ಶುಕ್ರವಾರ, ಅಕ್ಟೋಬರ್ 18, 2019
27 °C

ಜಪಾನ್: ಫುಕುಶಿಮಾ ಪ್ರದೇಶದಲ್ಲಿ ಭೂಕಂಪ

Published:
Updated:

ಟೋಕಿಯೊ (ಎಎಫ್‌ಪಿ): ಉತ್ತರ ಜಪಾನ್‌ನ ಫುಕುಶಿಮಾ ಪರಮಾಣು ಸ್ಥಾವರದ ಬಳಿ ಗುರುವಾರ ಭೂಮಿ ಕಂಪಿಸಿದೆ.

ರಿಕ್ಟರ್ ಮಾಪನದಲ್ಲಿ 5.7ರಷ್ಟು ತೀವ್ರತೆ ಹೊಂದಿದ್ದ ಈ ಭೂಕಂಪನದ ಕೇಂದ್ರಬಿಂದು ದಕ್ಷಿಣ ಫುಕುಶಿಮಾದ ಇವಾಕಿ ಪ್ರದೇಶದಲ್ಲಿ ಕೇಂದ್ರೀಕೃತವಾಗಿತ್ತು ಎಂದು ಅಮೆರಿಕದ ಭೂಗರ್ಭ ಶಾಸ್ತ್ರಜ್ಞರು ತಿಳಿಸಿದ್ದಾರೆ.

ಭೂಕಂಪದಿಂದಾಗಿ ಸುನಾಮಿ ಭಯವೇನೂ ಕಂಡುಬಂದಿಲ್ಲ ಹಾಗೂ ಯಾವುದೇ ಸಾವುನೋವುಗಳು ದಾಖಲಾಗಿಲ್ಲ ಎಂದು ವರದಿಗಳು ತಿಳಿಸಿವೆ.

Post Comments (+)