ಜಪಾನ್-ಭಾರತ ವ್ಯಾಪಾರ ಒಪ್ಪಂದಕ್ಕೆ ಇಂದು ಸಹಿ

7

ಜಪಾನ್-ಭಾರತ ವ್ಯಾಪಾರ ಒಪ್ಪಂದಕ್ಕೆ ಇಂದು ಸಹಿ

Published:
Updated:

ನವದೆಹಲಿ (ಪಿಟಿಐ): ಸರಕು ಮತ್ತು ಸೇವೆಗಳ ಮುಕ್ತ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವ, ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ ಭಾರತ ಮತ್ತು ಜಪಾನ್ ಬುಧವಾರ ಸಹಿ ಹಾಕಲಿವೆ.ಟೋಕಿಯೊದಲ್ಲಿ ನಡೆಯಲಿರುವ ಸಮಾರಂಭದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದ ಶರ್ಮಾ ಮತ್ತು ಜಪಾನಿನ ವಿದೇಶಾಂಗ ವ್ಯವಹಾರ ಸಚಿವ ಸೀಜಿ ಮಯೆಹರ ಅವರು ಒಪ್ಪಂದಕ್ಕೆ ಅಂಕಿತ ಹಾಕಲಿದ್ದಾರೆ.ಒಪ್ಪಂದದ ಅನ್ವಯ, ಎರಡೂ ದೇಶಗಳು  ಏಪ್ರಿಲ್ ತಿಂಗಳಿನಿಂದ ವ್ಯಾಪಾರ ವಹಿವಾಟಿನ  ಮೇಲೆ ಕಸ್ಟಮ್ಸ್ ಸುಂಕದ ಪ್ರಮಾಣ ಇಳಿಸಲಿದ್ದು, ಮುಂದಿನ 10 ವರ್ಷಗಳಲ್ಲಿ ಈ ಸೀಮಾ ಸುಂಕ ರದ್ದುಪಡಿಸಲಿವೆ. ಉಭಯ ದೇಶಗಳ ಮಧ್ಯೆ ನಡೆಯುತ್ತಿರುವ 12 ಶತಕೋಟಿ ಡಾಲರ್‌ಗಳಷ್ಟು (್ಙ 55,200 ಕೋಟಿ)  ವಹಿವಾಟಿನಲ್ಲಿ ಶೇ 90ರಷ್ಟು ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ವ್ಯಾಪ್ತಿಗೆ ಬರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry