುತ್ತಿಲ್ಲವೆಂದು ಅನೇಕರು ಅಲ್ಲಿಗೆ ಹೋಗಲು ನಿರಾಕರಿಸುತ್ತಿದ್ದಾರೆ. 

ಮಾರ್ಚ್ 11ರಂದು ಜಪಾನ್‌ನಲ್ಲಿ ಸಂಭವಿಸಿದ ಭೂಕಂಪ ಮತ್ತು ಅಪ್ಪಳಿಸಿದ ಸುನಾಮಿಯಿಂದ 15, 405 ಮಂದಿ ಅಸುನೀಗಿದ್ದಾರೆ. 8,0 95 ಮಂದಿ ಕಣ್ಮರೆಯಾಗಿದ್ದಾರೆ ಎಂದು ಜಪಾನಿನ ರಾಷ್ಟ್ರೀಯ ಪೊಲೀಸ್ ಏಜೆನ್ಸಿ ತಿಳಿಸಿದೆ.

ಪ್ರಕೃತಿ ವಿಕೋಪ ನಂತರದ ಸನ್ನಿವೇಶವನ್ನು ಪ್ರಧಾನಿ ನ್ಯಾಟೊ ಕಾನ್ ಅವರು ಸಮರ್ಪಕವಾಗಿ ನಿರ್ವಹಿಸಿಲ್ಲ. ಆದ್ದರಿಂದ ಅವರು ಅಧಿಕಾರ ತ್ಯಜಿಸಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿವೆ. ಹೀಗಾಗಿ ಹಣಕಾಸು ಮಸೂದೆ ಅಂಗೀಕಾರವಾಗದೆ ಪುನರ್ವಸತಿ ಕಾರ್ಯ ಸ್ಥಗಿತವಾಗಿದೆ.

ಪ್ರತಿಕ್ರಿಯಿಸಿ (+)