ಬುಧವಾರ, ಜೂನ್ 23, 2021
21 °C

ಜಮಖಂಡಿ ನಗರಸಭೆ ಉಳಿತಾಯ ಬಜೆಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮಖಂಡಿ ನಗರಸಭೆ ಉಳಿತಾಯ ಬಜೆಟ್‌

ಜಮಖಂಡಿ: ಸ್ಥಳೀಯ ನಗರಸಭೆಯ ಸಭಾ ಭವನದಲ್ಲಿ ವಿರೋಧ ಪಕ್ಷದ ಸದಸ್ಯರ ಅನುಪಸ್ಥಿತಿಯಲ್ಲಿ ಸೋಮ ವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷ  ಮಂಡಿಸಿದ 2014–15ನೇ ಸಾಲಿನ ನಗರಸಭೆಯ ಬಜೆಟ್‌ನಲ್ಲಿ ₨ 39.17 ಲಕ್ಷ ಉಳಿತಾಯ ನಿರೀಕ್ಷಿಸಲಾಗಿದೆ.ಬಜೆಟ್‌ನಲ್ಲಿ ರಾಜಸ್ವ, ಬಂಡವಾಳ ಹಾಗೂ ಅಸಾಧಾರಣ ಸ್ವೀಕೃತಿ ಸೇರಿ ಅಂದಾಜು ₨ 1870.35 ಲಕ್ಷ ಆದಾಯ ಹಾಗೂ ರಾಜಸ್ವ, ಬಂಡ ವಾಳ ಹಾಗೂ ಅಸಾಧಾರಣ ಪಾವತಿಗಳು ಸೇರಿ ಒಟ್ಟು ಅಂದಾಜು ₨ 1831.18 ಲಕ್ಷ ವೆಚ್ಚಗಳನ್ನು ನಿರೀಕ್ಷಿಸಲಾಗಿದೆ.ನಿರೀಕ್ಷಿತ ಆದಾಯಗಳ ವಿವರಗಳು ಇಂತಿವೆ. ಸಾಮಾನ್ಯ ಆಡಳಿತ ₨572 ಲಕ್ಷ, ನಗರ ಮತ್ತು ಪಟ್ಟಣ ಯೋಜನೆ ₨49 ಲಕ್ಷ, ವ್ಯಾಪಾರ ಪರವಾನಗಿ ₨ 16 ಲಕ್ಷ, ಲೋಕೋಪಯೋಗಿ ಕಾಮಗಾರಿ ₨2 ಲಕ್ಷ, ರಸ್ತೆ ಅಗೆತ ಮತ್ತು ಪುನಃ ಸ್ಥಾಪನೆಯ ಬಳಕೆದಾರರ ಶುಲ್ಕ ₨2 ಲಕ್ಷ, ಜನನ–ಮರಣ ಪ್ರಮಾಣ ಪತ್ರ ₨1 ಲಕ್ಷ, ಇತರೆ ಶುಲ್ಕ ₨0.6 ಲಕ್ಷ, ನೀರು ಸರಬರಾಜು ಅನುದಾನ, ಶುಲ್ಕ ಮತ್ತು ದಂಡ ₨133.25 ಲಕ್ಷ.ನಾಗರಿಕ ಸೌಕರ್ಯಗಳ ಬಳಕೆ ದಾರರ ಶುಲ್ಕ ₨3.10 ಲಕ್ಷ, ಮಾರುಕಟ್ಟೆ ಬಾಡಿಗೆ ₨3 ಲಕ್ಷ, ಕೊಳಚೆ ಪ್ರದೇಶಾಭಿವೃದ್ಧಿ ಉಪಕರಣ ₨1 ಲಕ್ಷ, ಸಾಮಾನ್ಯ ರಾಜಸ್ವಗಳು ₨ 431.80 ಲಕ್ಷ, ಆಸ್ತಿ ತೆರಿಗೆ ರಾಜಸ್ವ ₨163.25 ಲಕ್ಷ, ಜಾಹೀರಾತು ತೆರಿಗೆ ರಾಜಸ್ವ ₨0.6 ಲಕ್ಷ, ನಗರ ಯೋಜನೆಯ ಅನುದಾನ ಮತ್ತು ದೇಣಿಗೆಗಳು ₨ 145 ಲಕ್ಷ, ಠೇವಣಿಗಳು ₨14 ಲಕ್ಷ, ಬಾಕಿ ವಸೂಲಾತಿ₨96.50 ಲಕ್ಷ, ಮುಂಗಡಗಳ ವಾಪಸಾತಿ ₨4.5 ಲಕ್ಷ, ನಿಶ್ಚಿತ ಉದ್ದೇಶಗಳ ಅನುದಾನ, ದೇಣಿಗೆ ₨145 ಲಕ್ಷ ಹಾಗೂ ಆರಂಭಿಕ ಶುಲ್ಕ ₨86.75 ಸೇರಿ ಒಟ್ಟು 1870.35 ಲಕ್ಷ ಆದಾಯ ನಿರೀಕ್ಷಿಸಲಾಗಿದೆ.ನಿರೀಕ್ಷಿತ ವೆಚ್ಚಗಳ ವಿವರಗಳು ಇಂತಿವೆ. ಸಾಮಾನ್ಯ ಆಡಳಿತ ₨356.51 ಲಕ್ಷ, ನಗರಸಭೆಯ ಸದಸ್ಯರ ವೆಚ್ಚಗಳು ₨8.10 ಲಕ್ಷ, ರಸ್ತೆ ದುರಸ್ತಿ ₨49.65 ಲಕ್ಷ, ಬೀದಿ ದೀಪಗಳ ನಿರ್ವಹಣೆ ₨120 ಲಕ್ಷ, ಪ.ಜಾ:ಪ.ಪಂ ಹಾಗೂ ಇತರ ಹಿಂದುಳಿದ ವರ್ಗಗಳ ವೆಚ್ಚ ₨41.08 ಲಕ್ಷ, ಬಡತನ ನಿರ್ಮೂಲನೆ ₨13.09 ಲಕ್ಷ, ಸಾರ್ವಜನಿಕ ಆರೋಗ್ಯ ₨3.25 ಲಕ್ಷ, ಶವಸಂಸ್ಕಾರ ಮತ್ತು ಇತರೆ ₨2ಲಕ್ಷ, ನೈರ್ಮಲ್ಯ ನಿರ್ವಹಣೆ ₨108.90 ಲಕ್ಷ.

ಕುಡಿಯುವ ನೀರು ಸರಬರಾಜು ₨228.10 ಲಕ್ಷ, ಒಳಚರಂಡಿ ವ್ಯವಸ್ಥೆ ₨4ಲಕ್ಷ, ಉದ್ಯಾನವನ ₨25 ಲಕ್ಷ, ಸಾಮಾನ್ಯ ಆಡಳಿತ (ಕಟ್ಟಡ, ವಾಹನ) ₨30ಲಕ್ಷ, ಪಾದಚಾರಿ ಮಾರ್ಗ, ರಸ್ತೆಬದಿ ಚರಂಡಿ ₨175 ಲಕ್ಷ, ಬೀದಿ ದೀಪ ₨35 ಲಕ್ಷ, ಸಣ್ಣ ಸೇತುವೆ ₨35 ಲಕ್ಷ, ಸಾರ್ವಜನಿಕ ಆರೋಗ್ಯ ₨15 ಲಕ್ಷ, ನೈರ್ಮಲ್ಯ ನಿರ್ವಹಣೆ ₨55 ಲಕ್ಷ.ನೀರು ಸರಬರಾಜು ವಿತರಣಾ ವ್ಯವಸ್ಥೆ ₨47 ಲಕ್ಷ, ಒಳಚರಂಡಿ ಮಾರ್ಗ ₨15 ಲಕ್ಷ, ಉದ್ಯಾನವನ ₨60ಲಕ್ಷ, ಹಿಂದುಳಿದ ವರ್ಗಗಳ ಕಲ್ಯಾಣ ₨65 ಲಕ್ಷ, ಕೊಳಗೇರಿ ಅಭಿವೃದ್ಧಿ ₨20ಲಕ್ಷ, ನಿಶ್ಚಿತ ಉದ್ದೇಶಗಳ ಅನುದಾನ ₨145 ಲಕ್ಷ, ಠೇವಣಿಗಳ ವಾಪಸಾತಿ ₨14 ಲಕ್ಷ, ಮಾರಾಟ ತೆರಿಗೆ, ಆದಾಯ ತೆರಿಗೆ, ಕಲ್ಯಾಣ ನಿಧಿ ₨44 ಲಕ್ಷ, ಸರ್ಕಾರಕ್ಕೆ ಪಾವತಿಸ ಬೇಕಾದ ಉಪಕರಣ ₨32 ಲಕ್ಷ, ಹೂಡಿಕೆ ಗಳು ₨60 ಲಕ್ಷ, ಮುಂಗಡಗಳು ₨24.50 ಲಕ್ಷ ಹಾಗೂ ಅಂತಿಮ ಶುಲ್ಕ ₨39.17 ಲಕ್ಷ ಸೇರಿ ಒಟ್ಟು ವೆಚ್ಚ ₨1870.35 ಲಕ್ಷ.ಗೈರು ಹಾಜರು: ನಗರಸಭೆಯಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬಜೆಟ್‌ ಸಿದ್ಧಪಡಿಸಲಾಗಿದೆ. ಕಾರಣ ಬಜೆಟ್‌ ಮಂಡನೆ ಸಭೆಗೆ ಕಾಂಗ್ರೆಸ್‌ ಸದಸ್ಯರು ಗೈರು ಹಾಜರಾಗುವ ಮೂಲಕ ಸಭೆಗೆ ಬಹಿಷ್ಕಾರ ಹಾಕಿರುವುದಾಗಿ ಕಾಂಗ್ರೆಸ್‌ ಸದಸ್ಯರು ಸುದ್ದಿಗಾರರಿಗೆ ತಿಳಿಸಿದರು.ಬೀದಿ ದೀಪ ನಿರ್ವಹಣೆ ಹೊಣೆ ಹೊತ್ತಿರುವ ಸಿಬ್ಬಂದಿ ನಗರಸಭೆ ಸದಸ್ಯ ರೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ ಹಾಗೂ ನಗರದ ಪ್ರಮುಖ ವೃತ್ತಗಳಲ್ಲಿ ಮಟನ್‌ ಮಾರಾಟ ಮಾಡಲಾಗುತ್ತಿದೆ. ಅದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಸದಸ್ಯ ವಿಜಯ ಕಡಕೋಳ ದೂರಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿದರು.ಆಸ್ತಿ ತೆರಿಗೆಯನ್ನು ಶೇ.15 ರಷ್ಟು ಹೆಚ್ಚಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ನಗರಸಭೆ ಅಧ್ಯಕ್ಷೆ ಹಸೀನಾ ಅವಟಿ, ಉಪಾಧ್ಯಕ್ಷ ಪ್ರಕಾಶ ನ್ಯಾಮಗೌಡ, ಸ್ಥಾಯಿ ಸಮಿತಿ ಚೇರಮನ್‌ ರಮೇಶ ಆಲಬಾಳ ಹಾಗೂ ನಗರಸಭೆ ಪೌರಾಯುಕ್ತ ಎಸ್‌.ಬಿ. ಹೊನ್ನಳ್ಳಿ ವೇದಿಕೆಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.