ಜಮಾಬಂದಿ: ಲೆಕ್ಕಪತ್ರ ಮಂಡನೆ

7

ಜಮಾಬಂದಿ: ಲೆಕ್ಕಪತ್ರ ಮಂಡನೆ

Published:
Updated:

ಚಾಮರಾಜನಗರ: ತಾಲ್ಲೂಕಿನ ಕುಲಗಾಣ ಗ್ರಾಮ ಪಂಚಾಯಿತಿಯಲ್ಲಿ ಈಚೆಗೆ ಜಮಾಬಂದಿ ಕಾರ್ಯಕ್ರಮ ನಡೆಯಿತು.ಅಧ್ಯಕ್ಷ ಕೆ.ಎಲ್. ಮಧುಚಂದ್ರ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಜಮಾಬಂದಿ ಕಾರ್ಯಕ್ರಮ ನಡೆಸಲಾಗುತ್ತದೆ. ಒಂದು ವರ್ಷದಲ್ಲಿ ಪಂಚಾಯಿತಿ ವ್ಯಾಪ್ತಿ ಕೈಕೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಾಮರ್ಶೆ ನಡೆಸಲಾಗುವುದು ಎಂದರು.ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಇಂದಿರಾ ಆವಾಸ್ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಲು ಗುಡಿಸಲುರಹಿತರ ಪಟ್ಟಿ ಸಿದ್ಧಪಡಿಸಲಾಗಿದೆ ಎಂದರು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಲು ಪ್ರತಿಯೊಂದು ಕುಟುಂಬಕ್ಕೂ ಜಾಬ್‌ಕಾರ್ಡ್ ಅಗತ್ಯವಿದೆ. ಕೂಲಿ ಕಾರ್ಮಿಕರು ಜಾಬ್‌ಕಾರ್ಡ್‌ಗಳನ್ನು ಪಡೆದುಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೂಸಪ್ಪ, ಪಿಡಿಓ ಮಮತಾ, ಸದಸ್ಯರಾದ ಬಸವರಾಜಪ್ಪ, ಮಹದೇವಪ್ಪ, ಮಹದೇವಯ್ಯ, ನಾಗೇಶ್, ಕೃಷ್ಣ, ನಾಗರಾಜು, ಮುಖಂಡರಾದ ಬಸವಯ್ಯ, ಗೌಡಿಕೆ ಮಹದೇವಪ್ಪ ಹಾಗೂ ನಟರಾಜು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry