ಜಪಾನ್: ರೋಕ್ ಅಬ್ಬರ

7

ಜಪಾನ್: ರೋಕ್ ಅಬ್ಬರ

Published:
Updated:
ಜಪಾನ್: ರೋಕ್ ಅಬ್ಬರ

ಟೋಕಿಯೊ (ಐಎಎನ್‌ಎಸ್/ಎಎಫ್‌ಪಿ): ಜಪಾನಿನ ಬೃಹತ್ ದ್ವೀಪ `ಹೊನ್‌ಶು~ ಮೇಲೆ ಪ್ರಬಲವಾದ `ರೋಕ್~ ಚಂಡಮಾರುತ ಬುಧವಾರ ಅಪ್ಪಳಿಸಿದ್ದು, ದೇಶದ ಪಶ್ಚಿಮ ಮತ್ತು ಕೇಂದ್ರ ಭಾಗದಲ್ಲಿ ಐವರು ಸಾವನ್ನಪ್ಪಿದ್ದಾರೆ.ಗಿಫು ಪ್ರಾಂತ್ಯದಲ್ಲಿ ಪ್ರಾಥಮಿಕ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ಮಗುವೊಂದು ಸೇರಿದಂತೆ ಇಬ್ಬರು ಕಣ್ಮರೆಯಾಗಿದ್ದಾರೆ.ಜಪಾನ್‌ನ ಕೇಂದ್ರ ಭಾಗದಲ್ಲಿರುವ ಹಮಾಮತ್ಸುವಿನಲ್ಲಿ ಭೂ ಕುಸಿತ ಉಂಟಾಗಿದೆ. ಗಂಟೆಗೆ 216 ಕಿ.ಮೀ. ವೇಗದಲ್ಲಿ ಚಲಿಸುತ್ತಿರುವ `ರೋಕ್~ ಚಂಡಮಾರುತವು ಈಶಾನ್ಯದ ಕಡೆಗೆ ಸಾಗುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿದೆ.ಫುಕುಶಿಮಾ ಅಣು ಸ್ಥಾವರದತ್ತ ಚಂಡಮಾರುತ ಚಲಿಸುತ್ತಿದ್ದು ಅಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಲಾಗುತ್ತಿದೆ.ಐಚಿ, ಇಹಿಮೆ, ಸಾಗಾ ಮತ್ತು ನಾಗಸಾಕಿ ಪ್ರಾಂತ್ಯಗಳಲ್ಲೂ ಚಂಡಮಾರುತ ತನ್ನ ಪ್ರಭಾವ ಬೀರಿದೆ ಎಂದು `ಕ್ಸಿನ್‌ಹುವಾ~ ಪತ್ರಿಕೆ ವರದಿ ಮಾಡಿದೆ.ಚಂಡಮಾರುತದ ಕಾರಣ ನಾಗೊಯಾ ಪಟ್ಟಣದ ಹತ್ತು ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸುವಂತೆ ಸೂಚಿಸಲಾಗಿದೆ. ಈ ಚಂಡಮಾರುತ ಭಾರಿ ಮಳೆ ಮತ್ತು ನೆರೆ ಹಾವಳಿ ಉಂಟಾಗುವ ಸಾಧ್ಯತೆ ಇದೆ ಎಂದು ಕೈಡೊ ವಾಹಿನಿಯಲ್ಲಿ ವರದಿ ಆಗಿದೆ.200ಕ್ಕೂ ಹೆಚ್ಚು ಸ್ಥಳೀಯ ವಿಮಾನಗಳ ಸಂಚಾರವನ್ನು ರದ್ದು ಮಾಡಲಾಗಿದ್ದು,  ಶಿಂಜೊ ಮತ್ತು ಫುಕುಶಿಮಾ, ಟೋಕಿಯೊ ಮತ್ತು ಶಿನ್-ಒಸಾಕ ನಡುವಿನ ಬುಲೆಟ್ ರೈಲುಗಳ ಸಂಚಾರ ವನ್ನು ಸ್ಥಗಿತಗೊಳಿಸಲಾಗಿದೆ.  ಹಾಗೆಯೇ ದೋಣಿ ಮತ್ತು ಅನೇಕ ಕಡೆ ರಸ್ತೆ ಸಂಚಾರವನ್ನು ರದ್ದು ಮಾಡಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry